ಮಂಗಳೂರು: ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷರಾದ ಯೋಗೀಶ್ ಶೆಟ್ಟಿ ಜಪ್ಪುರವರ ಹುಟ್ಟು ಹಬ್ಬದ ಅಂಗವಾಗಿ ಇಂದು ಮಂಗಳೂರು ಯುವ ಘಟಕ ವತಿಯಿಂದ ದಿನಾಂಕ 28-10-2023 ರಂದು ಬೆಳ್ಳಗೆ 10.00 ಗಂಟೆಗೆ ಲೇಡಿಗೋಷನ್ ಆಸ್ಪತ್ರೆ ಯ ಆವರಣದಲ್ಲಿರುವ ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್ ಕೇಂದ್ರದಲ್ಲಿ ರಕ್ತದಾನ ಶಿಬಿರ ನಡೆಯಿತು.
ಅ.29 ರಂದು ಮಂಗಳೂರು ನಗರ ಘಟಕ ವತಿಯಿಂದ ಬೆಳ್ಳಗೆ 8.00 ಗಂಟೆಗೆ ಬಿಜೈ ಸ್ನೇಹದೀಪ ಆಶ್ರಮದ ಮಕ್ಕಳಿಗೆ ಬೆಳಗ್ಗಿನ ಉಪಹಾರ ಹಾಗೂ ಹಣ್ಣು ಹಂಪಲು ವಿತರಣೆ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮದಲ್ಲಿ ಶರಣರಾಜ್ ಕೆ ಆರ್, ಹರೀಶ್ ಶೆಟ್ಟಿ ಶಕ್ತಿ ನಗರ, ರಾಘವೇಂದ್ರ, ಪ್ರಶಾಂತ್ ಭಟ್ ಕಡಬ ಉಪಸ್ಥಿತರಿದ್ದರು.
ಅದೇ ದಿನ ಕಾಪು ತಾಲೂಕು ಮಹಿಳಾ ಘಟಕದ ವತಿಯಿಂದ ಮದ್ಯಹ್ನ ಗಂಟೆ 10.00 ಕ್ಕೆ ಪಂಚನ ಬೆಟ್ಟು ವಿದ್ಯಾವರ್ಧಕ ಪ್ರೌಢ ಶಾಲೆಗೆ ಅಕ್ಕಿ ಹಾಗೂ ದಿನ ಬಳಕೆ ಸಾಮಾಗ್ರಿಗಳನ್ನು ಮತ್ತು ಸಿಹಿತಿಂಡಿ ವಿತರಣಾ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಎ. ನರಸಿಂಹ, ಕಾರ್ಯದರ್ಶಿ ಅಶೋಕ್ ಆಚಾರ್ಯ, ಸಮಿತಿ ಸದಸ್ಯರಾದ ಶ್ರೀಧರ್ ಆಚಾರ್ಯ, ಸಂತೋಷ್ ಕುಲಾಲ್, ಸಂತೋಷ್ ನಾಯ್ಕ್, ರವೀಂದ್ರ ಉಪಸ್ಥಿತರಿದ್ದರು.
ಉಡುಪಿ ತಾಲೂಕು ಘಟಕದ ವತಿಯಿಂದ ಮದ್ಯಹ್ನ ಗಂಟೆ 10.00 ಕ್ಕೆ ಉಪ್ಪೂರು ಸ್ಪಂದನ ವಿಶೇಷ ಚೇತನರ ಶಾಲೆ ಸಾಲ್ಮರ ಇಲ್ಲಿಗೆ ಹಣ್ಣು ಹಂಪಲು ಮತ್ತು ಕೇಕ್ ವಿತರಣಾ ಕಾರ್ಯಕ್ರಮ, ನಂತರ ಉಡುಪಿ ಜಿಲ್ಲೆ ವತಿಯಿಂದ ಮದ್ಯಹ್ನ 1.00 ಗಂಟೆಗೆ ಸ್ಥಾಪಕಾಧ್ಯಕ್ಷರಾದ ಯೋಗೀಶ್ ಶೆಟ್ಟಿ ಜಪ್ಪು ರವರ ಉಪಸ್ಥಿತಿಯಲ್ಲಿ ಹುಟ್ಟು ಹಬ್ಬ ಆಚರಣೆ ಉಡುಪಿ ಜಿಲ್ಲಾ ಕಚೇರಿ ಕ್ಲಾಸಿಕ್ ಕಾಂಪ್ಲೆಕ್ಸ್ ನಲ್ಲಿ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪಂಚನ ಬೆಟ್ಟು ವಿದ್ಯಾವರ್ಧಕ ಶಾಲೆಯ ಅಧ್ಯಕ್ಷರು, ಪಂಚನ ಬೆಟ್ಟು ವಿದ್ಯಾವರ್ಧಕ ಶಾಲೆಯ ಕಾರ್ಯದರ್ಶಿ ಮತ್ತು ಪ್ರ್ಯಾಂಕಿ ಡಿ ಸೋಜಾ ಕೊಳಲಗಿರಿ,ಕೃಷ್ಣ ಕುಮಾರ್, ಅನಸೊಯ, ಶೋಭಾ ಪಾಂಗಳ, ಜಯರಾಮ ಪೂಜಾರಿ, ನಾಗಲಕ್ಷ್ಮಿ, ಗಣೇಶ್ ಮಲ್ಯ, ಸುಧಾಕರ ಅಮೀನ್, ಗುಣವತಿ ಮತ್ತಿತರರು ಉಪಸ್ಥಿತರಿದ್ದರು.
ನಂತರ ಸಂಜೆ 5.30 ಕ್ಕೆ ತುಳುನಾಡ ರಕ್ಷಣಾ ವೇದಿಕೆ ವಿವಿಧ ಘಟಕಗಳ ವತಿಯಿಂದ ಸ್ಥಾಪಕಾಧ್ಯಕ್ಷರಾದ ಯೋಗೀಶ್ ಶೆಟ್ಟಿ ಉಪಸ್ಥಿತಿಯಲ್ಲಿ ಜಪ್ಪು ಮಾರುಕಟ್ಟೆ ಬಳಿ ಇರುವ ಭಗಿನಿ ಸಮಾಜ ಶಿಶು ನಿಲಯದ ಮಕ್ಕಳಿಗೆ ಉಪಹಾರ ಮತ್ತು ಸಿಹಿ ತಿಂಡಿ ವಿತರಣೆ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಪ್ರಶಾಂತ್ ಅಂಚನ್, ಪ್ರಶಾಂತ್ ಭಟ್ ಕಡಬ, ಜ್ಯೋತಿ ಜೈನ್, ಶರಣ್ ರಾಜ್ ಕೆ ಆರ್, ಶಾರದಾ ಶೆಟ್ಟಿ, ಹರೀಶ್ ಶೆಟ್ಟಿ ಶಕ್ತಿ ನಗರ, ಶ್ರೀನಿವಾಸ್ ಶೆಟ್ಟಿ, ಕಾಮಾಕ್ಷಿ, ಫಾರೂಕ್ ಗೋಲ್ಡನ್, ಅಬ್ದುಲ್ ಆಜೀಜ್ ಉಪಸ್ಥಿತರಿದ್ದರು.