- ಸೇವಾ ಸಂಕಲ್ಪ ಅಭಿಯಾನಕ್ಕೆ ಮಾದರಿ ಹೆಜ್ಜೆ ಕುಲಶೇಖರ ಕಲ್ಪನೆ ಪರಿಸರದಲ್ಲಿ ನವೀಕೃತ ಬಸ್ ನಿಲ್ದಾಣ ಉದ್ಘಾಟನೆ
- ಮಾಡೂರು ಶ್ರೀ ಶಿವ ದುರ್ಗಾಂಬಾ ಮಠದಲ್ಲಿ ಅ.15ರಿಂದ ನವರಾತ್ರಿ ಮಹೋತ್ಸವ ವಿಶೇಷ ಪೂಜೆ, ಗಣಹೋಮ, ಮಹಾ ಚಂಡಿಕಾಯಾಗ, ಅಖಂಡ ಭಜನೆ ಹಾಗೂ ಅನ್ನಸಂತರ್ಪಣೆ
- ಗಾಂಧಿ ಜಯಂತಿ ಅಂಗವಾಗಿ ಉಡುಪಿಯಲ್ಲಿ ತುಳುನಾಡ ರಕ್ಷಣಾ ವೇದಿಕೆಯಿಂದ ವಿಶೇಷ ಕಾರ್ಯಕ್ರಮ ಗಾಂಧೀಜಿ ತತ್ವಗಳನ್ನು ಸ್ಮರಿಸಿ ತಾಯಿ–ಮಕ್ಕಳ ಆಸ್ಪತ್ರೆಯಲ್ಲಿ ಹಣ್ಣುಹಂಪಲು ವಿತರಣೆ
- ಅ.5ರಂದು ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘದಿಂದ ಬೆಂಗಳೂರಿನಲ್ಲಿ ಶಾಂತಿಯುತ ಪ್ರತಿಭಟನೆ
- MRPL ಸ್ಫೋಟ ಪ್ರಕರಣ: ನಿರ್ಲಕ್ಷ್ಯದ ಆರೋಪದಡಿ FIR ಗಂಭೀರ ಗಾಯಗೊಂಡ ಕಾರ್ಮಿಕ ಮನೀಶ್ ಕರ್ಕಡ ಸಾವು; ಸುತ್ತಮುತ್ತ 54 ಮನೆಗಳಿಗೆ ಹಾನಿ
- ಎಂಆರ್ಪಿಎಲ್ ಸ್ಫೋಟ: ಸ್ಥಳೀಯರ ಸುರಕ್ಷತೆಯೊಂದಿಗೆ ಯಾವುದೇ ರಾಜಿ ಬೇಡ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ, ಗಾಯಾಳುಗಳಿಗೆ ಸಂಪೂರ್ಣ ಉಚಿತ ಚಿಕಿತ್ಸೆ ನೀಡಲಿ ಕೈಗಾರಿಕೆ ಆರಂಭದ ವೇಳೆ ನೀಡಿದ ಭರವಸೆಗಳು ಅನುಷ್ಠಾನವಾಗಲಿ: ಯೋಗಿಶ್ ಶೆಟ್ಟಿ ಜಪ್ಪು
- ಎಂಆರ್ಪಿಎಲ್ನಲ್ಲಿ ಭಾರೀ ಸ್ಫೋಟ: ಎಂಟು ಮಂದಿ ಗಾಯ ಕೋಕರ್ ಹೈಡ್ರೋ ಟ್ರೀಟಿಂಗ್ ಘಟಕದಲ್ಲಿ ಬೆಂಕಿ; ಓರ್ವನಿಗೆ ಶೇ.35ರಷ್ಟು ಸುಟ್ಟ ಗಾಯ
- ಎಂಆರ್ಪಿಎಲ್ ಘಟಕದಲ್ಲಿ ಭಾರೀ ಸ್ಫೋಟದ ಸದ್ದು: ಬೆಂಕಿ, ದಟ್ಟ ಹೊಗೆಯಿಂದ ಸ್ಥಳೀಯರಲ್ಲಿ ಆತಂಕ
Author: Tulunada Surya
ಒಂದುವರೆ ವರ್ಷದಲ್ಲಿ ಸಂಪೂರ್ಣ ಖುರ್ ಆನನ್ನು ಕೈ ಬರಹದ ಮೂಲಕ ರಚಿಸಿ ಸಾಧನೆಗೈದ ಈ ಬಾಲಕಿ ಹಾಸನದ ಅಬ್ದುಲ್ ಹಮೀದ್ ಯಾಸ್ಮೀನ್ ದಂಪತಿಗಳ ಸುಪುತ್ರಿ.ಕ್ಯಾಲಿಗ್ರಫಿ ಮೂಲಕ ಕುರಾನಿನ ಆಯತ್ ಗಳನ್ನು ಬರೆಯುತ್ತಿದ್ದ ಈ ಬಾಲಕಿಗೆ ಸಂಪೂರ್ಣ ಕುರಾನನ್ನು ಕೈ ಬರಹದ ಮೂಲಕ ಬರೆಯಬೇಕೆಂಬ ಹಂಬಲವುಂಟಾಯಿತು.ತನ್ನ ಹೆತ್ತವರೂ ಇದಕ್ಕೆ ಪ್ರೋತ್ಸಾಹ, ಸಹಕಾರ ನೀಡಿದಾಗ ಈ ಪುಣ್ಯ ಕಾರ್ಯವನ್ನು ಆರಂಭಿಸಿದ್ದಳು.6000 ಕ್ಕೂ ಮಿಕ್ಕಿದ ಶ್ಲೋಕಗಳನ್ನು ( ಆಯತ್ ಗಳನ್ನು ) ಅರಬಿ ಲಿಪಿಯಲ್ಲಿ ಬರೆಯುವುದೆಂದರೆ ಅದು ಸಾಮಾನ್ಯ ಸಾಧನೆಯಲ್ಲ. ಪವಿತ್ರ ಖುರ್‌ಆನ್ ಆದ್ದರಿಂದ ಒಂದು ಅಕ್ಷರ, ಚುಕ್ಕೆ, ಸಂಕೇತ ಕೂಡಾ ತಪ್ಪದಂತೆ ಬಹಳ ನಿಗಾ ವಹಿಸಿ ಬರೆಯಬೇಕಾಗುತ್ತದೆ. ಇಂತಹ ಅಮೋಘ ಸಾಧನೆಯನ್ನು ಮಾಡಿರುವ ಈ ಕಿಶೋರಿಯ ಪ್ರಯತ್ನ ನಿಜಕ್ಕೂ ಅದ್ಭುತ.ಒಂದುವರೆ ವರ್ಷಗಳ ಕಾಲ ತನ್ನ ತೀರ್ವ ಪರಿಶ್ರಮದಿಂದ ಬರೆಯುತ್ತಾ ಬರುತ್ತಿದ್ದ ಈ ಹುಡುಗಿಗೆರಬೀಉಲ್ ಅವ್ವಲ್ ತಿಂಗಳ ಹನ್ನೆರಡನೇ ದಿನದ ಮೊದಲು ಇದನ್ನು ಸಂಪೂರ್ಣವಾಗಿ ಬರೆದು ಮುಗಿಸಬೇಕೆಂದು ಛಲ ಹುಟ್ಟಿಕೊಂಡಿತ್ತು. ಆದ್ದರಿಂದ ಹಲವು ರಾತ್ರಿ ನಿದ್ದೆಗೆಟ್ಟು…
ಮಂಗಳೂರು: ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಸಂತೋಷ್ ಮಾಡ ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ತುಳು ಚಿತ್ರ ‘ಪಿದಾಯಿ’ ಸೆಪ್ಟೆಂಬರ್ 12ರಂದು ಕರಾವಳಿಯಾದ್ಯಂತ ಬಿಡುಗಡೆಗೊಳ್ಳಲಿದೆ ಎಂದು ನಟಿ ರೂಪಾ ವರ್ಕಾಡಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ‘ನಮ್ಮ ಕನಸು’ ಬ್ಯಾನರ್‌ನಲ್ಲಿ ಕೆ. ಸುರೇಶ್ ನಿರ್ಮಿಸಿರುವ ಈ ಚಿತ್ರಕ್ಕೆ ಕಥೆ ರಚಿಸಿರುವುದು ರಮೇಶ್ ಶೆಟ್ಟಿಗಾರ್. ಚಿತ್ರವು ಕೊಲ್ಕತ್ತಾ, ಸಿಮ್ಲಾ, ಜಾರ್ಖಂಡ್ ಹಾಗೂ ಕ್ಯಾಲಿಫೋರ್ನಿಯಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಅಧಿಕೃತ ಆಯ್ಕೆಗೊಂಡಿದೆ. ಜೊತೆಗೆ, 16ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ಪಿದಾಯಿ’ ಚಿತ್ರವು ಭಾರತೀಯ ಹಾಗೂ ಕನ್ನಡ ವಿಭಾಗಗಳಲ್ಲಿ ಸ್ಪರ್ಧೆಗಿಳಿದು, ಎರಡನೇ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಗಳಿಸಿದೆ. ಇದು ತುಳು ಚಿತ್ರರಂಗಕ್ಕೆ ಬಹುಮಾನೀಯ ಸಾಧನೆ. ಅಭಿನಯ ತಾರಾಗಣ: ಚಿತ್ರದ ಪ್ರಮುಖ ಪಾತ್ರದಲ್ಲಿ ಕನ್ನಡದ ಖ್ಯಾತ ನಟ ಶರತ್ ಲೋಹಿತಾಶ್ವರ್ ಅವರು ಅಭಿನಯಿಸಿದ್ದು, ಅವರೊಂದಿಗೆ ದೀಪಕ್ ರೈ ಪಾಣಾಜೆ, ಪುಷ್ಪರಾಜ್ ಬೋಳ್ಳಾರ್, ರೂಪಶ್ರೀ ವರ್ಕಾಡಿ, ಇಳಾ ವಿಟ್ಲ, ದೇವಿ ನಾಯರ್, ಪ್ರೀತೇಶ್ ಕುಮಾರ್, ಅನಿಲ್ ರಾಜ್ ಉಪ್ಪಳ, ರವಿ ವರ್ಕಾಡಿ, ಡಿ.ಬಿ.ಸಿ…
ಮಂಗಳೂರು: ಅಖಿಲ ಭಾರತ ತುಳು ಒಕ್ಕೂಟದ ಮಹಾಸಭೆಯು ಸಪ್ಟೆಂಬರ್ 21 ಆದಿತ್ಯವಾರ ಕಾವೂರು ಗಾಂಧಿನಗರದಲ್ಲಿರುವ ಮುಗ್ರೋಡಿ ಎನ್‌ಕ್ಲೇವ್‌ನ ಒಕ್ಕೂಟದ ಕಛೇರಿ ಸಭಾಂಗಣದಲ್ಲಿ ಬೆಳಿಗ್ಗೆ 10.30ರಿಂದ ಅಧ್ಯಕ್ಷ ಎ.ಸಿ. ಭಂಡಾರಿ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವುದು ಎಂದು ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ನಿರ್ಧರಿಸಲಾಯಿತು.ಅಖಿಲ ಭಾರತ ತುಳು ಒಕ್ಕೂಟ ದೇಶ ವಿದೇಶಗಳಲ್ಲಿ 48 ತುಳು ಸೇವಾ ಸಂಘ ಸಂಸ್ಥೆಗಳು ಇದರ ಸದಸ್ಯರಾಗಿ ತಮ್ಮ ತಮ್ಮ ಕ್ಷೇತ್ರದಲ್ಲಿ ನಿರಂತರ ತುಳು ಸಂಬಂಧಿ ಚಟುವಟಿಕೆಗಳನ್ನು ನಡೆಸುತ್ತಾ ತುಳು ಭಾಷೆ, ಸಂಸ್ಕೃತಿ, ಸಂಪ್ರದಾಯ, ಅಭಿವೃದ್ಧಿಯನ್ನು ಬೆಳೆಸುವಲ್ಲಿ ತಮ್ಮನ್ನು ತೊಡಗಿಸಿ ಯಶಸ್ವಿಗೊಳಿಸಿದ್ದಾರೆ.ಮಹಾಸಭೆಯಲ್ಲಿ ಮುಖ್ಯವಾಗಿ ತುಳು ಭಾಷೆಗೆ ಮಾನ್ಯತೆ, ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಖಿಲ ಭಾರತ ತುಳು ಒಕ್ಕೂಟ ಜಂಟಿಯಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ತುಳು ಭಾಷೆ ಶಾಲಾ ಕಾಲೇಜಿನ ಸಂಖ್ಯೆಯನ್ನು ವೃದ್ಧಿಸುವ ನಿಟ್ಟಿನಲ್ಲಿ ಚರ್ಚಿಸಿ, ಸೂಕ್ತ ರೂಪುರೇಷೆ ಹಾಗೂ ನಿರ್ಧಾರವನ್ನು ತೆಗೆದುಕೊಳ್ಳಲಿದೆ.ಅಖಿಲ ಭಾರತ ತುಳು ಒಕ್ಕೂಟ ಹಾಗೂ ಇದರ ಸದಸ್ಯ ಕೂಟಗಳು 25-26 ಸಾಲಿನಲ್ಲಿ ಹಮ್ಮಿಕೊಳ್ಳಲಿರುವ…
ಭಾರತೀಯ ಜನತಾ ಪಾರ್ಟಿ ಮಂಗಳೂರು ನಗರ ದಕ್ಷಿಣ ಮಂಡಲದ ಮಹಿಳಾ ಮೋರ್ಚಾದ ವತಿಯಿಂದ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ನಮ್ಮ ಕ್ಷೇತ್ರದವರೇ ಆಗಿರುವ ಶಿಕ್ಷಕಿ ಶ್ರೀಮತಿ ಶಾಂತಿ ಲೀನಾ ಪೈಸ್ ರವರನ್ನು ಅಭಿನಂದಿಸಲಾಯಿತು. ಇವರು ನಗರದ ಬಿಕರ್ನಕಟ್ಟೆಯ ನಾಲ್ಯಪದವು ಶಾಲೆಯಲ್ಲಿ ಹಲವು ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿ, ಪ್ರಸ್ತುತ ಈಗ ಬಂಟ್ವಾಳ ತಾಲೂಕಿನ ದೇವಸ್ಯ ಪಡೂರು ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರಿಗೆ ಈ ಬಾರಿ 2025-26ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಯು ದೊರಕಿರುತ್ತದೆ. ಈ ಕಾರ್ಯಕ್ರಮದಲ್ಲಿ ಮಂಡಲ ಅಧ್ಯಕ್ಷರಾದ ರಮೇಶ್ ಕಂಡೆಟ್ಟು, ಮಂಡಲದ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ, ಜಿಲ್ಲಾ ಕಾರ್ಯದರ್ಶಿ ಶ್ರೀಮತಿ ಪೂರ್ಣಿಮಾ, ಮಂಡಲ ಮಹಿಳಾ ಮೋರ್ಚಾದ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ರಾವ್, ಜಿಲ್ಲಾ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಹಾಗೂ ಮಹಿಳಾ ಮೋರ್ಚಾ ದ ಪ್ರಭಾರಿ ಶ್ರೀಮತಿ ಸಂಧ್ಯಾ ವೆಂಕಟೇಶ್, ಆ ಭಾಗದ ನಿಕಟಪೂರ್ವ ಮನಪಾ ಸದಸ್ಯರಾದ ಕಿಶೋರ್ ಕೊಟ್ಟಾರಿ, ಪೂರ್ವ…
ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲದ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 171 ನೇ ಜಯಂತಿ ಆಚರಣೆ ಅಂಗವಾಗಿ ನಗರದ ನಾರಾಯಣಗುರು ವೃತ್ತದಲ್ಲಿರುವ ಪೂಜ್ಯರ ಪ್ರತಿಮೆಗೆ ಶಾಸಕ ವೇದವ್ಯಾಸ ಕಾಮತ್ ರವರು ಪುಷ್ಪ ನಮನಗಳನ್ನು ಸಲ್ಲಿಸಿದರು. ನಂತರ ಮಾತನಾಡಿದ ಅವರು, ಪೂಜ್ಯರು ಸಾಮಾಜಿಕ ಪರಿವರ್ತನೆಯ ಹರಿಕಾರರಾಗಿ ಹಿಂದುಳಿದವರ ಸಹಿತ ಸರ್ವರ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಮಹಾನ್ ಸಂತ. ಕೇರಳದಲ್ಲಿ ಹುಟ್ಟಿದ ಅವರು ಅಲ್ಲಿನ ಅವ್ಯವಸ್ಥೆಯ ವಿರುದ್ಧ ಹಿಂದೂ ಸಮಾಜವನ್ನು ಎಚ್ಚರಿಸುವ ಕಾರ್ಯ ಮಾಡಿದ್ದರು. ಹಿಂದಿನ ಬಿಜೆಪಿ ಸರ್ಕಾರ ಅವಧಿಯಲ್ಲಿ ಪೂಜ್ಯರ ಗೌರವಾರ್ಥ ಮಂಗಳೂರಿನ ಹೃದಯ ಭಾಗದಲ್ಲಿ ನಾರಾಯಣಗುರು ವೃತ್ತವನ್ನು ನಿರ್ಮಿಸಲಾಗಿತ್ತಲ್ಲದೇ ಕುದ್ರೋಳಿಗೆ ಸಾಗುವ ರಸ್ತೆಗೆ ಗೋಕರ್ಣನಾಥ ರಸ್ತೆ ಎಂದು ನಾಮಕರಣ ಮಾಡಲಾಗಿತ್ತು. ನಂತರ ಉರ್ವದಲ್ಲಿ ಗುರುಗಳ ಸುಂದರವಾದ ಮಂದಿರ ಕಟ್ಟಲಾಗಿತ್ತು. ಅಲ್ಲದೇ ನಾರಾಯಣ ಗುರು ಅಭಿವೃದ್ಧಿ ನಿಗಮವನ್ನೂ ಸಹ ಅಸ್ತಿತ್ವಕ್ಕೆ ತರಲಾಗಿತ್ತು ಎಂದರು. ಆದರೆ ಕಳೆದ ಎರಡೂವರೆ ವರ್ಷಗಳಿಂದ ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ನಾರಾಯಣ ಗುರು ಅಭಿವೃದ್ಧಿ…
ಮಂಗಳೂರು, ಸೆಪ್ಟೆಂಬರ್ 7:ಬಜ್ಪೆ ಪಟ್ಟಣ ಪಂಚಾಯತ್ ಸಿಬ್ಬಂದಿಗಳ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ಹಾಗೂ ಪಂಚಾಯತಿನ ಅಭಿವೃದ್ಧಿಗೆ ಅಡ್ಡಿಯಾಗುತ್ತಿರುವ ಶಕ್ತಿಗಳನ್ನು ಕಡಿವಾಣ ಹಾಕುವಂತೆ ಆಗ್ರಹಿಸಿ, ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ನಿಯೋಗ ಇಂದು ಮಾನ್ಯ ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು ನಿಯೋಗವು ಸರ್ಕಾರದ ಪ್ರಭಾವಿ ಹಸ್ತಕ್ಷೇಪದ ಅಗತ್ಯತೆಯನ್ನು ಮನಗಟ್ಟಿಸಿ, ಸ್ಥಳೀಯ ಅಧಿಕಾರಿಗಳಿಗೆ ಧೈರ್ಯ ತುಂಬಿಸುವಂತಹ ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಿದೆ. ಅಲ್ಲದೆ, ಅಧಿಕಾರಿಗಳ ವಿರುದ್ಧ ದೂರುಗಳನ್ನು ಸಲ್ಲಿಸುವ ಮೂಲಕ ಆಡಳಿತ ಕಾರ್ಯಗಳಲ್ಲಿ ಅಡಚಣೆ ಸೃಷ್ಟಿಸುತ್ತಿರುವ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಯಿತು. ಈ ನಿಯೋಗದಲ್ಲಿ ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ಸಂಚಾಲಕ ಸಿರಾಜ್ ಬಜ್ಪೆ, ದಲಿತ ಸಂಘ ಸಮಿತಿಯ ರಾಜ್ಯ ಸಂಚಾಲಕ ಎಂ. ದೇವದಾಸ್, ಸಹ ಸಂಚಾಲಕ ಇಸ್ಮಾಯಿಲ್ ಇಂಜಿನಿಯರ್, INTUC ಜಿಲ್ಲಾಧ್ಯಕ್ಷ ನಿಸಾರ್ ಕರಾವಳಿ, ಮಹಿಳಾ ನಾಯಕಿ ಮತ್ತು ಕಂದಾವರ ಗ್ರಾಮ ಪಂಚಾಯತ್ ಸದಸ್ಯ ವಿಜಯ ಗೋಪಾಲ್ ಸುವರ್ಣ, ಸದಸ್ಯರಾದ ಮಾಲತಿ,…
ಲೀನಾ ಡಿ ಕೊಸ್ಟಾ, ಕುಕ್ಕಿಕಟ್ಟೆ ವಾರ್ಡ್, ಕೊಳಲಗಿರಿಶನಿವಾರ, 6 ಸೆಪ್ಟೆಂಬರ್ 2025ರಂದು ನಿಧನರಾದರು ಎಂದು ತಿಳಿಸಲು ವಿಷಾದಿಸುತ್ತೇವೆ ಅವರು ದಿ. ಪೀಟರ್ ಡಿ ಕೊಸ್ಟಾ ಅವರ ಪತ್ನಿ. ಫರ್ಮಿನ್ / ಜೆರಾಲ್ಡ್ ಮಸ್ಕರೆನ್ಹಾಸ್, ಸುನಿತಾ / ಸೈಮನ್ ಫರ್ನಾಂಡಿಸ್, ಮೆಲ್ವಿನ್ / ಮೇರಿ ಡಿ ಕೊಸ್ಟಾ ಮತ್ತು ಅಲ್ವಿನ್ / ಪ್ಯುರಿನ್ ಡಿ ಕೊಸ್ಟಾ ಅವರ ತಾಯಿ. ಜೋಸ್ಟನ್ ಮಸ್ಕರೆನ್ಹಾಸ್, ಆಸ್ಟಿನ್ ಫರ್ನಾಂಡಿಸ್, ಅವನಿ ಫರ್ನಾಂಡಿಸ್, ಇಯಾನ್ ಡಿ ಕೊಸ್ಟಾ, ಶೋನ್ ಡಿ ಕೊಸ್ಟಾ, ಅನ್ನಿಯಾ ಪೆರ್ಲ್ ಡಿ ಕೊಸ್ಟಾ ಇವರ ಅಜ್ಜಿ. ಅವರ ಅಂತಿಮ ಯಾತ್ರೆ ಭಾನುವಾರ, 7 ಸೆಪ್ಟೆಂಬರ್ 2025ರಂದು ಮಧ್ಯಾಹ್ನ 3:15 ಕ್ಕೆ ನಿವಾಸ ವಾದ “ಡಿಲೈಟ್, ಗೋಳಿಕಟ್ಟೆ”ಯಿಂದ ಪ್ರಾರಂಭವಾಗಿ ಕೊಳಲಗಿರಿ ಸೆಕ್ರೇಡ್ ಹಾರ್ಟ್ ಚರ್ಚ್ ಗೆ ತೆರಳಲಿದೆ. ನಂತರ ಮಧ್ಯಾಹ್ನ 3:30 ಕ್ಕೆ ಪವಿತ್ರ ಬಲಿ ಪೂಜೆ ನಡೆಯಲಿದೆ.
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ನೀಲಾವರ ಗ್ರಾಮದಲ್ಲಿ ಅಂದರ್ ಬಾಹರ್ ಇಸ್ಪೀಟು ಜುಗಾರಿ ಆಟ ನಡೆಯುತ್ತಿದ್ದ ಮನೆ ಮೇಲೆ ಪೊಲೀಸರು ದಾಳಿ ನಡೆಸಿ 11 ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ದಾಳಿ ವಿವರ: 2025ರ ಸೆಪ್ಟೆಂಬರ್ 5 ರಂದು ಸಂಜೆ 7:30ಕ್ಕೆ ಬ್ರಹ್ಮಾವರ ಪೊಲೀಸ್ ಠಾಣೆಯ ಉಪನಿರೀಕ್ಷಕ ಅಶೋಕ್ ಮಾಳಾಬಗಿ ಅವರ ನೇತೃತ್ವದಲ್ಲಿ ತಂಡವು ದಾಳಿ ನಡೆಸಿತು. ನೀಲಾವರ ಗ್ರಾಮದ ದೇವಸ್ಥಾನ ಮಾರ್ಗದ ಬಳಿ ಇರುವ ಮನೆಯಲ್ಲಿ ಈ ಜುಗಾರಿ ಆಟ ನಡೆಯುತ್ತಿತ್ತು ಎಂಬ ಖಚಿತ ಮಾಹಿತಿ ಮೇರೆಗೆ ಈ ದಾಳಿ ನಡೆಸಲಾಯಿತು. ಬಂಧಿತರು: 1. ಸದಾಶಿವ ದೇವಾಡಿಗ (48), ನೀಲಾವರ 2. ಪ್ರಸನ್ನ (43), 52 ಹೇರೂರು 3. ರಜಾಕ್ (55), 52 ಹೇರೂರು 4. ಭಾಸ್ಕರ (48), ಕನ್ನಾರು ಪೇತ್ರಿ, ಚೇರ್ಕಾಡಿ 5. ಅಶೋಕ (47), ಉದ್ದಿನಹಿತ್ಲು ಕೊಡವೂರು 6. ಹರೀಶ್ ನಾಯ್ಕ (35), ತೆಂಕನಿಡಿಯೂರು 7. ಚಂದ್ರಹಾಸ (40), ಹನಮಂತ ನಗರ, ಪುತ್ತೂರು 8. ರವಿಕುಮಾರ (57), ಬೇಳೂರು,…
ಪಡುಬಿದ್ರಿ, ಸೆಪ್ಟೆಂಬರ್ 6:ಅಕ್ರಮ ಗೋ ಸಾಗಾಟ ವೇಳೆ ವಾಹನವನ್ನು ಪೊಲೀಸ್ ಸಿಬ್ಬಂದಿಗಳ ಮೇಲೆ ಓಡಿಸಿ ಹತ್ಯೆಗೆ ಯತ್ನಿಸಿದ ಘಟನೆ ಪಡುಬಿದ್ರಿಯಲ್ಲಿ ನಡೆದಿದೆ. ಈ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಬಂಧಿತರನ್ನು ಮಹಮ್ಮದ್ ಅಜೀಮ್ ಕಾಪು ಮತ್ತು ಮಹಮ್ಮದ್ ರಾಜಿಕ್ ಬಜಪೆ ಎಂದು ಗುರುತಿಸಲಾಗಿದೆ. ಇಬ್ಬರೂ ಬಜಪೆ ಹಾಗೂ ಕಾಪು ಪ್ರದೇಶದ ನಿವಾಸಿಗಳಾಗಿದ್ದು, ಇವರ ವಿರುದ್ಧ ಇದಕ್ಕೂ ಮುನ್ನವೂ ಅಕ್ರಮ ಗೋ ಸಾಗಾಟ ಹಾಗೂ ದನ ಕಳ್ಳತನದ ಪ್ರಕರಣಗಳು ದಾಖಲಾಗಿದ್ದವು. ಪೊಲೀಸ್ ಮೂಲಗಳ ಪ್ರಕಾರ, ಘಟನೆ ಶುಕ್ರವಾರ ಮುಂಜಾನೆ ಹೆಜಮಾಡಿ ಟೋಲ್ ಗೇಟ್ ಬಳಿ ನಡೆದಿದೆ. ಗಂಗೊಳ್ಳಿ ಠಾಣಾ ಪಿಎಸ್ಐ ಮತ್ತು ಸಿಬ್ಬಂದಿ, ದನ ಕಳವು ಪ್ರಕರಣದ ತನಿಖೆ ಹಿನ್ನೆಲೆಯಲ್ಲಿ ಟೋಲ್ ಬಳಿ ಇಂಗಿತದೊಂದಿಗೆ ಕಾಯುತ್ತಿದ್ದರು. ಈ ವೇಳೆ ಒಂದು ಫಾರ್ಚುನರ್ ಕಾರು ಜೋರಾಗಿ ಅಲ್ಲಿ ಪ್ರವೇಶಿಸಿ, ಕಾರಿನೊಳಗೆ ಐದಾರು ದನಗಳನ್ನು ಹಿಂಸಾತ್ಮಕವಾಗಿ ಕಟ್ಟಿ ಸಾಗಿಸುತ್ತಿದ್ದ ದೃಶ್ಯ ಕಂಡುಬಂದಿತು. ಪೊಲೀಸರು ಕಾರು ನಿಲ್ಲಿಸಿ ವಿಚಾರಣೆ ಆರಂಭಿಸಿದ್ದಾಗ, ಆರೋಪಿಗಳು “ನಮ್ಮನ್ನು…
ಮಂಗಳೂರು: ಮಂಗಳೂರು ಮಹಾನಗರದ ವಿವಿಧ ಭಾಗಗಳಲ್ಲಿ ಸುರಿದ ಭಾರಿ ಮಳೆಯ ಪರಿಣಾಮವಾಗಿ ರಸ್ತೆಗಳು ಹದಗೆಟ್ಟಿರುವುದು, ಹೊಂಡಗಳಿಂದಾಗಿ ವಾಹನ ದುರಂತಗಳು ಸಂಭವಿಸುತ್ತಿರುವುದು, ಕಸದ ಅತಿ ಹೆಚ್ಚು ಸಂಗ್ರಹ, ಬೀದಿ ದೀಪಗಳ ನಿಷ್ಕ್ರಿಯತೆ ಮುಂತಾದ ನಗರ ಸಮಸ್ಯೆಗಳಿಗೆ ಸಂಬಂಧಿಸಿ ಶಾಸಕರು ವೇದವ್ಯಾಸ ಕಾಮತ್ ಅವರು ಗಂಭೀರ ರೀತಿಯಲ್ಲಿ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ನಗರದ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಶಾಸಕರು ಮಹಾನಗರ ಪಾಲಿಕೆ ಅಧಿಕಾರಿಗಳ ಸಭೆ ನಡೆಸಿ ತಕ್ಷಣದ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. “ಮಳೆಯ ಪ್ರಮಾಣ ಎಷ್ಟೇ ಇದ್ದರೂ ತಾತ್ಕಾಲಿಕ ಕ್ರಮ ಕೈಗೊಳ್ಳುವುದು ಪಾಲಿಕೆಯಿಂದ ನಿರೀಕ್ಷಿತ. ವಾಹನ ಸವಾರರು ಹೊಂಡಗಳಿಂದಾಗಿ ಅಪಾಯಕ್ಕೆ ಒಳಗಾಗುತ್ತಿದ್ದಾರೆ. ಸಾರ್ವಜನಿಕ ಸುರಕ್ಷತೆ ಅತ್ಯಂತ ಪ್ರಮುಖ,” ಎಂದು ಅವರು ಒತ್ತಾಯಿಸಿದರು. ನಗರದ ಗಾಂಧಿನಗರ ಶಾಲೆ ಬಳಿಯೂ ಮರೋಳಿಯ ಬಸ್ ನಿಲ್ದಾಣದಲ್ಲಿಯೂ ಕಸದ ಸಮಸ್ಯೆ ತೀವ್ರವಾಗಿದ್ದು, ಇಂತಹ ಅನೇಕ ಸ್ಥಳಗಳಿಂದ ಸಾರ್ವಜನಿಕರು ದೂರು ಸಲ್ಲಿಸಿದ್ದಾರೆ. ಒಂದು ಕಾಲದಲ್ಲಿ ‘ಸ್ವಚ್ಛತಾ ಬ್ರ್ಯಾಂಡ್’ ಎಂದೇ ಗುರುತಿಸಿಕೊಂಡ ಮಂಗಳೂರು ಇಂದು ಕಸದ ದುರವಸ್ಥೆಯಲ್ಲಿರುವುದು ವಿಷಾದನೀಯವಾಗಿದೆ ಎಂದು…
ತುಳುನಾಡ ಸೂರ್ಯ ಪ್ರತಿಕೆ ಚಂದಾದಾರರಾಗಿ ಪ್ರೋತ್ಸಾಹಿಸಬೇಕಾಗಿ ವಿನಂತಿ.
ತುಳುನಾಡಿನ ಅಚಾರ ವಿಚಾರ ಪರಂಪರೆ ಮತ್ತು ಪ್ರಸ್ತುತ ಹಲವಾರು ವಿಚಾರಗಳನ್ನು ಪ್ರಕಟಿಸುವ ಪತ್ರಿಕೆ ಯಾಗಿದೆ. ತಾವು ಚಂದಾದಾರ ರಾಗಿದಲ್ಲಿ tulunadasurya.com web News ನಲ್ಲಿ ಪ್ರತಿ ದಿನದ ನ್ಯೂಸ್ ಗಳು ನೀವು ವೀಕ್ಷಿಸಬಹುದು . ಮತ್ತು ಪ್ರತಿ ತಿಂಗಳು ನಿಮ್ಮ ವಿಳಾಸಕ್ಕೆ ಗೌರವಯುತ ವಾಗಿ ಅಂಚೆ ಮೂಲಕ ತುಳುನಾಡ ಸೂರ್ಯ ಪ್ರತಿಕೆ ಮನೆ ತಲುಪುತ್ತದೆ.
