- ಸೇವಾ ಸಂಕಲ್ಪ ಅಭಿಯಾನಕ್ಕೆ ಮಾದರಿ ಹೆಜ್ಜೆ ಕುಲಶೇಖರ ಕಲ್ಪನೆ ಪರಿಸರದಲ್ಲಿ ನವೀಕೃತ ಬಸ್ ನಿಲ್ದಾಣ ಉದ್ಘಾಟನೆ
- ಮಾಡೂರು ಶ್ರೀ ಶಿವ ದುರ್ಗಾಂಬಾ ಮಠದಲ್ಲಿ ಅ.15ರಿಂದ ನವರಾತ್ರಿ ಮಹೋತ್ಸವ ವಿಶೇಷ ಪೂಜೆ, ಗಣಹೋಮ, ಮಹಾ ಚಂಡಿಕಾಯಾಗ, ಅಖಂಡ ಭಜನೆ ಹಾಗೂ ಅನ್ನಸಂತರ್ಪಣೆ
- ಗಾಂಧಿ ಜಯಂತಿ ಅಂಗವಾಗಿ ಉಡುಪಿಯಲ್ಲಿ ತುಳುನಾಡ ರಕ್ಷಣಾ ವೇದಿಕೆಯಿಂದ ವಿಶೇಷ ಕಾರ್ಯಕ್ರಮ ಗಾಂಧೀಜಿ ತತ್ವಗಳನ್ನು ಸ್ಮರಿಸಿ ತಾಯಿ–ಮಕ್ಕಳ ಆಸ್ಪತ್ರೆಯಲ್ಲಿ ಹಣ್ಣುಹಂಪಲು ವಿತರಣೆ
- ಅ.5ರಂದು ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘದಿಂದ ಬೆಂಗಳೂರಿನಲ್ಲಿ ಶಾಂತಿಯುತ ಪ್ರತಿಭಟನೆ
- MRPL ಸ್ಫೋಟ ಪ್ರಕರಣ: ನಿರ್ಲಕ್ಷ್ಯದ ಆರೋಪದಡಿ FIR ಗಂಭೀರ ಗಾಯಗೊಂಡ ಕಾರ್ಮಿಕ ಮನೀಶ್ ಕರ್ಕಡ ಸಾವು; ಸುತ್ತಮುತ್ತ 54 ಮನೆಗಳಿಗೆ ಹಾನಿ
- ಎಂಆರ್ಪಿಎಲ್ ಸ್ಫೋಟ: ಸ್ಥಳೀಯರ ಸುರಕ್ಷತೆಯೊಂದಿಗೆ ಯಾವುದೇ ರಾಜಿ ಬೇಡ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ, ಗಾಯಾಳುಗಳಿಗೆ ಸಂಪೂರ್ಣ ಉಚಿತ ಚಿಕಿತ್ಸೆ ನೀಡಲಿ ಕೈಗಾರಿಕೆ ಆರಂಭದ ವೇಳೆ ನೀಡಿದ ಭರವಸೆಗಳು ಅನುಷ್ಠಾನವಾಗಲಿ: ಯೋಗಿಶ್ ಶೆಟ್ಟಿ ಜಪ್ಪು
- ಎಂಆರ್ಪಿಎಲ್ನಲ್ಲಿ ಭಾರೀ ಸ್ಫೋಟ: ಎಂಟು ಮಂದಿ ಗಾಯ ಕೋಕರ್ ಹೈಡ್ರೋ ಟ್ರೀಟಿಂಗ್ ಘಟಕದಲ್ಲಿ ಬೆಂಕಿ; ಓರ್ವನಿಗೆ ಶೇ.35ರಷ್ಟು ಸುಟ್ಟ ಗಾಯ
- ಎಂಆರ್ಪಿಎಲ್ ಘಟಕದಲ್ಲಿ ಭಾರೀ ಸ್ಫೋಟದ ಸದ್ದು: ಬೆಂಕಿ, ದಟ್ಟ ಹೊಗೆಯಿಂದ ಸ್ಥಳೀಯರಲ್ಲಿ ಆತಂಕ
Author: Tulunada Surya
ಕುಂದಾಪುರ ಸೆ.6: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು ಕರ್ಕುಂಜೆ ಗ್ರಾಮದ ಮುಕ್ಕೋಡು ಪ್ರದೇಶದಲ್ಲಿರುವ ಕ್ಯಾಟರಿಂಗ್ ಶೆಡ್‌ನಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಅಂದರ್-ಬಾಹರ್ ಇಸ್ಪೀಟು ಜುಗಾರಿ ಅಡ್ಡೆಗೆ ಗ್ರಾಮಾಂತರ ಪೊಲೀಸರು ದಾಳಿ ನಡೆಸಿದ್ದು, 11 ಆರೋಪಿಗಳನ್ನು ಬಂಧಿಸಿ ಸಾವಿರಾರು ರೂಪಾಯಿ ನಗದು ಹಾಗೂ ವಾಹನಗಳು, ಮೊಬೈಲ್‌ಫೋನುಗಳನ್ನು ವಶಪಡಿಸಿಕೊಂಡಿದ್ದಾರೆ. ದಾಳಿ ವಿವರ:ಸೆಪ್ಟೆಂಬರ್ 5 ರಂದು ಸಂಜೆ 6:30ರ ಸುಮಾರಿಗೆ ಕುಂದಾಪುರ ಗ್ರಾಮಾಂತರ ಠಾಣೆಯ ಪೊಲೀಸ್ ಉಪನಿರೀಕ್ಷಕ ಭೀಮಾಶಂಕರ ಸಿನ್ನೂರ ಸಂಗಣ್ಣ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದರು. ಮುಕ್ಕೋಡು ನಿವಾಸಿ ರಾಜೀವ್ ಶೆಟ್ಟಿಯವರ ಕ್ಯಾಟರಿಂಗ್ ಶೆಡ್‌ನಲ್ಲಿ ಜುಗಾರಿ ಆಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಈ ದಾಳಿ ನಡೆಯಿತು. ಬಂಧಿತರ ಹೆಸರುಗಳು: 1. ಚಂದ್ರಶೇಖರ (52), ಗುಲ್ವಾಡಿ ಗ್ರಾಮ 2. ಅಭಿಜಿತ್ (33), ಚಿತ್ತೂರು, ಕುಂದಾಪುರ 3. ಸತೀಶ್ ಪೂಜಾರಿ (34), ಬೈಂದೂರು 4. ಗಣಪತಿ ವೀರಪ್ಪ ನಾಯ್ಕ್ (34), ಭಟ್ಕಳ 5. ಈಶ್ವರ ಹೊನ್ನಪ್ಪ ನಾಯ್ಕ್ (53), ಮುರ್ಡೇಶ್ವರ 6.…
ಮಂಗಳೂರು, :ಸುರತ್ಕಲ್‌ನ ಮುಕ್ಕದ ಲೇಔಟ್‌ನಲ್ಲಿ ಪಶ್ಚಿಮ ಬಂಗಾಳದ ಕಾರ್ಮಿಕನೊಬ್ಬನನ್ನು ಕೊಲೆ ಮಾಡಿ, ಮೃತದೇಹವನ್ನು ಎಸ್‌ಟಿಪಿ ಟ್ಯಾಂಕ್‌ನಲ್ಲಿ ಮರೆಮಾಚಲಾಗಿದ್ದ ಪ್ರಕರಣದ ಆರೋಪಿ ಪೊಲೀಸ್ ವಶದಲ್ಲಿದ್ದಾರೆ. ಮೃತ ವ್ಯಕ್ತಿಯನ್ನು ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ರತುವಾ ಪರಂಪುರ್ ಗ್ರಾಮದ ನಿವಾಸಿ ಮುಖೇಶ್ ಮಂಡಲ್ (27) ಎಂದು ಗುರುತಿಸಲಾಗಿದೆ. ಆರೋಪಿಯಾಗಿರುವ ಲಕ್ಷ್ಮಣ್ ಮಂಡಲ್ ಯಾನೆ ಲಖನ್ (30) ಕೂಡ ಅದೇ ಜಿಲ್ಲೆಯ ಬಾದೋ ಗ್ರಾಮದ ನಿವಾಸಿಯಾಗಿದ್ದು, ಕೊಲೆ ಮಾಡಿ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದ್ದಾನೆ. ಘಟನೆ ಹಿನ್ನೆಲೆ ಜೂನ್ 24 ರಂದು ಲೇಔಟ್‌ನಲ್ಲಿ ಕೆಲಸ ಮಾಡುತ್ತಿದ್ದ ಮುಖೇಶ್ ನಿಧಾನವಾಗಿ ಕಣ್ಮರೆಯಾಗಿದ್ದ. ಜೊತೆಗೆ ಕೆಲಸ ಮಾಡುತ್ತಿದ್ದ ದೀಪಾಂಕರ್ ಎಂಬವರು ಜುಲೈ 2ರಂದು ಸುರತ್ಕಲ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಪೊಲೀಸರು ತನಿಖೆ ಮುಂದುವರಿಸುತ್ತಿದ್ದ ವೇಳೆಯೇ ಆಗಸ್ಟ್ 21ರಂದು ಎಸ್‌ಟಿಪಿ ಟ್ಯಾಂಕ್‌ನಲ್ಲಿ ಕೊಳೆತ ಸ್ಥಿತಿಯಲ್ಲಿ ಮುಖೇಶ್ ಮೃತದೇಹ ಪತ್ತೆಯಾಯಿತು. ಕೊಲೆ ಹಿನ್ನಲೆ ತೀವ್ರ ತನಿಖೆಯ ನಂತರ ಪೊಲೀಸರು ಲಖನ್‌ನನ್ನು ಪಶ್ಚಿಮ ಬಂಗಾಳದಲ್ಲಿ ಬಂಧಿಸಿ ಮಂಗಳೂರಿಗೆ ಕರೆತರಿದರು. ವಿಚಾರಣೆ ವೇಳೆ…
ಮಂಗಳೂರು, ಸೆಪ್ಟೆಂಬರ್ 5: ಬಂಟ್ವಾಳ ತಾಲೂಕಿನ ತುಂಬೆ ಬಳಿ ನಡೆದ ಜಾನುವಾರು ಕಳವು ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಕುದ್ರೋಳಿಯ ಬೀಫ್ ಸ್ಟಾಲ್ ಮಾಲಕ ಸೇರಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಗೆ ಈ ಮೊದಲು ಕೂಡ ಇಂತಹ ಪ್ರಕರಣಗಳಲ್ಲಿ ಕೈವಾಡವಿದ್ದ ಮಾಹಿತಿಯೂ ಹೊರಬಿದ್ದಿದೆ. ಬಂಧಿತರು: ಇರ್ಷಾದ್ (34), ಉಳ್ಳಾಲ ಚೆಂಬುಗುಡ್ಡೆ ನಿವಾಸಿ ಮಹಮ್ಮದ್ ಮನ್ಸೂರ್ (48), ಮಂಗಳೂರು ಕುದ್ರೋಳಿ ನಿವಾಸಿ ಅಬ್ದುಲ್ ಅಝೀಮ್ (18), ಮಂಗಳೂರು ಕಣ್ಣೂರು ನಿವಾಸಿ ಘಟನೆಯ ವಿವರ: ನವೆಂಬರ್ 14ರಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ತುಂಬೆ ಸಮೀಪದ ಪ್ರದೇಶದಿಂದ ಜಾನುವಾರುವನ್ನು ಕಳ್ಳತನ ಮಾಡಿದ ಆರೋಪ ಹೊರವಿದೆಯೆಂದು ಪೊಲೀಸ್ ಮೂಲಗಳು ತಿಳಿಸಿವೆ. ಮುಂದಿನ ದಿನದಂದು (ನ.15) ಅಲ್ಲೇ ಸಮೀಪದಲ್ಲಿ ಜಾನುವಾರು ವಿನ ಚರ್ಮ ಹಾಗೂ ಅಂಗಾಂಗಳು ಪತ್ತೆಯಾಗಿದ್ದವು. ಸ್ಥಳೀಯರ ಪ್ರತಿಕ್ರಿಯೆ ಹಾಗೂ ಮಾಹಿತಿ ಆಧಾರಿತ ತನಿಖೆಯಲ್ಲಿ, ಮಂಗಳೂರು ಮೂಲದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇವರು ಪೆರ್ನೆ ಗ್ರಾಮದ ಕಡಂಬು ಪ್ರದೇಶದಲ್ಲಿ ದೇಜಪ್ಪ ಮೂಲ್ಯ ಎಂಬುವರಿಗೆ…
ಕಾಪು: ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಮಗು ಮಾರಾಟ ಪ್ರಕರಣವೊಂದು ಭಾರಿ ಚರ್ಚೆಗೆ ಕಾರಣವಾಗಿದೆ. ಅಂಗನವಾಡಿ ಸಿಬ್ಬಂದಿಯ ಶಂಕೆಯಿಂದ ಆರಂಭವಾದ ಈ ಪ್ರಕರಣ ಇದೀಗ ಮೂವರು ಆರೋಪಿಗಳ ಬಂಧನಕ್ಕೆ ದಾರಿ ನೀಡಿದ್ದು, ಶಿಶುವಿನ ಹಕ್ಕು ಬಗ್ಗೆ ಹಲವಾರು ಪ್ರಶ್ನೆಗಳು ಮೂಡಿಸಿವೆ. ಬಂಧಿತ ಆರೋಪಿಗಳನ್ನು ಡಾ. ಸೋಮೇಶ್ ಸೊಲೊಮನ್, ವಿಜಯಲಕ್ಷ್ಮಿ ಯಾನೆ ವಿಜಯ, ಹಾಗೂ ನವನೀತ್ ನಾರಾಯಣ ಎಂದು ಪೊಲೀಸರು ಗುರುತಿಸಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂಶಯದಿಂದ ಆರಂಭವಾದ ತನಿಖೆ ಹೇರೂರು ಗ್ರಾಮದ ಕಲ್ಲುಗುಡ್ಡೆಯ ಪ್ರಭಾವತಿ ಮತ್ತು ಅವರ ಪತಿ ರಮೇಶ್ ಮೂಲ್ಯ ದಂಪತಿಗಳು, 4 ದಿನದ ಶಿಶುವನ್ನು ಪೋಷಣ್ ಟ್ರ್ಯಾಕರ್‌ನಲ್ಲಿ ನೋಂದಾಯಿಸಲು ಅಂಗನವಾಡಿಗೆ ಕರೆದುಕೊಂಡು ಹೋಗಿದ್ದರು. ಮಗು ದಂಪತಿಗಳ ಶಿಶುವಲ್ಲ ಎಂಬ ಸಂಶಯ ಅಂಗನವಾಡಿ ಕಾರ್ಯಕರ್ತೆಗೆ ಉಂಟಾಗಿ, ಮಾಹಿತಿ ಶಿರ್ವ ಪೊಲೀಸ್ ಠಾಣೆಗೆ ತಲುಪಿಸಲಾಯಿತು. ಪೊಲೀಸರು ಪ್ರಭಾವತಿಯವರ ಮನೆಯ ಮೇಲೆ…
ಕೋಟ : ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ಗ್ರಾಮದಲ್ಲಿರುವ ಗುರು ನರಸಿಂಹ ದೇವಾಲಯದ ಕೆರೆಯ ಹತ್ತಿರದ ಮನೆಯೊಂದರಲ್ಲಿ ನಡೆಯುತ್ತಿದ್ದ ಇಸ್ಪೀಟು ಜುಗಾರಿ ಆಟದ ಮೇಲೆ ಕೋಟ ಪೊಲೀಸರು ದಾಳಿ ನಡೆಸಿದ್ದು, ಈ ಸಂದರ್ಭದಲ್ಲಿ ಎಂಟು ಮಂದಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಸಾಲಿಗ್ರಾಮದ ಸತೀಶ, ರಘು ಸಾಲಿಗ್ರಾಮ, ಚೇತನ ಕಾರ್ಕಡ, ಹರೀಶ, ಜನಾರ್ಧನ ಬಾರ್ಕೂರು, ಸನ್ನಿಧಾನ, ಪ್ರಸಾದ್ ಹಾಗೂ ನವೀನ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಎಲ್ಲರೂ ಸ್ಥಳೀಯ ನಿವಾಸಿಗಳು ಎಂದು ತಿಳಿದುಬಂದಿದೆ. ಕೋಟ ಪೊಲೀಸ್ ಠಾಣೆಯ ಉಪನಿರೀಕ್ಷಕ ಪ್ರವೀಣ್ ಕುಮಾರ್ ಆರ್ ಅವರ ನೇತೃತ್ವದಲ್ಲಿ ಸೆಪ್ಟೆಂಬರ್ 2 ರಂದು ರಾತ್ರಿ ಸುಮಾರು 1 ಗಂಟೆ ಸಮಯದಲ್ಲಿ ದಾಳಿ ನಡೆಸಲಾಯಿತು. ಈ ವೇಳೆ ಇಸ್ಪೀಟು ಆಟದಲ್ಲಿ ತೊಡಗಿದ್ದವರಲ್ಲಿ 8 ಮಂದಿ ಸಿಕ್ಕಿಹಾಕಿಕೊಂಡರು. ಬಂಧಿತರಿಂದ ₹14,130 ನಗದು, ಒಂದು ಬೆಡ್‌ಶೀಟ್, 7 ಮೊಬೈಲ್ ಫೋನ್‌ಗಳು ಮತ್ತು ಇಸ್ಪೀಟು ಎಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೋಲೀಸರ ಈ ಕಾರ್ಯಾಚರಣೆಗೆ ಸ್ಥಳೀಯರು ಶ್ಲಾಘನೆ…
ಮಂಗಳೂರು : ಮಂಗಳೂರು ನಗರದ ಸಮೀಪ ಅಕ್ರಮವಾಗಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿ ಸುನೀಲ್ ಎಂಬಾತನನ್ನು ಬರ್ಕೆ ಪೊಲೀಸ್ ಠಾಣೆಯ ಸಿಬ್ಬಂದಿ ಬಂಧಿಸಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ, ಸೆಪ್ಟೆಂಬರ್ 1ರಂದು ಸಂಜೆ 4 ಗಂಟೆ ಸಮಯದಲ್ಲಿ ಬಾತ್ಮಿದಾರರಿಂದ ಬಂದ ಖಚಿತ ಮಾಹಿತಿಯ ಮೇರೆಗೆ ಬರ್ಕೆ ಠಾಣೆಯ ಉಪನಿರೀಕ್ಷಕ ವಿನಾಯಕ ರವರ ನೇತೃತ್ವದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದರು. ಮಂಗಳೂರಿನ ಸುಲ್ತಾನ್ ಬತ್ತೇರಿಯಲ್ಲಿ KA-19 HJ1184 ಸಂಖ್ಯೆಯ ಬಿಳಿ ಸ್ಕೂಟರ್‌ನಲ್ಲಿ ಸಂಚರಿಸುತ್ತಿದ್ದ ಸುನೀಲ್ ಎಂಬಾತನು ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ವೇಳೆ ಬಂಧಿಸಲಾಯಿತು. ಬಂಧಿತನಿಂದ ಒಟ್ಟು 1 ಕಿಲೋ 394 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದ್ದು, ಇದು ವಾಣಿಜ್ಯ ಪ್ರಮಾಣದ ಮಾದಕ ವಸ್ತುವಾಗಿ ಗುರುತಿಸಲಾಗಿದೆ. ಆರೋಪಿಯು ಯಾವುದೇ ಪರವಾನಿಗೆ ಇಲ್ಲದೇ, NDPS (Narcotic Drugs and Psychotropic Substances Act) ಕಾಯ್ದೆ ಉಲ್ಲಂಘಿಸಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ವಶದಲ್ಲಿರುವ ಸೊತ್ತುಗಳ ವಿವರ: 25 ಗ್ರಾಂ ತೂಕದ ಗಾಂಜಾ ಪ್ಯಾಕೆಟ್ –…
ಮಂಗಳೂರು: ಪ್ರಜ್ವಲ್ ಫಿಲಂಸ್ ಲಾಂಛನದಲ್ಲಿ, ಪ್ರಜ್ವಲ್ ಶೆಟ್ಟಿ ನಿರ್ಮಾಣ ಮತ್ತು ಕೀರ್ತನ್ ಭಂಡಾರಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಗಜಾನನ ಕ್ರಿಕೆಟರ್ಸ್ (ಜಂತೊಟ್ಟು ಸಿನ್ಸ್ 1983)’ ತುಳು ಚಲನಚಿತ್ರವು 2026ರ ಜನವರಿಯಲ್ಲಿ ಕರ್ನಾಟಕದಾದ್ಯಂತ ಹಾಗೂ ವಿದೇಶಗಳಲ್ಲಿಯೂ ತೆರೆಕಾಣಲಿದೆ. ತುಳು ಚಲನಚಿತ್ರರಂಗದಲ್ಲಿ ಬೃಹತ್ ಬಜೆಟ್‌ನಲ್ಲಿ ನಿರ್ಮಿತವಾಗುತ್ತಿರುವ ಈ ಚಿತ್ರವು ಕ್ರಿಕೆಟ್ ಆಟ ಮತ್ತು ಆಟಗಾರರ ಬದುಕಿನ ಹಿನ್ನಲೆಯನ್ನು ಆಧಾರವಾಗಿ ಹೊಂದಿದೆ. ಹಾಸ್ಯ, ಪ್ರೇಮಭಾವನೆ ಹಾಗೂ ಪ್ರಭಾವಶಾಲಿ ಸಮಾಜಮುಖಿ ಸಂದೇಶವನ್ನು ಒಳಗೊಂಡಿರುವ ಈ ಕಥೆ ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದೆ. ಪ್ರಥಮ ನಿರ್ದೇಶನ – ಕೀರ್ತನ್ ಭಂಡಾರಿ ಚಿತ್ರದ ಕಥೆ ಹಾಗೂ ಚಿತ್ರಕಥೆಯನ್ನು ಬರೆದು ನಿರ್ದೇಶನದ ಹೊಣೆ ಹೊತ್ತಿರುವ ಕೀರ್ತನ್ ಭಂಡಾರಿಗೆ ಇದು ಪ್ರಥಮ ನಿರ್ದೇಶನ. ಮಂಗಳೂರು ಹಾಗೂ ಸುತ್ತಮುತ್ತಲಿನ ಸ್ಥಳಗಳಲ್ಲಿ ಬಹುಪಾಲು ಚಿತ್ರೀಕರಣ ನಡೆದಿದ್ದು, ನೈಸರ್ಗಿಕ ಸೌಂದರ್ಯವನ್ನು ಚಿತ್ರದಲ್ಲಿ ಮೂಡಿಸಲಾಗಿದೆ. ನಿರ್ಮಾಪಕರಾದ ಪ್ರಜ್ವಲ್ ಶೆಟ್ಟಿ, ಈ ಚಿತ್ರದಲ್ಲಿ ಪ್ರಮುಖ ಪಾತ್ರವನ್ನೂ ನಿರ್ವಹಿಸುತ್ತಿದ್ದಾರೆ. ಪ್ರಮುಖ ತಾರಾಗಣ ಚಿತ್ರದಲ್ಲಿ ವಿನಿತ್ ಕುಮಾರ್, ನವೀನ್ ಡಿ. ಪಡೀಲ್, ಅರವಿಂದ ಬೋಳಾರ್,…
ತುಳು ಭಾಷೆ – ಸಂಸ್ಕೃತಿಯ ನೈಜ ಹೋರಾಟಗಾರ ನಿಸರ್ಗ: ಭಾಸ್ಕರ ರೈ ಕುಕ್ಕುವಳ್ಳಿ ಮಂಗಳೂರು: ‘ತುಳುನಾಡು, ನುಡಿ ಮತ್ತು ಸಂಪ್ರದಾಯಗಳ ರಕ್ಷಣೆಗಾಗಿ ಪಣತೊಟ್ಟು ಹೋರಾಡಿದ ಅನೇಕ ವ್ಯಕ್ತಿಗಳು ಮತ್ತು ಸಂಘಟನೆಗಳು ನಮ್ಮಲ್ಲಿವೆ. ತುಳು ಚಳುವಳಿಯ ವಿವಿಧ ಹಂತಗಳಲ್ಲಿ ಕೆಲಸ ಮಾಡಿದ ಹಿರಿಯರೆಲ್ಲ ಗತಿಸಿ ಹೋಗಿದ್ದಾರೆ. ಯಾವುದಕ್ಕೂ ಒಂದು ತಾರ್ಕಿಕ ಅಂತ್ಯ ಈ ವರೆಗೆ ಲಭಿಸಿಲ್ಲವಾದರೂ ತುಳು ಭಾಷೆ ಮತ್ತು ಸಂಸ್ಕೃತಿಯ ಪ್ರಸರಣಕ್ಕೆ ಪ್ರಾಮಾಣಿಕವಾಗಿ ದುಡಿದವರು ಸದಾ ಸ್ಮರಣೀಯರು. ಅಂಥವರಲ್ಲಿ ಮೂರು ದಶಕಗಳಷ್ಟು ಕಾಲ ಕುಡ್ಲ ತುಳುಕೂಟದ ಚುಕ್ಕಾಣಿ ಹಿಡಿದು ಹಲವಂಗಗಳಲ್ಲಿ ಕೆಲಸ ಮಾಡಿದ ದಾಮೋದರ ನಿಸರ್ಗರು ತುಳು ಭಾಷೆ ಮತ್ತು ಸಂಸ್ಕೃತಿಯ ನೈಜ ಹೋರಾಟಗಾರರು’ ಎಂದು ಕರ್ನಾಟಕ ಜಾನಪದ, ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ. ಬಿ.ದಾಮೋದರ ನಿಸರ್ಗ ಸಂಸ್ಮರಣ ಸಮಿತಿ ವತಿಯಿಂದ ಅಗೊಸ್ತು 31ರಂದು ಭಾನುವಾರ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಜರಗಿದದ್ವಿತೀಯ ಸಂಸ್ಮರಣ ಸಮಾರಂಭದಲ್ಲಿ ಅವರು ಸಂಸ್ಮರಣಾ ಭಾಷಣ…
ಮಂಗಳೂರು, ಸೆಪ್ಟೆಂಬರ್ 2: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ವ್ಯವಸ್ಥೆಯ ಮಧ್ಯೆ ಬೃಹತ್ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಏರ್ ಇಂಡಿಯಾ SATS ಕಂಪೆನಿಯ ಐದು ಮಂದಿ ಸಿಬ್ಬಂದಿಯನ್ನು, ಮಹಿಳಾ ಪ್ರಯಾಣಿಕರೊಬ್ಬರ ಬ್ಯಾಗೇಜ್ ನಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಆರೋಪದಲ್ಲಿ ಬಂಧಿಸಲಾಗಿದೆ. ಘಟನೆ ವಿವರ: ಆಗಸ್ಟ್ 30ರಂದು ಬೆಂಗಳೂರು ಮೂಲದ ಮಹಿಳಾ ಪ್ರಯಾಣಿಕರು, AIR INDIA EXPRESS ವಿಮಾನದಲ್ಲಿ ಮಂಗಳೂರಿಗೆ ಆಗಮಿಸಿದ್ದರು. ಬಜಪೆ ವಿಮಾನ ನಿಲ್ದಾಣದ ಬ್ಯಾಗೇಜ್ ಬೇಲ್ಟ್‌ನಿಂದ ಲಗೇಜ್ ಪಡೆದು ಪರಿಶೀಲಿಸಿದ ವೇಳೆ, ಅದರಲ್ಲಿ ಇಡಲಾಗಿದ್ದ 56 ಗ್ರಾಂ ಚಿನ್ನಾಭರಣ (ಅಂದಾಜು ಮೌಲ್ಯ ₹4.5 ಲಕ್ಷ) ಕಾಣೆಯಾಗಿದ್ದಿತು. ಪ್ರಯಾಣಿಕರು ಕೂಡಲೇ ಬಜಪೆ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದರು. ಪ್ರಕರಣವನ್ನು ಅ.ಕ್ರ. 157/2025 ಕಲಂ 303(2) ಬಿ.ಎನ್.ಎಸ್ ಅಡಿಯಲ್ಲಿ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದರು. ಬಂಧಿತ ಆರೋಪಿಗಳು: ಪೊಲೀಸರ ತನಿಖೆಯಲ್ಲಿ, ಏರ್ ಇಂಡಿಯಾ SATS ಕಂಪೆನಿಯಲ್ಲಿ ಲೋಡರ್ ಹಾಗೂ ಅನ್ಲೋಡರ್ ಗಳಾಗಿ ಕೆಲಸ…
ಮಂಗಳೂರು: ಲಯನ್ಸ್ ಕ್ಲಬ್ ಆಫ್ ಮಂಗಳೂರು ಬಲ್ಮಠ ದ ವತಿಯಿಂದ ಜಿಲ್ಲಾ ಗವರ್ನರ್ ಲಯನ್ ಅರವಿಂದ್ ಶೆಣೈ (PMJF D1) ಅವರ ಭೇಟಿಯನ್ನು ಆಗಸ್ಟ್ 28 ರಂದು ಸಂಜೆ 7.30ಕ್ಕೆ ಕದ್ರಿಯ ಅಶೋಕ ಸೇವಾ ಭವನದಲ್ಲಿ ಸಂಭ್ರಮದಿಂದ ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಎರಡು ಹೊಸ ಸದಸ್ಯರನ್ನು ಕ್ಲಬ್‌ಗೆ ಸೇರ್ಪಡೆಗೊಳಿಸಲಾಯಿತು. ಹಲವು ಜನಪರ ಸೇವಾ ಚಟುವಟಿಕೆಗಳನ್ನು ಈ ದಿನ ಹಮ್ಮಿಕೊಳ್ಳಲಾಗಿತ್ತು. ಅಕ್ಷಯಪಾತ್ರ ಫೌಂಡೇಶನ್, ಪಶ್ಚಿಮ ರಿಹ್ಯಾಬ್ ಟ್ರಸ್ಟ್ ಮತ್ತು ಬೆತೆರೆಮ್ ಸಂಸ್ಥೆಗಳಿಗೆ ದೇಣಿಗೆಯನ್ನು ನೀಡಲಾಯಿತು. ಲಿಟಲ್ ಸಿಸ್ಟರ್ಸ್ ಆಫ್ ದಿ ಪೂರ್, ಚೆಷೈರ್ ಹೋಮ್ ಮತ್ತು ಸಂವೇದನಾ ಸಂಸ್ಥೆಗಳಿಗೆ ಒಟ್ಟು 300 ಕೆ.ಜಿ ಅಕ್ಕಿಯನ್ನು ದಾನವಾಗಿ ನೀಡಲಾಯಿತು. ಒಟ್ಟು ₹1,60,000 ಮೌಲ್ಯದ ಸೇವಾ ಚಟುವಟಿಕೆಗಳು ಈ ಸಂದರ್ಭದಲ್ಲಿ ಅನುಷ್ಠಾನಗೊಂಡವು. ಜಿಲ್ಲಾ ಗವರ್ನರ್ ಅರವಿಂದ್ ಶೆಣೈ ಅವರ ಜನ್ಮದಿನದ ಜೊತೆಗೆ, ಇತರ ಸದಸ್ಯರ ಹುಟ್ಟುಹಬ್ಬಗಳು ಮತ್ತು ವಾರ್ಷಿಕೋತ್ಸವಗಳನ್ನು ಸಹ ಈ ಸಂದರ್ಭದಲ್ಲಿ ಆಚರಿಸಲಾಯಿತು. ನಮ್ಮ ಜಿಲ್ಲೆಯ ಪ್ರಥಮ ಮಹಿಳಾ ಲಯನ್ ಆಗಿರುವ 90 ವರ್ಷ…
ತುಳುನಾಡ ಸೂರ್ಯ ಪ್ರತಿಕೆ ಚಂದಾದಾರರಾಗಿ ಪ್ರೋತ್ಸಾಹಿಸಬೇಕಾಗಿ ವಿನಂತಿ.
ತುಳುನಾಡಿನ ಅಚಾರ ವಿಚಾರ ಪರಂಪರೆ ಮತ್ತು ಪ್ರಸ್ತುತ ಹಲವಾರು ವಿಚಾರಗಳನ್ನು ಪ್ರಕಟಿಸುವ ಪತ್ರಿಕೆ ಯಾಗಿದೆ. ತಾವು ಚಂದಾದಾರ ರಾಗಿದಲ್ಲಿ tulunadasurya.com web News ನಲ್ಲಿ ಪ್ರತಿ ದಿನದ ನ್ಯೂಸ್ ಗಳು ನೀವು ವೀಕ್ಷಿಸಬಹುದು . ಮತ್ತು ಪ್ರತಿ ತಿಂಗಳು ನಿಮ್ಮ ವಿಳಾಸಕ್ಕೆ ಗೌರವಯುತ ವಾಗಿ ಅಂಚೆ ಮೂಲಕ ತುಳುನಾಡ ಸೂರ್ಯ ಪ್ರತಿಕೆ ಮನೆ ತಲುಪುತ್ತದೆ.
