ಸುರತ್ಕಲ್: ಅಪಘಾತ ತಪ್ಪಿಸಲು ಹೋಗಿ ಕಾರೊಂದು ಅಂಗಡಿಯ ಮುಂಭಾಗದ ತಗಡಿನ ಚಪ್ಪರ ಮತ್ತು ಟೆಲಿಫೋನ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಗಾಯಗೊಂಡ ಕಾರು ಚಾಲಕನನ್ನು ಫರಾನ್ ಎಂದು ಗುರುತಿಸಲಾಗಿದೆ. ಮಂಗಳೂರಿನಿಂದ ಉಡುಪಿ ಹೋಗುತ್ತಿದ್ದ ಕಾರು ಸುರತ್ಕಲ್ ಪೇಟೆಯಲ್ಲಿ ಎದುರಿನಲ್ಲಿದ್ದ ಕಾರೊಂದು ಏಕಾಏಕಿ ಟರ್ನ್ ಮಾಡಿದ ಪರಿಣಾಮ ತೀರಾ ಎಡಭಾಗದಿಂದ ಬರುತ್ತಿದ್ದ ಕಾರಿನ ಚಾಲಕ ಫರಾನ್ ಬ್ರೇಕ್ ಹಾಕಿದ್ದಾರೆ. ಈ ವೇಳೆ ಕಾರು ಚಾಲಕನ ನಿಯಂತ್ರಣ ತಪ್ಪಿ ತೀರಾ ಎಡಭಾಗಕ್ಕೆ ತಿರುಗಿ ರಸ್ತೆಯ ಬದಿಯಲ್ಲಿದ್ದ ರಾಘವೇಂದ್ರ ಹೋಟೆಲ್ ನ ಹೊರಭಾಗದಲ್ಲಿ ಅಳವಡಿಸಿದ್ದ ತಗಡಿನ ಚಪ್ಪರಕ್ಕೆ ಡಿಕ್ಕಿಹೊಡೆದು ಬಳಿಕ ಎದುರಿಗಿದ್ದ ಟೆಲಿಫೋನ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದಿಂದ ಕೆಲವು ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿದ್ದು ಸ್ಥಳಕ್ಕೆ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ
©2021 Tulunada Surya | Developed by CuriousLabs