Saturday, April 20, 2024
spot_img
More

  Latest Posts

  ಬೆಳ್ಳಾರೆ: ಅಪ್ಪ – ಮಗನ ಹೊಡೆದಾಟ, ಗಾಯಾಳು ತಂದೆ ಚಿಕಿತ್ಸೆ ಫಲಿಸದೆ ಮೃತ್ಯು

  ಬೆಳ್ಳಾರೆ: ತ೦ದೆ – ಮಗನ ಹೊಡೆದಾಟದಲ್ಲಿಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಂದೆ ಮೃತಪಟ್ಟ ಘಟನೆ ನಡೆದಿದೆ.

  ಅಮರಮುಡ್ಡೂರು ಗ್ರಾಮದ ಕುಕ್ಕುಜಡ್ಕದಲ್ಲಿ ಕಳೆದ ಒಂದು ವಾರದ ಹಿಂದೆ ಘಟನೆ ನಡೆದಿದ್ದು ಕಿಟ್ಟು ಹಾಗೂ ಮಗ ಹರ್ಷಿತ್‌ ಹೊಡೆದಾಟ ನಡೆಸಿಕೊಂಡಿದ್ದರು.ಹಳೆಯ ದ್ವೇಷದ ಕಾರಣದಿಂದ ಕಿಟ್ಟುರವರ ಮೊದಲನೆ ಹೆ೦ಡತಿಯ ಮಗ ಹರ್ಷಿತ್‌ ಎಂಬಾತ ಮನೆಗೆ ಬ೦ದು ಅಡಿಕೆ ಮರದಸಲಾಕೆಯಿಂದ ತಂದೆಗೆ ಹೊಡೆದಿದ್ದ.

  ಗಾಯಗೊಂಡಿದ್ದ ಕಿಟ್ಟುರವರನ್ನು ಆಂಬ್ಯುಲೆನ್ಸ್‌ ಮೂಲಕ ಸುಳ್ಯ ಸರಕಾರಿ ಆಸ್ಪತ್ರೆಗೆಕರೆದುಕೊಂಡು ಬಂದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಸಾಕ್‌ ಆಸ್ಪತ್ರೆಗೆದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ನಿತ್ಯಾನ೦ದರವರು ದೂರು ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

  spot_img
  spot_img

  Latest Posts

  spot_imgspot_img
  spot_imgspot_img
  spot_img

  Don't Miss