ಪುತ್ತೂರು : ಚೆಕ್ ಅಮಾನ್ಯ ಪ್ರಕರಣಕ್ಕೆ ಸಂಬಧಿಸಿದಂತೆ ಆರೋಪಿಯು ದೋಷ ಮುಕ್ತ ಎಂದು ನ್ಯಾಯಾಲಯ ಆದೇಶಿಸಿದೆ.ಸದಾನಂದ ಎಂಬುವವರು ಸುದೇಶ್ ಕೆ ಎಂಬುವವರಿಂದ ಟಿಪ್ಪರ್ ವಾಹನವನ್ನು ಖರೀದಿಸುವರೆ ಆರೋಪಿಯು ಅದರ ಬಾಬ್ತು ಎಗ್ರಿಮೆಂಟ್ ಮಾಡಿಕೊಂಡ ಪ್ರಕಾರ 2011 ರಲ್ಲಿ ರೂಪಾಯಿ 1,20,000/- ಹಣವನ್ನು ಸಾಲವಾಗಿ ಪಡೆದಿದ್ದು, ಸದ್ರಿ ಸಾಲದ ಮರುಪಾವತಿಗಾಗಿ ಒಂದು ಚೆಕ್ಕನ್ನು ನೀಡಿದ್ದು, ಚೆಕ್ಕನ್ನು ಸದ್ರಿ ಹಣದ ಮರುಪಾವತಿಗಾಗಿ 25/09/2014ರ ಬ್ಯಾಂಕ್ ನಲ್ಲಿ ನಗದೀಕರಣಕ್ಕೆ ಸಲ್ಲಿಸಿದಾಗ ಸದ್ರಿ ಚೆಕ್ ಅಮಾನ್ಯವಾಗಿರುತ್ತದೆ ಎಂದು ಅದರಂತೆ ಸುದೇಶ್ ಕೆ ರವರು ಪ್ರಿನ್ಸಿಪಾಲ್ ಸಿವಿಲ್ ಜಡ್ಜ್ ಮತ್ತು ಜೆ ಎಂ ಎಫ್ ಸಿ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿರುತ್ತಾರೆ.ಸದ್ರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದೇಶ್ ಮತ್ತು ಆರೋಪಿಯ ಪರ ಸಾಕ್ಷಿ ವಿಚಾರಣೆ ನಡೆಸಿದ್ದು, ಆರೋಪಿ ಪರ ವಕೀಲರು ಸದರಿ ಪ್ರಕರಣದಲ್ಲಿನ ಸಾಲವು ಅವಧಿಬಾಧಿತವಾಗಿದ್ದು, ಸದ್ರಿ ಹಣವನ್ನು ಯಾವ ಮೂಲದಿಂದ ಪಡೆದು ನೀಡಿದ್ದಾನೆಂದು ಹೇಳಿಕೊಂಡಿಲ್ಲ ಮತ್ತು ಬಹುಮುಖ್ಯವಾಗಿ ಚೆಕ್ಕಿನಲ್ಲಿ ತಿದ್ದುಪಡಿ ಮಾಡಿರುವುದು ಕಂಡು ಬಂದಿರುತ್ತದೆ ಎಂದು ವಾದ ಮಾಡಿರುತ್ತಾರೆ.ಪ್ರಕರಣದಲ್ಲಿ ಪರ ವಾದ ವಿವಾದಗಳನ್ನು ಆಲಿಸಿದ ಪ್ರಿನ್ಸಿಪಾಲ್ ಸಿವಿಲ್ ಜಡ್ಜ್ ಮತ್ತು ಜೆ ಎಂ ಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರಾದ ಅರ್ಚನ ಉಣ್ಣಿತ್ತನ್ ರವರು ಆರೋಪಿಯನ್ನು ಈ ಪ್ರಕರಣದಿಂದ ದೋಷ ಮುಕ್ತನೆಂದು ತೀರ್ಪು ನೀಡಿರುತ್ತಾರೆ.
©2021 Tulunada Surya | Developed by CuriousLabs