Saturday, July 27, 2024
spot_img
More

    Latest Posts

    ಬಸ್‌, ಟ್ರಕ್‌ ನಡುವೆ ಅಪಘಾತ, 12 ಮಂದಿ ಸಜೀವ ದಹನ..!

    ಮಧ್ಯಪ್ರದೇಶ: ಮಧ್ಯಪ್ರದೇಶದಲ್ಲಿ ಬುಧವಾರ ತಡರಾತ್ರಿ ಖಾಸಗಿ ಬಸ್ ಹಾಗೂ ಡಂಪರ್ ಟ್ರಕ್ ನಡುವೆ ಅಪಘಾತ ಸಂಭವಿಸಿ, 12 ಮಂದಿ ಸಜೀವ ದಹನವಾಗಿದ್ದಾರೆ.

    ಈ ಘಟನೆ ಗುಣ ಜಿಲ್ಲೆಯ ಗುಣ-ಅರೋನ್ ಮಾರ್ಗದಲ್ಲಿ ಸಂಭವಿಸಿದೆ. ಬಸ್ ಹಾಗೂ ಟ್ರಕ್ ನಡುವಿನ ಅಪಘಾತದಲ್ಲಿ ಬಸ್ ಹೊತ್ತಿ ಉರಿದಿದೆ. ಬಸ್ಸಿನಲ್ಲಿದ್ದ 12 ಪ್ರಯಾಣಿಕರು ಸಜೀವ ದಹನಗೊಂಡು, 16 ಜನ ಗಾಯಗೊಂಡಿದ್ದಾರೆ.

    ಗಾಯಾಳುಗಳನ್ನು ಗುಣ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. 5 ಜನರ ಪರಿಸ್ಥಿತಿ ಚಿಂತಾಜನಕವಾಗಿದೆ. ಉಳಿದವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ತರುಣ್ ರಥಿ ತಿಳಿಸಿದ್ದಾರೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss