Saturday, July 27, 2024
spot_img
More

    Latest Posts

    ರಾಜ್ಯ ಸರ್ಕಾರದಿಂದ 11 ಪೋಲಿಸರ ವರ್ಗಾವಣೆಗೆ ಏಕಾಏಕಿ ಬ್ರೇಕ್‌

    ಬೆಂಗಳೂರು: ರಾಜ್ಯ ಸರ್ಕಾರದಿಂದ 211 ಪಿಎಸ್‌ಐ ವರ್ಗಾವಣೆಗೆ ಸಂಬಂಧ ನಿನ್ನೆ ಆದೇಶವನ್ನು ಹೊರಡಿಸಿತ್ತು. ಈ ನಡುವೆ ಆದೇಶದಲ್ಲಿ ಕೆಲ ಪೋಲಿಸರ ವರ್ಗವಣೆಗೆ ಸದ್ಯ ತಡೆ ಹಿಡಿಯಲಾಗಿದೆ ಎನ್ನಲಾಗಿದೆ.ಕೆಲ ದಿನಗಳ ಹಿಂದೆ ಸಿಎಲ್‌ಪಿ ಸಭೆಯಲ್ಲಿ ಶಾಸಕರು ತಮಗೆ ಬೇಕಾಗಿರುವ ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತಿಲ್ಲ ಇದರಿಂದ ನಮಗೆ ಅಧಿಕಾರ ನಡೆಸಲು ಸಾಧ್ಯವಾಗುತ್ತಿಲ್ಲ, ಇದಲ್ಲದೇ ಸಂಬಂಧಪಟ್ಟ ಸಚಿವರಿಗೆ ಈ ಬಗ್ಗೆ ಮನವಿ ಸಲ್ಲಿಸಿದ್ದರು ಕೂಡ ಈ ಬಗ್ಗೆ ಗಮನ ಹರಿಸುತ್ತಿಲ್ಲ, ಇದರಿಂದ ನಮಗೆ ಬೇಸರವಾಗುತ್ತಿದೆ ಅಂತ ಸಿಎಂ ಸಿದ್ದರಾಮಯ್ಯ ಅವರ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದರು,

    ಈ ನಡುವೆ ನಿನ್ನೆ ರಾತ್ರಿ 211 ಪಿಎಸ್‌ಐ ವರ್ಗಾವಣೆಗೆ ಮಾಡಿ ಆದೇಶವನ್ನು ಹೊರಡಿಸಿತ್ತು, ಆದರೆ ಆದೇಶದ ಬೆನ್ನಲ್ಲೇ ಕೆಲವು ಅಧಿಕಾರಿಗಳನ್ನು ವರ್ಗಾವಣೆ ಮಾಡದಂತೆ ಸರ್ಕಾರ ಮುಂದಾಗಿದೆ ಎನ್ನಲಾಗಿದೆ.ಇದರ ಬೆನ್ನಲ್ಲೇ ನಿನ್ನೆ ರಾಜ್ಯದ 211 ಪಿಎಸ್‌ಐಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು.ಆದರೆ ಇಂದು ದಿಡೀರನೆ ಕೆಲ ಪಿಐಗಳ ವರ್ಗಾವಣೆಗೆ ಸರ್ಕಾರ ತಡೆ ನೀಡಿದೆ.

    ಯಶವಂತಪುರ ಟ್ರಾಫಿಕ್ ಸಂಚಾರ ಇನ್‌ಸ್ಪೆಕ್ಟರ್ ರವಿ ಗೌಡ ಬಿ, ಯಶತಪುರ ಲಾ ಅಂಡ್ ಆರ್ಡರ್ ಇನ್‌ಸ್ಪೆಕ್ಟರ್ ಧನಂಜಯ್, ನಂದಿನಿ ಲೇಔಟ್ ಪೊಲೀಸ್ ಲಕ್ಷ್ಮಣ್ ಜೆ, ಜಾನ್ಞಭಾರತಿ ಪೊಲೀಸ್ ಠಾಣೆಯ ಅಶತ್ಥಗೌಡ, ಪೀಣ್ಯ ಪೊಲೀಸ್ ಠಾಣೆಯ ಗೋವಿಂದರಾಜು, ಬೇಗೂರು ಪೊಲೀಸ್ ಠಾಣೆಯ ಕೃಷ್ಣಕುಮಾರ್, ಕೆಎಸ್ ಲೇಔಟ್ ಠಾಣೆಯ ಜಗದೀಶ್, ಕೆಆರ್ ಮಾರ್ಕೆಟ್ ಇನ್‌ಸ್ಪೆಕ್ಟರ್ ವಜ್ರಮುನಿ, ಪುಟ್ಟೇನಹಳ್ಳಿ ಇನ್‌ಸ್ಪೆಕ್ಟರ್ ರವಿಕುಮಾರ್, ಮಲ್ಲೇಶ್ವರಂ ಇನ್‌ಸ್ಪೆಕ್ಟರ್ ಅನಿಲ್‌ಕುಮಾರ್, ಜಿಗಣಿ ಇನ್‌ಸ್ಪೆಕ್ಟರ್ ಎಡ್ವಿನ್ ಪ್ರದೀಪ್ ಅವರ ವರ್ಗಾವಣೆಗೆ ತಡೆ ನೀಡಲಾಗಿದೆ ಎನ್ನಲಾಗಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss