ಉಳ್ಳಾಲ: 23ನೇ ವರ್ಷಕ್ಕೆ ದೇಶಕ್ಕಾಗಿ ಪ್ರಾಣ ಬಲಿದಾನಗೈದ ಭಗತ್ ಸಿಂಗ್ ಹೆಸರಿನಲ್ಲಿ ಸಮಾಜ ಕಾರ್ಯದಲ್ಲಿ ತೊಡಗಿಕೊಂಡಿರುವ ಭಗತ್ ಸಿಂಗ್ ಪ್ರತಿಷ್ಠಾನದ ಕಾರ್ಯ ಶ್ಲಾಘನೀಯ ಎಂದು ನಿವೃತ್ತ ಸೇನಾನಿ,ಧಾರ್ಮಿಕ ಪರಿಷತ್ತು ಮಾಜಿ ಸದಸ್ಯ ಕಾಂಗ್ರೆಸ್ ಮುಖಂಡ ಪಿ. ಕೃಷ್ಣಗಟ್ಟಿ ಅಭಿಪ್ರಾಯ ಪಟ್ಟರು. ಅವರು ಕೊಲ್ಯ ಅಡ್ಕ್ ದಲ್ಲಿರುವ ತಮ್ಮ ನಿವಾಸದಲ್ಲಿ ಭಗತ್ ಸಿಂಗ್ ಸೇವಾ ಪ್ರತಿಷ್ಠಾನ ಉಳ್ಳಾಲ ಆಶ್ರಯದಲ್ಲಿ ಗುರು ಪೂರ್ಣಿಮೆ ಪ್ರಯುಕ್ತ ಹಮ್ಮಿಕೊಂಡ ಗುರುವಂದನೆಯನ್ನು ಸ್ವೀಕರಿಸಿ ಮಾತನಾಡಿದರು. ಕಷ್ಟದ ದಿನಗಳಲ್ಲಿ ದೇಶ ಸೇವೆಯನ್ನು ನಡೆಸಿ ನಿವೃತ್ತ ಹೊಂದಿದ ನಂತರವೂ ಸಾಮಾಜಿಕ ಧಾರ್ಮಿಕವಾಗಿ ತೊಡಗಿಸಿಕೊಳ್ಳಲು ಜನರಿಗೆ ಪ್ರೇರಣೆ ನೀಡಿ ಸಮಾಜದಲ್ಲಿರುವ ದುರ್ಬಲರಿಗೆ ಶಕ್ತಿಯಾಗಿರುವ ನೆಮ್ಮದಿ ಇದೆ.

ಭಗತ್ ಸಿಂಗ್ ಸೇವಾ ಪ್ರತಿಷ್ಠಾನ ಹಲವು ವರ್ಷಗಳಿಂದ ಸಾಮಾಜಿಕವಾಗಿ ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳುವ ಮೂಲಕ ಮಾದರಿಯಾಗಿದೆ ಎಂದು ಅರ್ಥ ಪತ್ರಕರ್ತ ಹೊಸ ಕುರಲ್ ಟಿವಿ ವಾಹಿನಿಯ ವಿದ್ಯಾಧರ್ ಶೆಟ್ಟಿಯವರು ಅಭಿನಂದನಾ ಮಾತುಗಳನ್ನಾಡಿದರು.

ಪ್ರತಿಷ್ಠಾನದ ಗೌರವ ಸಲಹೆಗಾರ ಆನಂದ ಕೆ. ಅಸೈಗೋಳಿ ಗೌರವಾಧ್ಯಕ್ಷ ರಾಕೇಶ್ ಕುಮಾರ್ ಉಪಾಧ್ಯಕ್ಷರಾದ ಮಾದವ ಉಳ್ಳಾಲ್, ಗೋಪಿನಾಥ್ ಬಗಂಬಿಲ, ಕೋಶಾಧಿಕಾರಿ ಹರೀಶ್ ಆಂಬ್ಲಮೊಗರು, ಗುರುವಂದನೆ ಸಂಚಾಲಕ ರಾಜೇಂದ್ರ ಸೇವಂತಿಗುಡ್ಡೆ, ವೃಕ್ಷಾಂಕುರ ರಕ್ಷಾ ಸಂಚಾಲಕ ಪ್ರಸಾದ್ ಕೊಂಡಣ, ಪ್ರಮುಖರಾದ ಮೋಹನ್ ಸಾಲ್ಯಾನ್, ದಾಮೋದರ್ ನಡಾರ್, ಗಂಗಾಧರ ಆಂಬ್ಲಮೊಗರು, ಲಕ್ಷ್ಮಿ ನಾರಾಯಣ , ದೀಕ್ಷಿತ್ ನಿಸರ್ಗ, ಚಂದ್ರಶೇಖರ್ ಕೊಲ್ಯ, ರಾಧಾಕಾಂತ್ ಪಡಿಯಾರ್ ವಿಶ್ವನಾಥ್ ಎಲ್ಯಾರ್ ಪದವು, ಜೀವನ್ ಸೋಮೇಶ್ವರ ಉಪಸ್ಥಿತರಿದ್ದರು.
ಪ್ರತಿಷ್ಠಾನದ ಅಧ್ಯಕ್ಷ ಜೀವನ್ ಕುಮಾರ್ ಪ್ರಸ್ತಾವನೆ ಗೈದರು. ಪ್ರಧಾನ ಕಾರ್ಯದರ್ಶಿ ಗಣೇಶ್ ಕಾಪಿಕಾಡ್ ಗುರುವಂದನ ಪತ್ರ ವಾಚಿಸಿದರು ಕಾರ್ಯದರ್ಶಿ ಕಿರಣ್ ಕೊಲ್ಯ ವಂದಿಸಿದರು ಉಪಾಧ್ಯಕ್ಷ ಪ್ರವೀಣ್ ಬಸ್ತಿ ಕಾರ್ಯಕ್ರಮ ನಿರೂಪಿಸಿದರು.
