Sunday, September 15, 2024
spot_img
More

    Latest Posts

    ಸುಳ್ಯ : ಚಲಿಸುತ್ತಿದ್ದ ಬಸ್ ಹತ್ತಲು ಯತ್ನಿಸಿ ಬಿದ್ದು ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಸಾವು

    ಸುಳ್ಯ : ಚಲಿಸುತ್ತಿದ್ದ ಬಸ್ ಹತ್ತಲು ಯತ್ನಿಸಿ ವ್ಯಕ್ತಿಯೊಬ್ಬರು ರಸ್ತೆಗೆ ಎಸೆಯಲ್ಪಟ್ಡು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಿಸದೆ ಸಾವನಪ್ಪಿರುವ ಬಗ್ಗೆ ವರದಿಯಾಗಿದೆ‌.

    ಆಲೆಟ್ಟಿ ಗ್ರಾಮದ ಕೂಳಿಯಡ್ಕ ಕರುಣಾಕರ ಮೃತಪಟ್ಟ ದುರ್ದೈವಿ.

    ಸುಳ್ಯ ಆಲೆಟ್ಟಿ ಕ್ರಾಸ್ ಬಳಿ ಆ.7ರ ಶನಿವಾರ ಸಂಜೆ ಖಾಸಗಿ ಬಸ್ ಹತ್ತಲು ಹೋದಾಗ ಬಸ್ಸಿನ ಬಾಗಿಲು ತಳ್ಳಲ್ಪಟ್ಟು ರಸ್ತೆಗೆ ಆಯತಪ್ಪಿ ಬಿದ್ದರೆನ್ನಲಾಗಿದೆ.

    ಈ ಪರಿಣಾಮ ಗಂಭೀರ ಗಾಯಗೊಂಡ ಅವರನ್ನು ಸ್ಥಳೀಯರು ಚಿಕಿತ್ಸೆಗೆ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆ ಬಳಿಕ ಮನೆಯಲ್ಲೇ ಮರುದಿನ ಮುಂಜಾನೆ ಸಮಸ್ಯೆ ಉಲ್ಬಣವಾದ ಹಿನ್ನಲೆಯಲ್ಲಿ ಅವರನ್ನು ಚಿಕಿತ್ಸೆಗಾಗಿ ಮತ್ತೆ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತರಲಾಯಿತು.

    ಅಲ್ಲಿನ ವೈದ್ಯರು ಕರುಣಾಕರ ಅವರನ್ನು ಮಂಗಳೂರಿಗೆ ಕರೆದೊಯ್ಯುಲು ಸೂಚಿಸಿದ್ದು, ಬಳಿಕ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಸಾವನ್ನಪಿರುವುದಾಗಿ ತಿಳಿದು ಬಂದಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss