ಮಂಗಳೂರು: ಕಳೆದ 8 ವರ್ಷಗಳಿಂದ ಕ್ರಿಸ್ ಮಸ್,ದೀಪಾವಳಿ ಹಾಗೂ ರಂಜಾನ್ ಹಬ್ಬಗಳನ್ನು ಸಾರ್ವಜನಿಕವಾಗಿ ಆಚರಿಸುತ್ತಾ ಬಂದಿರುವ ಐವನ್ ಡಿಸೋಜ ರವರ ನೇತೃತ್ವದಲ್ಲಿ 9 ನೇ ವರ್ಷದ ಭಾವೈಕ್ಯತಾ ಸಂಗಮ ನವೆಂಬರ್ 12 ರಂದು ಸಂಜೆ 4ಗಂಟೆಗೆ ಕದ್ರಿ ಪಾರ್ಕ್ ಸ್ವರ್ಣ ಕಲಾ ಮಂಟಪದಲ್ಲಿ ನಡೆಯಲಿದೆ.
ಮೂಡಬಿದಿರೆ ಸಂದೀಪನಿ ಕೇಮಾರು ಮಠದ ಶ್ರೀ ಶ್ರೀ ಈಶ ವಿಠಲದಾಸ ಸ್ವಾಮೀಜಿಯವರು ಕಾರ್ಯಕ್ರಮಕ್ಕೆ ದೀಪ ಪ್ರಜ್ವಲಿಸಿ,ಆಶೀರ್ವಚನ ನೀಡಲಿದ್ದಾರೆ.
ರಿಚರ್ಡ್ ವಿನ್ಸೆಂಟ್ ಡಿಸೋಜ IAS, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್,ಮಂಗಳೂರು ಪೊಲೀಸ್ ಕಮೀಷನರ್ ಅನುಪಮ್ ಅಗರ್ ವಾಲ್,ದ.ಕ ಜಿಲ್ಲಾ ಪಂಚಾಯತ್ ಸಿಇಓ ಆನಂದ್ ಕೆ ಇವರು ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ ಉಪಸ್ಥಿತರಿರುವರು.
ಕಾರ್ಯಕ್ರಮದಲ್ಲಿ ಚಿತ್ರಕಲಾ ಸ್ಫರ್ಧೆ,ಗೂಡುದೀಪ ಸ್ಫರ್ಧೆ,ಕುಣಿತ ತಂಡಗಳ ನಡುವಿನ ಭಜನಾ ಸ್ಫರ್ಧೆಯನ್ನು ಆಯೋಜಿಸಲಾಗಿದೆ.