ಮಂಗಳೂರು: ಬೆಂದೂರ್ ವೆಲ್ ಸರ್ಕಲ್ ನಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಬಸ್ ಬಡಿದಿದ್ದು ಮಹಿಳೆ ಸ್ಥಳದಲ್ಲೇ ಒದ್ದಾಡಿ ಪ್ರಾಣ ಬಿಟ್ಟಿದ್ದು ಘಟನೆ ನಡೆದಿದೆ.
ಬಸ್ ಪತ್ತೆ ಹಚ್ಚಲು ಪೊಲೀಸರು ಸಿಸಿ ಟಿವಿ ಪರಿಶೀಲನೆ ನಡೆಸುತ್ತಿದ್ದಾರೆ. ಮೃತ ಪಟ್ಟ ಮಹಿಳೆ ಗುರುತು ಪತ್ತೆಯಾಗಿಲ್ಲ. ಖಾಸಗಿ ಬಸ್ ನ ಧಾವಂತಕ್ಕೆ ಒಂದು ವಾರದ ನಡುವೆ ಎರಡನೇ ಘಟನೆ ಇದಾಗಿದೆ.

ಮಂಗಳೂರು ನಗರದಲ್ಲಿ ಬಸ್ ಗಳ ಮೇಲಾಟ ದಿನೇ ದಿನೇ ಜಾಸ್ತಿಯಾಗುತ್ತಿದ್ದು ಕಿಲ್ಲರ್ ಬಸ್ ಗಳ ಧಾವಂತಕ್ಕೆ ಅಮಾಯಕರು ಬಲಿಯಾಗುತ್ತಿದ್ದಾರೆ. ನಗರದ ಬೆಂದೂರು ಬಳಿ ಮೊನ್ನೆ ತಾನೆ ತಾಯಿ- ಮಗು ಪ್ರಯಾಣಿಸುತ್ತಿದ್ದ ಸ್ಕೂಟಿ ಮೇಲೆ ಬಸ್ ಹರಿದು ಮಗು ದಾರುಣವಾಗಿ ಮೃತಪಟ್ಟ ಸ್ಥಳದಲ್ಲೇ ಇಂದು ಮದ್ಯಾಹ್ನ ಮತ್ತೊಂದು ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಸಂಚಾರಿ ಎಸಿಪಿ ಮತ್ತಿತರ ಅಧಿಕಾರಿಗಳು ಭೇಟಿ ನೀಡಿದ್ದು, ಈ ಸಂದರ್ಭ ಸಾರ್ವಜನಿಕರು ಪೋಲಿಸರನ್ನ ತರಾಟೆಗೆ ತಗೊಂಡಿದ್ದಾರೆ.