Sunday, September 15, 2024
spot_img
More

    Latest Posts

    ಮಣಿಪುರ ಘಟನೆ: ಬಿಜೆಪಿ ಮೌನ ಖಂಡಿಸಿ ಜು. 31ರಂದು ಕಾಂಗ್ರೆಸ್ ನಿಂದ ಬೃಹತ್ ಪ್ರತಿಭಟನೆ

    ಮಂಗಳೂರು: ಮಣಿಪುರದಲ್ಲಿ ನಡೆದಿರುವ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣವನ್ನು ಖಂಡಿಸಿ, ಸದನದಲ್ಲಿ ಕೇಂದ್ರ ಸರಕಾರದ ಅಸಹಾರ ಧೋರಣೆ, ಪ್ರಧಾನಿಗಳ ಮೌನ, ಮಣಿಪುರದಲ್ಲಿ ಕೇಂದ್ರ ಸರಕಾರದ ವೈಫಲ್ಯಗಳನ್ನು ಖಂಡಿಸಿ ಜು. 31ರಂದು ಲಾಲ್‌ಭಾಗ್‌ನ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ಹೇಳಿದ್ದಾರೆ.

    ಅವರು ಮಾಜಿ ಶಾಸಕ ಹಾಗೂ ಕೆಪಿಸಿಸಿಯ ಉಪಾಧ್ಯಕ್ಷ ಐವನ್ ಡಿಸೋಜ, ಮಾಜಿ ಶಾಸಕರಾದ ಜೆ ಆರ್ ಲೋಬೋ ರವರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಮಣಿಪುರದಲ್ಲಿ ವಿರೋಧ ಪಕ್ಷದವರಿಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ.

    ಅಗತ್ಯ ವಿಚಾರಗಳ ಬಗ್ಗೆ ಚರ್ಚೆ ಮಾಡಲು ಸಂವಿಧಾನದಲ್ಲಿ ಅವಕಾಶ ಇದ್ದರೂ ಅವಕಾಶ ನಿರಾಕರಿಸಲಾಗಿದೆ.

    ದೇಶದಾದ್ಯಂತ ವ್ಯಾಪಕ ಪ್ರತಿಭಟನೆ ನಡೆಯುತ್ತಿದೆ. ಪ್ರಧಾನಿ ಮಣಿಪುರದ ವಿಚಾರವನ್ನೇ ಮರೆತಿದ್ದಾರೆ.

    ಮಣಿಪುರದ ಗಲಭೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾತನಾಡುತ್ತಲೇ ಇಲ್ಲ ಎಂದರು.

    ಸಬ್‌ಕಾ ಸಾಥ್‌ ಸಬ್‌ ಕಾ ವಿಕಾಸ್ ಎಲ್ಲಿ ಹೋಗಿದೆ. ಮಣಿಪುರವನ್ನು ಸರಕಾರ ಏಕೆ ಕಡೆಗಣಿಸಿದೆ ಎಂದು ಪ್ರಶ್ನಿಸಿದರು.

    ಮಣಿಪುರದ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಗಲಭೆ ನಿಯಂತ್ರಿಸಬೇಕು.

    ಉಕ್ರೇನ್ ಯುದ್ಧದ ಬಗ್ಗೆ ಪಿಎಂ ಇಂಟರ್ ಫಿಯರ್ ಮಾಡ್ತಾರೆ. ಆದರೆ ನಮ್ಮ ರಾಜ್ಯದ ಗಲಭೆ ಬಗ್ಗೆ ಯಾಕೆ ಕ್ರಮ ಇಲ್ಲ ? ಎಂದು ಪ್ರಶ್ನಿಸಿದರು.

    ಮಣಿಪುರ ಪ್ರಕರಣ ಮುಚ್ಚಿಹಾಕಲು ಉಡುಪಿಯ ವಿಡಿಯೋ ಪ್ರಕರಣದಲ್ಲಿ ಬಿಜೆಪಿ ಗಲಭೆ ಎಬ್ಬಿಸುತ್ತಿದೆ.

    ಹಿಜಾಬ್ ಖ್ಯಾತಿಯ ಉಡುಪಿ ಶಾಸಕ ಸಮಾಜದಲ್ಲಿ ಅಶಾಂತಿ ಸೃಷ್ಟಿ ಮಾಡ್ತಿದ್ದಾರೆ, ಮಣಿಪುರದ ಬೆತ್ತಲೆ ಪ್ರಕರಣದ ಬಗ್ಗೆ ಈ ಶಾಸಕರು ಏಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.

    ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಎಬಿವಿಪಿಯವರು ದಲಿತ ಹೆಣ್ಮಕ್ಕಳನ್ನು ಅತ್ಯಾಚಾರ ಮಾಡಿ ದಾರಿಯಲ್ಲಿ ಎಸೆದು ಹೋದ ಸಂಧರ್ಭದಲ್ಲಿ ಬಿಜೆಪಿಯವರು ಮಾತನಾಡಿಲ್ಲ.

    ನಳಿನ್‌ ಕುಮಾರ್ ಕಟೀಲು, ಶೋಭಾ, ಡಿ ವಿ ಸದಾನಂದ ಏಕೆ ಮಾತನಾಡಿಲ್ಲ ಎಂದು ಪ್ರಶ್ನಿಸಿದರು.

    ಇಂಥ ಪರಿಸ್ಥಿತಿಯಲ್ಲಿ ಬಿಜೆಪಿಯವರ ಮನೋಭಾವ ಖಂಡನೀಯ. ದೇಶದ ಬಗ್ಗೆ ಇವರಿಗೆ ಚಿಂತನೆ ಇಲ್ಲ.ಶೋಭಾಕ್ಕನ ಬಾಯಲ್ಲಿ ಲವ್ ಜಿಹಾದ್ ಬಗ್ಗೆ ಅವರಿಗೆ ಆಸಕ್ತಿಯೆ ಹೊರತು ಮಹಿಳಾ ರಕ್ಷಣೆ ಬಗ್ಗೆ ಚಿಂತನೆ ಇಲ್ಲ ಎಂದರು.
    ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕರಾದ ನವೀನ್ ಡಿಸೋಜ, ಮಾಜಿ ಮೇಯರ್ ಅಶ್ರಫ್, ಮಾಜಿ ಉಪಮೇಯರ್ ಮೊಹಮ್ಮದ್, ಮಾಜಿ ಕಾರ್ಪೊರೇಟರ್ ಭಾಸ್ಕರ್ ರಾವ್, ಶುಭೋದಯ ಆಳ್ವ,ಮನುರಾಜ್, ಸತೀಶ್ ಪೆನ್ಗಳ್, ಮನೀಶ್ ಬೋಲಾರ್, ಟಿ ಕೆ ಸುದೀರ್,ವಿಕಾಸ್ ಹಾಗೂ ಇತರರು ಉಪಸ್ಥಿತರಿದ್ದರು

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss