Author: Tulunada Surya

ಹಾಸನ, ಸೆಪ್ಟೆಂಬರ್ 12 – ಹಾಸನ ತಾಲ್ಲೂಕಿನ ಮೊಸಳೆಹೊಸಳ್ಳಿ ಗ್ರಾಮದಲ್ಲಿ ಇಂದು ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿ 373ರ ಬಳಿ ನಡೆದ ಗಣೇಶ ಮೆರವಣಿಗೆಯ ವೇಳೆ ಭೀಕರ ಅಪಘಾತ ಸಂಭವಿಸಿದ್ದು, ಲಾರಿಯೊಂದು ನಿಯಂತ್ರಣ ತಪ್ಪಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಜನರ ಮೇಲೆ ಹರಿದ ಪರಿಣಾಮ ಕನಿಷ್ಠ 8 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ 15ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆ ಮೂಲಗಳ ಪ್ರಕಾರ ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಸಾವಿರಾರು ಭಕ್ತರು ಡಿಜೆ ಸಂಗೀತದೊಂದಿಗೆ ಸಂಭ್ರಮದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದಾಗ ಈ ದುರ್ಘಟನೆ ಸಂಭವಿಸಿದ್ದು, ಘಟನೆಯ ದೃಶ್ಯವಿವೆಡೆ ವೈರಲ್ ಆಗುತ್ತಿವೆ. ಸ್ಥಳೀಯರು ಹಾಗೂ ಪೊಲೀಸರ ನೆರವಿನಿಂದ ಗಾಯಾಳುಗಳಿಗೆ ತಕ್ಷಣವೇ ನೆರವು ನೀಡಲಾಯಿತು. ಪ್ರತ್ಯಕ್ಷದರ್ಶಿಗಳ ಹೇಳಿಕೆಯ ಪ್ರಕಾರ, ಮೆರವಣಿಗೆ ಸಾಗುತ್ತಿರುವ ಸಮಯದಲ್ಲಿ ವೇಗವಾಗಿ ಬಂದ ಲಾರಿ ನಿಯಂತ್ರಣ ತಪ್ಪಿ ನೇರವಾಗಿ ಜನರ ಗುಂಪಿನಲ್ಲಿ ನುಗ್ಗಿದ್ದು, ಭಯಾನಕ ಪರಿಸ್ಥಿತಿ ಉಂಟಾಗಿದೆ. ಪೊಲೀಸರು ಈಗಾಗಲೇ ಪ್ರಕರಣ ದಾಖಲಿಸಿಕೊಂಡಿದ್ದು, ಲಾರಿ ಚಾಲಕನನ್ನು…

Read More

ಕಠ್ಮಂಡು: ನೇಪಾಳದಲ್ಲಿ ರಾಜಕೀಯ ಬಿರುಗಾಳಿ ಮುಂದುವರಿದಿರುವ ನಡುವೆ, ಸುಪ್ರೀಂ ಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಅವರನ್ನು ಮಧ್ಯಂತರ ಪ್ರಧಾನಿಯಾಗಿ ನೇಮಕ ಮಾಡಲಾಗಿದೆ. ಈ ಮೂಲಕ ಅವರು ನೇಪಾಳದ ಇತಿಹಾಸದಲ್ಲಿ ಪ್ರಧಾನಿಯಾಗಿ ಸೇವೆ ಸಲ್ಲಿಸುತ್ತಿರುವ ಮೊದಲ ಮಹಿಳೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ರಾಜಕೀಯ ಪಟಾಪಟಕ್ಕೆ ಕರ್ಕಿಯ ಆಗಮನಪ್ರಧಾನಿ ಕೆ.ಪಿ. ಶರ್ಮಾ ಒಲಿ ನೇತೃತ್ವದ ಸರ್ಕಾರ ಭ್ರಷ್ಟಾಚಾರ ಆರೋಪಗಳು, ಸಾಮಾಜಿಕ ಮಾಧ್ಯಮ ನಿಷೇಧ, ಹಾಗೂ ಯುವ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಪತನಗೊಂಡಿದೆ. ಈ ಹಿನ್ನೆಲೆಯಲ್ಲಿ ಮಧ್ಯಂತರ ಸರ್ಕಾರ ರಚನೆಗಾಗಿ ನಡೆದ ಎರಡು ದಿನಗಳ ಮಾತುಕತೆಗಳಲ್ಲಿ ಕೊನೆಗೆ 73 ವರ್ಷದ ಸುಶೀಲಾ ಕರ್ಕಿ ಆಯ್ಕೆಯಾಗಿದ್ದಾರೆ. ಪ್ರಮಾಣ ವಚನ ಸಮಾರಂಭಪ್ರಮಾಣ ವಚನ ಸಮಾರಂಭದಲ್ಲಿ ರಾಷ್ಟ್ರಪತಿ ರಾಮ್ ಚಂದ್ರ ಪೌಡೆಲ್, ಸೇನಾ ಮುಖ್ಯಸ್ಥ ಆಶಾಕ್ ರಾಜ್ ಸೆಗ್ಡೆಲ್, ಹಾಗೂ ವಿವಿಧ ಪ್ರಜಾಪ್ರತಿನಿಧಿಗಳು ಉಪಸ್ಥಿತರಿದ್ದರು. ಮಧ್ಯಂತರ ಪ್ರಧಾನಿಯ ಸ್ಥಾನಕ್ಕೆ ಎಂಜಿನಿಯರ್ ಕುಲ್ಮನ್ ಗುಲ್ಸಿಂಗ್ ಮತ್ತು ಕಠ್ಮಂಡು ಮೇಯರ್ ಬಾಲೇಂದ್ರ ಶಾ ಅವರ ಹೆಸರುಗಳು ಸಹ ಮುಂದಾಗಿದ್ದರೂ, ಅಂತಿಮ ಆಯ್ಕೆಯಲ್ಲಿ…

Read More

ಉಡುಪಿ: ಉಡುಪಿದಿಂದ ಮಂಗಳೂರು ಕಡೆಗೆ ಸಾಗುವ ರಾಷ್ಟ್ರೀಯ ಹೆದ್ದಾರಿ (NH-66) ವಿಪರೀತ ಗುಂಡಿಗಳಿಂದ ದುರಸ್ಥಿಯ ಅಗತ್ಯಕ್ಕೀಳಾಗಿದೆ. ಹೆದ್ದಾರಿಯ ಮೇಲೆ ಮೂಡಿರುವ ದೊಡ್ಡ ದೊಡ್ಡ ಗುಂಡಿಗಳು ವಾಹನ ಸಂಚಾರವನ್ನು ತೀವ್ರವಾಗಿ ವ್ಯತ್ಯಯಗೊಳಿಸುತ್ತಿದ್ದು, ಅಪಘಾತಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಈ ಮಾರ್ಗದ ಮೂಲಕ ದಿನನಿತ್ಯ ಸಂಚಾರಿಸುವ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು, ನವಮಂಗಳೂರು ಬಂದರು ಪ್ರದೇಶ , ಬೈಕಂಪಾಡಿ ಕೈಗಾರಿಕಾ ಪ್ರದೇಶಗಳಿಗೆ ತೆರಳುವ ಕಾರ್ಮಿಕರು ಹಾಗೂ ಸಾರ್ವಜನಿಕರು ಭಯಭೀತರಾಗಿ ಪ್ರಯಾಣಿಸುವ ಸ್ಥಿತಿ ನಿರ್ಮಾಣವಾಗಿದೆ. ಈ ರಸ್ತೆ ದುಸ್ಥಿತಿಯು ಹಲವಾರು ಅಮೂಲ್ಯ ಜೀವಗಳನ್ನು ಬಲಿ ಪಡೆದಿದ್ದು, ಸಾರ್ವಜನಿಕರಲ್ಲಿ ಆಕ್ರೋಶ ಉಂಟುಮಾಡಿದೆ. ಇತ್ತೀಚೆಗಷ್ಟೆ, ದಕ್ಷಿಣ ಕನ್ನಡ ಜಿಲ್ಲೆಯ ಕೂಳೂರಿನಲ್ಲಿ ಹೆದ್ದಾರಿಯಲ್ಲಿದ್ದ ಗುಂಡಿಯಿಂದ ಸಂಭವಿಸಿದ ಅಪಘಾತದಲ್ಲಿ ಮಹಿಳೆಯೊಬ್ಬರು ಜೀವ ಕಳೆದುಕೊಂಡಿದ್ದಾರೆ. ಈ ದುರಂತದ ಹಿನ್ನೆಲೆಯಲ್ಲಿ, ತುಳುನಾಡ ರಕ್ಷಣಾ ವೇದಿಕೆ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ಅವರು ತ್ವರಿತ ಕ್ರಮಕ್ಕೆ ಆಗ್ರಹಿಸಿದ್ದಾರೆ. “ರಸ್ತೆಗಳ ಸ್ಥಿತಿ ಹದಗೆಟ್ಟು, ಪ್ರಾಣಾಪಾಯದ ಮಟ್ಟಿಗೆ ತಲುಪಿದೆ. ಇನ್ನಷ್ಟು ಅಮೂಲ್ಯ ಜೀವಗಳು ಬಲಿಯಾಗದಂತೆ ಜಿಲ್ಲಾಡಳಿತ…

Read More

ವಯೋ ಸಮ್ಮಾನ್ ಪುರಸ್ಕೃತ ಸಾಹಿತಿ ಭೋಜ ಸುವರ್ಣ ಅವರ ಸಾಹಿತ್ಯದ 1971 ಫೆಬ್ರವರಿ 19 ರಂದು ಇತಿಹಾಸದಲ್ಲಿ ಮೊದಲ ತುಳು ಚಿತ್ರವಾಗಿ ಎನ್ನ ತಂಗಡಿ ಬಿಡುಗಡೆ ಕಂಡಿತ್ತು. ಆದರೆ ಆರ್ಥಿಕ ಕಾರಣಗಳಿಂದ ಅಂದಿನ ಗ್ರಾಮೋಪೋನ್ ನಲ್ಲಿ ಅದರ ಹಾಡುಗಳು ಬಿಡುಗಡೆಯಾಗದೆ ಜನ ಸಾಮಾನ್ಯರನ್ನು ಈ ಹಾಡುಗಳು ತಲುಪಲು ಸಾಧ್ಯವಾಗಲಿಲ್ಲ. ಈ ಕೊರಗು ಸಾಹಿತಿ ಭೋಜ ಸುವರ್ಣರನ್ನು ಸದಾ ಕೊರೆಯುತ್ತಿತ್ತು.ವಯೋ ಸಮ್ಮಾನ್ ಸಮಯದಲ್ಲಿ ಇದನ್ನು ಮನಗಂಡ ಐಲೇಸಾ ಆ ಹಾಡಿನ ಪುನರ್ ಸೃಷ್ಟಿಗೆ ಸಂಕಲ್ಪ ಮಾಡಿತ್ತು.ಅದೀಗ ನನಸಾಗುತ್ತಿದೆ. ‘ಮನಸ್ಸ್ ನ್ ನಿರ್ಮಲ ದೀದ್ ಬಾಳ್ಂಡ ಅವ್ವೇ ಒಂಜಿ ಮಂದಿರಾ’ ಎನ್ನುವ ಸಮಾಜ ಮುಖಿ ಸಂದೇಶದ ಆ ಹಾಡನ್ನು ವಿ.ಮನೋಹರ್ ಭೋಜ ಸುವರ್ಣ ಅವರ ಧ್ವನಿಯಲ್ಲೇ ಹಾಡಿಸಿ ಧ್ವನಿ ಮುದ್ರಿಸಿದ್ದಾರೆ. ಮೂಲ ಹಾಡಿನ ರಾಗ ಸಂಯೋಜನೆಯಲ್ಲಿಯೇ ಹಾಡು ಮೂಡಿ ಬಂದಿದ್ದು ಎಂಭತ್ತೈದರ ಹರೆಯದ ಭೋಜ ಸುವರ್ಣ ಶಕ್ತಿಮೀರಿ ಹಾಡಿ ಅದಕ್ಕೊಂದು ನ್ಯಾಯ ಒದಗಿಸಿದ್ದಾರೆ. ಇದರ ಜೊತೆಗೆ ಅವರೇ ಸಾಹಿತ್ಯ ನೀಡಿದ ”ಎನ್ನ ಜಾಗೆ ಉಂದು”…

Read More

ಮಂಗಳೂರು : ಕದರಿಕಾ ಚಾರಿಟೇಬಲ್ ಟ್ರಸ್ಟ್ (ರಿ) ಇದರ ಅಂಗ ಸಂಸ್ಥೆಯಾದ ಕದ್ರಿ ಕ್ರಿಕೆಟರ್ಸ್‌ (ರಿ) ಆಯೋಜಿಸುವ ಹದಿನಾರನೇ ವರ್ಷದ ಕದ್ರಿ ಸ್ಮಾರ್ ನೈಟ್ ಕಾರ್ಯಕ್ರಮವು ದಿನಾಂಕ 15/09/2025 ಸೋಮವಾರ, ಕದ್ರಿ ಮೊಸರು ಕುಡಿಕೆ ಉತ್ಸವದ ಸಂದರ್ಭದಲ್ಲಿ ಸಂಜೆ 6ರಿಂದ ಕದ್ರಿ ಮೈದಾನದಲ್ಲಿ ಅದ್ದೂರಿಯಾಗಿ ನಡೆಯಲಿದೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷರಾದ ಕದ್ರಿ ಮನೋಹರ್ ಶೆಟ್ಟಿ ಅವರು ತಿಳಿಸಿದ್ದಾರೆ ಈ ಬಾರಿ ಖ್ಯಾತ ಹಿನ್ನೆಲೆ ಗಾಯಕ ಶ್ರೀ ರಾಜೇಶ್ ಕೃಷ್ಣನ್, ಕನ್ನಡ ಸಿನಿಮಾ ನಟಿ ನಿಮಿಕ ರತ್ನಾಕರ್ ಹೆಸರಾಂತ, ಹಿನ್ನೆಲೆ ಗಾಯಕ ಶಶಾಂಕ್ ಶೇಷಗಿರಿ, ಜೀ ಸರಿಗಮಪ ಜೂರಿ ಶ್ರುತಿ ಪ್ರಹ್ಲಾದ್, ಹೆಸರಾಂತ ಹಿನ್ನೆಲೆ ಗಾಯಕ ಅನಿರುದ್ಧ ಶಾಸ್ತ್ರಿ ಬಹುಭಾಷಾ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ, ಚಿತ್ರ ನಟ ರೂಪೇಶ್ ಶೆಟ್ಟಿ, ಇತ್ತೀಚಿಗೆ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ದಾಖಲೆ ಮಾಡಿರುವ ಗಾಯಕ ಯಶವಂತ್ ಎಂ ಜಿ, ಭಾರತ ನಾಟ್ಯ ಕಲಾವಿದೆ ವಿಧುಷಿ ದೀಕ್ಷಾ ಹಾಗೂ ರೇಮೊನ ಭಾಗವಹಿಸಲಿದ್ದಾರೆ ಅಲ್ಲದೆ…

Read More

ಉಡುಪಿ ಬ್ರಹ್ಮಾವರ : ಸೆಪ್ಟೆಂಬರ್ 12 – ಮದುವೆಗೆ ನಿರಾಕರಿಸಿದ ಯುವತಿಗೆ ತನ್ನ ಪ್ರೇಮವನ್ನು ಒತ್ತಾಯಿಸುತ್ತಿದ್ದ ಯುವಕನೊಬ್ಬ ಚಾಕುವಿನಿಂದ ದಾಳಿ ನಡೆಸಿದ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೊಕ್ಕರ್ಣೆಯಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ. ಹಲ್ಲೆಗೆ ಒಳಗಾದ ರಕ್ಷಿತಾ (24) ಎಂಬ ಯುವತಿ ಗಂಭೀರವಾಗಿ ಗಾಯಗೊಂಡು ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ದಿನನಿತ್ಯದಂತೆ ಬಸ್ ನಿಲ್ದಾಣದತ್ತ ಹೋಗುತ್ತಿದ್ದ ರಕ್ಷಿತಾ ಅವರ ಹಿಂಬಾಲಿಸಿ ಬಂದ ಆರೋಪಿ ಯುವಕ, ಸ್ಥಳದಲ್ಲೇ ಚಾಕು ಬಳಸಿ ಕುತ್ತಿಗೆಗೆ ಇರಿದಿದ್ದಾನೆ. ತಕ್ಷಣವೇ ರಕ್ತಸ್ರಾವದಿಂದ ಬಿದ್ದುಹೋದ ರಕ್ಷಿತಾ ಅವರನ್ನು ಸ್ಥಳೀಯರು ತಕ್ಷಣವೇ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಯುವಕ ಯುವತಿಯನ್ನು ಮದುವೆಯಾಗಬೇಕೆಂದು ಬಹಳ ಸಮಯದಿಂದ ಒತ್ತಾಯಿಸುತ್ತಿದ್ದ ಯುವತಿ ಹಾಗೂ ಕುಟುಂಬ ಈ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರಿಂದ ಇಬ್ಬರ ಮಧ್ಯೆ ನಿರಂತರ ಜಗಳ ನಡೆಯುತ್ತಿತ್ತು ಎಂದು ವರದಿಯಾಗಿದೆ. ಈ ಸಂಬಂಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗೆ ಶೋಧ ಕಾರ್ಯ ಮುಂದುವರೆದಿದೆ. ಹೆಚ್ಚಿನ ಮಾಹಿತಿ ಶೀಘ್ರದಲ್ಲಿ ನೀಡಲಾಗುವುದು ಎಂದು ಉಡುಪಿ ಜಿಲ್ಲಾ…

Read More

ಮಂಗಳೂರು, ಸೆಪ್ಟೆಂಬರ್ 10: ಮಕ್ಕಳಲ್ಲಿ ಧಾರ್ಮಿಕ ಸಂಸ್ಕಾರ, ಶ್ರೀ ಕೃಷ್ಣನ ಪಾಠ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ, ಕಲ್ಕೂರ ಪ್ರತಿಷ್ಠಾನ ಕಳೆದ 43 ವರ್ಷಗಳಿಂದ ನಿರಂತರವಾಗಿ ಆಯೋಜಿಸುತ್ತಿರುವ ರಾಷ್ಟ್ರಮಟ್ಟದ ‘ಶ್ರೀ ಕೃಷ್ಣ ವೇಷ ಸ್ಪರ್ಧೆ’ ಈ ಬಾರಿ ಸೆಪ್ಟೆಂಬರ್ 14, ಭಾನುವಾರ, ಕೃಷ್ಣಜನ್ಮಾಷ್ಠಮಿಯಂದು ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ನಡೆಯಲಿದೆ ಎಂದು ಪ್ರತಿಷ್ಠಾನ ಅಧ್ಯಕ್ಷ ಪ್ರದೀಪ್ ಕುಮಾರ ಕಲ್ಕೂರ ತಿಳಿಸಿದ್ದಾರೆ. ಮಂಗಳೂರಿನ ಬಳ್ಳಾಳ್ ಬಾಗ್‌ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮಕ್ಕಳ ಉತ್ಸವವು ಬೆಳಿಗ್ಗೆ 9.00 ಗಂಟೆಗೆ ‘ಶ್ರೀ ಕೃಷ್ಣ ವರ್ಣ ವೈಭವ’ದೊಂದಿಗೆ ಆರಂಭವಾಗಿ, ಮಧ್ಯಾಹ್ನ 12.00ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ನಂತರ 1.00 ಗಂಟೆಗೆ ನಂದಗೋಕುಲ ವೇದಿಕೆಯಲ್ಲಿ ಶ್ರೀಕೃಷ್ಣ ಜನ್ಮೋತ್ಸವ ಸಮಾರಂಭದ ಉದ್ಘಾಟನೆಯೊಂದಿಗೆ ವೇದಿಕೆ ಕಾರ್ಯಕ್ರಮಗಳು ಪ್ರಾರಂಭವಾಗಲಿವೆ ಎಂದು ತಿಳಿಸಿದರು. 43 ವಿಭಾಗಗಳಲ್ಲಿ ಸ್ಪರ್ಧೆಗಳು – 9 ವೇದಿಕೆಗಳಲ್ಲಿ ಏಕಕಾಲದಲ್ಲಿ ಈ ವಿಶ್ವವಿಖ್ಯಾತ ಸ್ಪರ್ಧೆಗಳು 43 ವಿಭಿನ್ನ ವಿಭಾಗಗಳಲ್ಲಿ, 9 ವೇದಿಕೆಗಳಲ್ಲಿ ಏಕಕಾಲದಲ್ಲಿ ನಡೆಯಲಿದ್ದು, ಶ್ರೀ ಮಹಾಗಣಪತಿ…

Read More

ಮಂಗಳೂರು, ಸೆಪ್ಟೆಂಬರ್ 10: ವಿದ್ಯಾರ್ಥಿಗಳಲ್ಲಿ ತೀವ್ರ ಮನಃಸ್ಥಿತಿ ಒತ್ತಡ, ದಿಕ್ಕುತೊಡಕು ಮತ್ತು ಭವಿಷ್ಯ ಭೀತಿಯನ್ನು ಕಡಿಮೆ ಮಾಡುವುದು ಹಾಗೂ ಅವರಲ್ಲಿನ ಸಾಮರ್ಥ್ಯವನ್ನು ಬೆಳೆಸುವುದು ಉದ್ದೇಶದಿಂದ ಮಂಗಳೂರಿನಲ್ಲಿ ಪ್ರತಿಯೊಂದು ಪದವಿ ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ವೃತ್ತಿಪರ ಕೌನ್ಸಿಲರ್‌ಗಳನ್ನು ನಿಯೋಜಿಸಿ ಕೌನ್ಸಿಲಿಂಗ್ ಸೇವೆ ನೀಡುವ ಯೋಜನೆ ರೂಪಿಸಲಾಗಿದೆ. ಇದೇ ಅಕ್ಟೋಬರ್‌ ತಿಂಗಳಲ್ಲಿ ಯೋಜನೆ ಪ್ರಾರಂಭವಾಗಲಿದೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ತಿಳಿಸಿದ್ದಾರೆ. “ವಿದ್ಯಾರ್ಥಿಗಳು ಜೀವನದ ನಿರ್ಣಾಯಕ ಹಂತದಲ್ಲಿದ್ದಾರೆ. ಈ ಸಂದರ್ಭದಲ್ಲಿ ಮಾರ್ಗದರ್ಶನ ಮತ್ತು ಸಕಾರಾತ್ಮಕ ಮನೋವೈಜ್ಞಾನಿಕ ಬೆಂಬಲ ಅತ್ಯವಶ್ಯಕ. ಪ್ರತಿ ಕಾಲೇಜಿನಲ್ಲಿ ವೃತ್ತಿಪರರ ಮೂಲಕ ಕೌನ್ಸಿಲಿಂಗ್ ನೀಡುವ ಮೂಲಕ ಅವರ ಭವಿಷ್ಯವನ್ನು ಸ್ಪಷ್ಟಗೊಳಿಸುವ ಪ್ರಯತ್ನ ನಡೆಯಲಿದೆ,” ಎಂದು ಅವರು ಹೇಳಿದರು. ಪೋಷಕರಿಗೂ ತರಬೇತಿ – ಯೋಜನೆಗಳ ಮಾಹಿತಿ ನೀಡಲು ಉದ್ದೇಶ ಕೇವಲ ವಿದ್ಯಾರ್ಥಿಗಳಷ್ಟೇ ಅಲ್ಲದೆ, ಅವರ ಪೋಷಕರಿಗೂ ಸ್ವಾವಲಂಬನೆ, ಸ್ವ ಉದ್ಯೋಗ ಮತ್ತು ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ಕಾರ್ಯಾಗಾರಗಳನ್ನು ಪ್ರತಿಯೊಂದು ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಲಾಗುವುದು. ಈ…

Read More

ಮಂಗಳೂರು, ಸೆ. 9: ದಕ್ಷಿಣ ಕನ್ನಡ ಜಿಲ್ಲೆಯ ಸಂಸ್ಕೃತಿಯ ಹಾಗೂ ಧಾರ್ಮಿಕ ಆಚರಣೆಗಳ ವಿರುದ್ಧ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳಿಗೆ ತೀವ್ರ ವಿರೋಧ ವ್ಯಕ್ತಪಡಿಸಿ ಮಂಗಳೂರಿನ ಕದ್ರಿಯ ಗೋರಕ್ಷನಾಥ ಮಂದಿರ ಪಾರ್ಕ್‌ನಲ್ಲಿ ಸೋಮವಾರ ಬೃಹತ್ ಜನಾಗ್ರಹ ಸಭೆ ಜರುಗಿತು. ವಿಶ್ವ ಹಿಂದೂ ಪರಿಷತ್ ಹಾಗೂ ತುಳುನಾಡ ಧಾರ್ಮಿಕ ಸಾಂಸ್ಕೃತಿಕ ವೈಭವ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ವಿವಿಧ ಕ್ಷೇತ್ರಗಳ ನೂರಾರು ಕಲಾವಿದರು ಹಾಗೂ ಸಾರ್ವಜನಿಕರು ಭಾಗವಹಿಸಿದರು. ಸಾಂಸ್ಕೃತಿಕ ಕ್ಷೇತ್ರದ ಹಕ್ಕಿಗಾಗಿ ಕಲಾವಿದರಿಂದ ಒಗ್ಗಟ್ಟು ಯಕ್ಷಗಾನ, ನಾಟಕ, ದೈವ ಆರಾಧನೆ, ಸಂಗೀತ, ತುಳು ಸಿನಿರಂಗದ ಕಲಾವಿದರು, ಸಾರ್ವಜನಿಕ ಉತ್ಸವ ಸಮಿತಿಗಳ ಪ್ರತಿನಿಧಿಗಳು ಹಾಗೂ ಸಂಗೀತ-ಸೌಂಡ್ ಕ್ಷೇತ್ರದ ಪ್ರಮುಖರು ಈ ಸಭೆಯಲ್ಲಿ ಭಾಗವಹಿಸಿ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕಾನೂನು ನೆಪದಲ್ಲಿ ಅಡ್ಡಿ ಒಡ್ಡುತ್ತಿರುವ ಜಿಲ್ಲಾಡಳಿತದ ಕ್ರಮವನ್ನು ವಿರೋಧಿಸಿದರು. “ಧಾರ್ಮಿಕತೆಯ ವಿರುದ್ಧದ ದಬ್ಬಾಳಿಕೆ” – ಹರಿನಾರಾಯಣ ಅಸ್ರಣ್ಣ ಕಟೀಲು ಹರಿನಾರಾಯಣ ಅಸ್ರಣ್ಣ ಮಾತನಾಡುತ್ತಾ, “ರಾತ್ರಿ 10.30 ನಂತರ ಧಾರ್ಮಿಕ ಕಾರ್ಯಕ್ರಮ ನಡೆಸದಂತೆ ನಿರ್ಬಂಧಿಸುವುದು…

Read More

ಉಪ್ಪಿನಂಗಡಿ: ‘ಸಮಾಜದ ಬೇರೆ ಬೇರೆ ರಂಗಗಳಲ್ಲಿ ತಮ್ಮಿಂದಾದ ಕೊಡುಗೆ ನೀಡಿ ಗತಿಸಿ ಹೋದ ಹಿರಿಯರನ್ನು ಎಂದಿಗೂ ಮರೆಯಲಾಗದು. ಕನಿಷ್ಠಪಕ್ಷ ಅವರ ಕುಟುಂಬದವರಿಗಾದರೂ ಅದು ನೆನಪಿರಬೇಕು. ಅದರಲ್ಲೂ ಯಕ್ಷಗಾನದಂತಹ ಶ್ರೇಷ್ಠ ಕಲೆಗಾಗಿ ಶ್ರಮಿಸಿದ ಸಾಧಕರಿಗೆ ಇಡೀ ಸಮಾಜವೇ ಒಂದು ಕುಟುಂಬ. ಅಂಥವರ ನೆನಪಿಂದ ಉಳಿದವರ ಬದುಕು ಸ್ಮರಣೀಯವಾಗುತ್ತದೆ; ಅದುವೇ ಮುಂದಿನವರಿಗೆ ಮಾದರಿಯಾಗಬಲ್ಲುದು’ ಎಂದು ಕರ್ನಾಟಕ ಜಾನಪದ,ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.ಶ್ರೀ ಕಾಳಿಕಾಂಬಾ ಯಕ್ಷಕಲಾ ಟ್ರಸ್ಟ್ ಉಪ್ಪಿನಂಗಡಿ ಇದರ ಸುವರ್ಣ ಮಹೋತ್ಸವದ ಅಂಗವಾಗಿ ಉಪ್ಪಿನಂಗಡಿ ರಾಮನಗರದ ಶ್ರೀ ಶಾರದಾ ಕಲಾ ಮಂಟಪದಲ್ಲಿ ಜರಗಿದ ‘ಶ್ರೀ ಮಹಾಭಾರತ ಸರಣಿ ಸುವರ್ಣ ಶತಕ ತಾಳಮದ್ದಳೆ’ ಕಾರ್ಯಕ್ರಮದ ವೇದಿಕೆಯಲ್ಲಿ ಸೆಪ್ಟೆಂಬರ್ 7ರಂದು ಹರಿಹರ ಪಲ್ಲತಡ್ಕ ದಿ‌‌.ನೀಲಾವತಿ ಮತ್ತು ಪದ್ಮನಾಭ ಕೊಂಬೋಟು ದಂಪತಿಯ ಸಂಸ್ಮರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಹಿರಿಯ ಅರ್ಥಧಾರಿ ಗೋಪಾಲ ಶೆಟ್ಟಿ ಕಳೆಂಜ ಅವರಿಗೆ ಪ್ರಥಮ ವರ್ಷದ ‘ನೀಲಪದ್ಮ ಯಕ್ಷಪ್ರಶಸ್ತಿ’…

Read More