ಅಮಾಸೆಬೈಲು: ಕುಂದಾಪುರ ಸಮೀಪದ ಅಮಾಸೆಬೈಲು ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ಮರಳು ಸಂಗ್ರಹಿಸಿ ಸಾಗಾಟ ಮಾಡುತ್ತಿದ್ದಾಗ ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.
ಘಟನೆ ವಿವರ: ದಿನಾಂಕ 14/05/2025 ರಂದು ಅಶೋಕ್ ಕುಮಾರ್ ಪೊಲೀಸ್ ಉಪನಿರೀಕ್ಷಕರು ಅಮಾಸೆಬೈಲು ಠಾಣೆ ಇವರು ಠಾಣಾ ಸರಹದ್ದಿನಲ್ಲಿ ಇಲಾಖಾ ಜೀಪು ನಂಬ್ರ KA-20 G-375 ರಲ್ಲಿ ಠಾಣಾ ಸಿಬ್ಬಂದಿಯವರಾದ ರಾಘವೇಂದ್ರ ಕೆ, ಸಂಪತ್ ಕುಮಾರ್ ಹಾಗೂ ಜೀಪು ಚಾಲಕ ಸುಧೀರ ಇವರುಗಳೊಂದಿಗೆ ಮಡಾಮಕ್ಕಿ ಗ್ರಾಮದ ಮಾಂಡಿ ಮೂರುಕೈ ಬಳಿ ರೌಂಡ್ಸ್ ಕರ್ತವ್ಯದಲ್ಲಿರುವಾಗ 11:00 ಗಂಟೆಗೆ ಅಮಾಸೆಬೈಲು ಠಾಣಾ ವ್ಯಾಪ್ತಿಯ 04 ನೇ ಹಗಲು ಗ್ರಾಮಗಸ್ತು ಕರ್ತವ್ಯದ ಸಿಬ್ಬಂದಿ ದೇವರಾಜ್ ಇವರು ದೂರವಾಣಿ ಕರೆ ಮಾಡಿ ಬಾತ್ಮೀದಾರರೊಬ್ಬರು ಬೀಟು ವ್ಯಾಪ್ತಿಯ ಮಡಾಮಕ್ಕಿ ಗ್ರಾಮದ ಕೆಲಾರಬೆಟ್ಟು ಎಂಬಲ್ಲಿ ಸೀತಾನದಿ ಹೊಳೆಯಿಂದ ಯಾರೋ ವ್ಯಕ್ತಿಗಳು ಅಕ್ರಮವಾಗಿ ಸರಕಾರದ ಪರವಾನಿಗೆಯಿಲ್ಲದೆ ಮರಳನ್ನು ಸಂಗ್ರಹಿಸಿ ಇಟ್ಟಿರುವುದಾಗಿ ತಿಳಿಸಿರುವುದಾಗಿ ಮಾಹಿತಿ ನೀಡಿರುತ್ತಾರೆ. ಬೀಟ್ ಸಿಬ್ಬಂದಿಯವರು ನೀಡಿದ ಖಚಿತ ಮಾಹಿತಿಯ ಮೇರೆಗೆ ನಾನು ಸದ್ರಿ ಸ್ಥಳಕ್ಕೆ ಹೋಗಿ ನೋಡಲಾಗಿ ಮಡಾಮಕ್ಕಿ ಗ್ರಾಮದ ಕೆಲಾರಬೆಟ್ಟು ಎಂಬಲ್ಲಿ ಸರಕಾರಿ ಜಾಗದಲ್ಲಿರುವ ಎಡಮಲೆಯಿಂದ ಹೆಬ್ರಿ ಕಡೆಗೆ ಹರಿಯುವ ಸೀತಾನದಿ ಹೊಳೆಯ ಮಧ್ಯದಲ್ಲಿರುವ ಮರಳಿನ ದಿಬ್ಬದಿಂದ ಸುಮಾರು 50 ಮೀಟರ್ ದೂರದಲ್ಲಿ ಹೊಳೆಯ ದಡದ ಸರಕಾರಿ ಜಾಗದಲ್ಲಿ ಯಾರೋ ಆಪಾದಿತರು ಅಕ್ರಮವಾಗಿ ಸಾಗಾಟ ಮಾಡಲು ಮರಳನ್ನು ಹೊಳೆಯಿಂದ ಕಳವು ಮಾಡಿ ಎರಡು ರಾಶಿ ಮಾಡಿ ಸಂಗ್ರಹಿಸಿಟ್ಟಿರುವುದು ಕಂಡು ಬಂದಿರುತ್ತದೆ. ಸ್ಥಳದಲ್ಲಿ ಪರಿಶೀಲಿಸಿದಲ್ಲಿ ಸರಕಾರಕ್ಕೆ ಸೇರಿದ ಜಾಗದಲ್ಲಿ ಹರಿಯುವ ಸೀತಾನದಿ ಹೊಳೆಯಿಂದ ಕಳವು ಮಾಡಿ ಸಂಗ್ರಹಿಸಿಟ್ಟ ಎರಡು ಮರಳು ರಾಶಿಗಳಲ್ಲಿ ಒಂದು ರಾಶಿಯಲ್ಲಿ ಸುಮಾರು 2 ಯುನಿಟ್ನಷ್ಟು ಮರಳು ಹಾಗೂ ಇನ್ನೊಂದು ರಾಶಿಯಲ್ಲಿ ಸುಮಾರು 1 ಯುನಿಟ್ನಷ್ಟು ಮರಳು ಇದ್ದು ಸುತ್ತ ಮುತ್ತಲಿನ ಪರಿಸರದಲ್ಲಿ ವಿಚಾರಿಸಿದಲ್ಲಿ ಯಾರು ತೆಗೆದು ಸಂಗ್ರಹಿಸಿಟ್ಟಿರುವರೆಂದು ಯಾವುದೇ ಸರಿಯಾದ ಮಾಹಿತಿ ದೊರೆಯಲಿಲ್ಲ ಸಂಗ್ರಹಿಸಿಟ್ಟ ಮರಳಿನ ಅಂದಾಜು ಮೌಲ್ಯ ಸುಮಾರು 9,000 ರೂಪಾಯಿಗಳಾಗಬಹುದು. ಮರಳನ್ನು ಪಂಚರ ಸಮಕ್ಷಮ ಮಹಜರು ಮುಖೇನ ಸ್ವಾಧೀನಪಡಿಸಿಕೊಂಡು ಒಂದು ಟಿಪ್ಪರ್ ನಲ್ಲಿ ತುಂಬಿಸಿ ಠಾಣೆಗೆ ತಂದು ಇರಿಸಲಾಗಿರುತ್ತದೆ. ಅಕ್ರಮವಾಗಿ ಲಾಭ ಗಳಿಸುವ ಉದ್ದೇಶದಿಂದ ಆರೋಪಿತರು ಸಂಘಟಿತವಾಗಿ ಯಾವುದೇ ರಾಜಧನವನ್ನು ಪಾವತಿ ಮಾಡದೇ ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಪರವಾನಿಗೆಯನ್ನು ಪಡೆದುಕೊಳ್ಳದೇ ಅಕ್ರಮವಾಗಿ ಮರಳನ್ನು ಕಳವು ಮಾಡಿ ದಡದಲ್ಲಿ ಸಂಗ್ರಹಿಸಿ ಇಟ್ಟಿರುವುದಾಗಿದೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 15/2025 ಕಲಂ: 303(2), 112 BNS-2023 ಮತ್ತು ಕಲಂ:4(1-A), 21(4), MMRD Act ರಂತೆ ಪ್ರಕರಣ ದಾಖಲಾಗಿರುತ್ತದೆ.
