ಉಡುಪಿ, ಜುಲೈ 8: ಉಡುಪಿ ಜಿಲ್ಲೆಯ ಹಿರಿಯಡ್ಕ ಸಮೀಪದ ಖಾಸಗಿ ರೆಸಾರ್ಟ್ನಲ್ಲಿ ಅಂದರ್-ಬಾಹರ್ ಇಸ್ಪೀಟು ಜುಗಾರಿ ಆಟ ನಡೆಯುತ್ತಿದ್ದ ವೇಳೆ ಪೊಲೀಸರು ದಿಢೀರ್ ದಾಳಿ ನಡೆಸಿ 26 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಮಾಹಿತಿಯ ಪ್ರಕಾರ, ರೆಸಾರ್ಟ್ನಲ್ಲಿ ಮೆಹಂದಿ ಕಾರ್ಯಕ್ರಮ ಮುಕ್ತಾಯಗೊಂಡ ಬಳಿಕ ಕೆಲವರು ಸೇರಿ ಹಣ ಪಣಕ್ಕಿಟ್ಟು ಅಂದರ್-ಬಾಹರ್ ಜುಗಾರಿ ಆಟದಲ್ಲಿ ತೊಡಗಿದ್ದರು. ಈ ಜುಗಾರಿ ಅಡ್ಡೆಯಲ್ಲಿ ಕೆಲವು ಉದ್ಯಮಿಗಳು ಸಹ ಭಾಗಿಯಾಗಿದ್ದರು ಎನ್ನಲಾಗಿದೆ.
ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿ 26 ಮಂದಿಯನ್ನು ವಶಕ್ಕೆ ಪಡೆದು, ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳದಿಂದ ಜುಗಾರಿ ಆಟಕ್ಕೆ ಬಳಸಲಾಗುತ್ತಿದ್ದ ವಸ್ತುಗಳನ್ನು ವಶಪಡಿಸಿಕೊಂಡಿರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಬಂಧಿತರ ಸಂಪೂರ್ಣ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದ್ದು, ವಶಕ್ಕೆ ಪಡೆದವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ತನಿಖೆಯ ಬಳಿಕ ಹೆಚ್ಚಿನ ಮಾಹಿತಿ ಬಹಿರಂಗವಾಗುವ ನಿರೀಕ್ಷೆಯಿದೆ.
Trending
- ಡೊಂಕ ಬಂದರಿನಲ್ಲಿ ಭೀಕರ ಅಗ್ನಿ ಅವಘಡ: ಪರ್ಷಿಯನ್ ಮೀನುಗಾರಿಕಾ ಬೋಟ್ ಸಂಪೂರ್ಣ ಭಸ್ಮ – ₹30 ಲಕ್ಷಕ್ಕೂ ಅಧಿಕ ನಷ್ಟ
- ನವದೆಹಲಿ: ವಿದ್ಯಾರ್ಥಿಗಳ ಮೇಲೆ ಪೊಲೀಸ್ ಲಾಠಿ ಚಾರ್ಜ್ ಖಂಡಿಸಿ ಪ್ರಧಾನಿ ನಿವಾಸದ ಮುಂದೆ ಕಾಂಗ್ರೆಸ್ ಪ್ರತಿಭಟನೆ – ರಾಹುಲ್, ಪ್ರಿಯಾಂಕಾ ಸೇರಿ ಹಲವು ನಾಯಕರು ವಶಕ್ಕೆ
- ಮೂಲ್ಕಿಯ ಡಾ. ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದ ಭವ್ಯ ಸಭಾಭವನ ಡಿಸೆಂಬರ್ ಅಂತ್ಯದೊಳಗೆ ಲೋಕಾರ್ಪಣೆ: ಮುಂಬೈ ದಾನಿಗಳಿಂದ ಬಲಿಷ್ಠ ಭರವಸೆ
- ಬ್ರಹ್ಮಾವರದಲ್ಲಿ ಅಂದರ್-ಬಾಹರ್ ಜೂಜಾಟದ ಮೇಲೆ ಪೊಲೀಸ್ ದಾಳಿ: ಇಬ್ಬರ ಬಂಧನ, ₹6.41 ಲಕ್ಷ ಮೌಲ್ಯದ ವಸ್ತುಗಳ ವಶ
- ಲಾವಣ್ಯ ಹತ್ಯೆ ಪ್ರಕರಣಕ್ಕೆ ಕಠಿಣ ಶಿಕ್ಷೆ ವಿಧಿಸುವಂತೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ತುಳುನಾಡ ರಕ್ಷಣಾ ವೇದಿಕೆ ಮಹಿಳಾ ಘಟಕದಿಂದ ಮನವಿ
- ಭಾರೀ ಮಳೆಗೆ ಕಾರಿನ ಮೇಲೆ ಬೃಹತ್ ಮರ ಉರುಳಿ ಬಿದ್ದು ಆತಂಕ – ಚಾಲಕ ಅದೃಷ್ಟವಶಾತ್ ಪಾರು
- ಮಾತೃಸ್ವರೂಪಿ ಶ್ರೀಮತಿ ಚೆನ್ನಮ್ಮ ದೇವೇಗೌಡರವರ ನಿಧನಕ್ಕೆ ಸುಳ್ಯ ತಾಲೂಕು ಜನತಾದಳ (ಜಾತ್ಯತೀತ) ಘಟಕ ತೀವ್ರ ಸಂತಾಪ
- ಪರಮಜ್ಯೋತಿ ಭಜನಾ ಮಂಡಳಿ ವತಿಯಿಂದ ಸಂಭ್ರಮದಿಂದ ಆಟಿ ದೊಂಜಿ ದಿನ ಆಚರಣೆ,ತುಳುನಾಡಿನ ಸಂಸ್ಕೃತಿ, ಸಂಪ್ರದಾಯ ಉಳಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ: ಯೋಗಿಶ್ ಶೆಟ್ಟಿ ಜಪ್ಪು

