ಜಾಗತಿಕ ಬಂಟರ ಸಂಘಗಳ ಒಕ್ಕೂಟಕ್ಕೆ 2022-25 ರ ಅವಧಿಯ ಜೊತೆ ಕಾರ್ಯದರ್ಶಿಯಾಗಿ ಶ್ರೀ ಚಂದ್ರಹಾಸ್ ಡಿ. ಶೆಟ್ಟಿ, ಅಧ್ಯಕ್ಷರು ಬಂಟರ ಸಂಘ ಬಂಟ್ವಾಳ ತಾಲೂಕು ಇವರು ನೇಮಕಗೊಂಡಿದ್ದಾರೆ.
ಶ್ರೀ ಪ್ರವೀಣ್ ಭೋಜ ಶೆಟ್ಟಿಯವರು ಈಗಾಗಲೇ ಒಕ್ಕೂಟದ ಮಹಾ ನಿರ್ದೇಶಕರಾಗಿದ್ದು, ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ಮುಂಬೈನಲ್ಲಿ ನಡೆದ 2022-25ರ ಅವಧಿಯ ಪದಾಧಿಕಾರಿಗಳ ಚುನಾವಣೆ ಪ್ರಕ್ರಿಯೆಯಲ್ಲಿ ಒಕ್ಕೂಟದ ಜೊತೆ-ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದು, ಪ್ರಸ್ತುತ ಅವರು ಉದ್ಯೋಗ ನಿಮಿತ್ತ ನಿರತರಾಗಿದ್ದು ಜೊತೆ-ಕಾರ್ಯದರ್ಶಿ ಹುದ್ದೆ ನಿಭಾಹಿಸಲು ತುಸು ಕಷ್ಟವಾಗಿರುವುದರಿಂದ, ಅವರ ಜೊತೆ-ಕಾರ್ಯದರ್ಶಿ ಹುದ್ದೆಗೆ ಪತ್ರದ ಮೂಲಕ ರಾಜೀನಾಮೆ ಸಲ್ಲಿಸಿದ್ದಾರೆ. ಶ್ರೀ ಪ್ರವೀಣ್ ಭೋಜ ಶೆಟ್ಟಿಯವರ ರಾಜೀನಾಮೆಯನ್ನು ಪರಿಗಣಿಸಿ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿಯವರು ಹಾಗೂ ಪದಾಧಿಕಾರಿಗಳು ಚರ್ಚಿಸಿ 2022-25 ರ ಅವಧಿಗೆ ನೂತನ ಜೊತೆ-ಕಾರ್ಯದರ್ಶಿಯಾಗಿ ಶ್ರೀ ಚಂದ್ರಹಾಸ್ ಡಿ. ಶೆಟ್ಟಿ, ಅಧ್ಯಕ್ಷರು ಬಂಟರ ಸಂಘ ಬಂಟ್ವಾಳ ತಾಲೂಕು ಇವರನ್ನು ಸರ್ವ ಸದಸ್ಯರ ಸರ್ವಾನುಮತದ ಒಪ್ಪಿಗೆಯೊಂದಿಗೆ ದಿನಾಂಕ 04-09-2023 ರಂದು ನಡೆದ ಆಡಳಿತ ಮಂಡಳಿ ಸಭೆಯಲ್ಲಿ ನೇಮಕ ಮಾಡಲಾಯಿತು.