Thursday, October 31, 2024
spot_img
More

    Latest Posts

    ಜು.23 : ಯುವ ಬಂಟರ ಸಂಘದ ವತಿಯಿಂದ “ತುಳುನಾಡ ಬಂಟರ ಪರ್ಬ-2023” : ಆಮಂತ್ರಣ ಪತ್ರಿಕೆ ಬಿಡುಗಡೆ

    ಪುತ್ತೂರು: ಪುತ್ತೂರು ತಾಲೂಕು ಯುವ ಬಂಟರ ಸಂಘದ ಆಶ್ರಯದಲ್ಲಿ ಜು.23 ಭಾನುವಾರ ಯುವ ಬಂಟರ ದಿನಾಚರಣೆ ಅಂಗವಾಗಿ ನಡೆಯುವ “ತುಳುನಾಡ ಬಂಟರ ಪರ್ಬ-2023” ರ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಮಂಗಳವಾರ ಸಂಜೆ ಬಂಟರ ಭವನದಲ್ಲಿ ನಡೆಯಿತು.

    ಬಂಟರ ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು, ಪುತ್ತೂರು ತಾಲೂಕು ಸಮಿತಿ, ಪುತ್ತೂರು ಬಂಟರ ಸಂಘ, ಮಹಿಳಾ ಬಂಟರ ಸಂಘ ಹಾಗೂ ವಿದ್ಯಾರ್ಥಿ ಬಂಟರ ಸಂಘದ ಸಹಕಾರದೊಂದಿಗೆ ಕಾರ್ಯಕ್ರಮ ನಡೆಯಲಿದ್ದು, ಬಂಟರ ಸಂಘದ ಕರುಣಾಕರ ರೈ ದೇರ್ಲಗುತ್ತು ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಶುಭ ಹಾರೈಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಬಂಟರ ಸಂಘದ ಮಾಜಿ ಅಧ್ಯಕ್ಷ ಸವಣೂರು ಸೀತಾರಾಮ ರೈ, ಸಂಚಾಲಕ ದಯಾನಂದ ರೈ ಮನವಳಕೆಗುತ್ತು, ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಮಾತೃ ಸಂಘದ ಕಾವು ಹೇಮನಾಥ ಶೆಟ್ಟಿ, ಕಾರ್ಯಕ್ರಮದ ಯಶಸ್ಸಿಗೆ ಶುಭ ಹಾರೈಸಿದರು.

    ಬಂಟರ ಪರ್ಬ-2023 ಕಾರ್ಯಕ್ರಮದ ಸಂಚಾಲಕ ಭಾಗ್ಯೇಶ್ ರೈ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮದಲ್ಲಿ ಉಡುಪಿ, ಕಾಸರಗೋಡು, ದ.ಕ. ಜಿಲ್ಲೆಯಿಂದ 20 ಮಂದಿಯನ್ಒಳಗೊಂಡ ಎಂಟು ತಂಡ ಆಗಮಿಸಲಿದ್ದು, ಅವರಿಗೆ ಬೆಳಿಗ್ಗೆ 8 ರಿಂದ ಸಂಜೆ 5 ಗಂಟೆ ತನಕ ನಿರಂತರ ವಿವಿಧ ಸ್ಪರ್ಧಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಫ್ಯಾಶನ್ ಶೋ, ಫಿಲ್ಮ್  ಡ್ಯಾನ್ಸ್, ಸೋಲೋ ಡ್ಯಾನ್ಸ್, ಕ್ಲಾಸಿಕಲ್ ಡ್ಯಾನ್ಸ್ ಈವೆಂಟ್ ಗಳನ್ನು ಆಯೋಜಿಸಲಾಗಿದೆ. ಅಲ್ಲದೆ ಈ ಸಂದರ್ಭದಲ್ಲಿ ಆಗಮಿಸುವ ಅತಿಥಿಗಳಿಗೆ ಮಾತನಾಡುವ ಅವಕಾಶ ನೀಡಲಾಗುವುದು ಎಂದು ತಿಳಿಸಿದ ಅವರು, ವಿಶೇಷವಾಗಿ ಬಂಟ ಸ್ಮೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ನಿವೃತ್ತ ತಹಶೀಲ್ದಾರ್ ಚಿಲ್ಮೆತ್ತಾರು ಕೋಚಣ್ಣ ರೈ, ನಿವೃತ್ತ ಪ್ರಾಧ್ಯಾಪಕ ಡಾ.ಮುಂಡಾಳಗುತ್ತು ತಿಮ್ಮಪ್ಪ ರೈ, ಹಾಗೂ ಜಯಕರ್ನಾಟಕ ಸಂಘಟನೆ ಸಂಸ್ಥಾಪಕ ಎನ್.ಮುತ್ತಪ್ಪ ರೈ ಅವರ ಸಂಸ್ಮರಣೆ ನಡೆಯಲಿದೆ ಎಂದು ಸಂಪೂರ್ಣ ಕಾರ್ಯಕ್ರಮದ ರೂಪುರೇಷೆಗಳನ್ನು ನೀಡಿದರು.

    ವೇದಿಕೆಯಲ್ಲಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪವನ್ ಶೆಟ್ಟಿ ಕಂಬಳತ್ತಡ್ಡ, ಸಾಜ ರಾಧಾಕೃಷ್ಣ ಆಳ್ವ, ಅಶೋಕ್ ಶೆಟ್ಟಿ, , ಮಹಿಳಾ ಸಂಘದ ಅಧ್ಯಕ್ಷೆ ಸಬಿತಾ ಭಂಡಾರಿ, ರಂಜಿನಿ ಶೆಟ್ಟಿ, ಯಶುಭ ರೈ ಉಪಸ್ಥಿತರಿದ್ದರು.

    ಯುವ ಬಂಟರ ಸಂಘದ ಅಧ್ಯಕ್ಷ ಮುಂಡಾಳಗುತ್ತು ಶಶಿರಾಜ್ ರೈ ಸ್ವಾಗತಿಸಿದರು. ಸಂಯೋಜಕ ಮನ್ಮಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss