ಮಂಡ್ಯ ನಗರದ ಬೆಂಗಳೂರು- ಮೈಸೂರು ಹೆದ್ದಾರಿಯ (Bangalore- Mysore Highway) ಪಿಇಎಸ್ ಕಾಲೇಜು ಪಕ್ಕದಲ್ಲಿರುವ ಸಲೂನ್ ಅಂಡ್ ಸ್ಪಾ ಮೇಲೆ ದಾಳಿ (raid) ನಡೆಸಿದ ಪೊಲೀಸರು ನಾಲ್ವರು ಮಹಿಳೆಯರನ್ನು ರಕ್ಷಣೆ ಮಾಡಿದ್ದಾರೆ.
ಸಲೂನ್ ಅಂಡ್ ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ (Prostitution) ನಡೆಸುತ್ತಿದ್ದ ಕೇಂದ್ರದ ಮೇಲೆ ಮೈಸೂರಿನ ಒಡನಾಡಿ ಸಂಸ್ಥೆ, ಪೊಲೀಸರ ತಂಡ ಜಂಟಿ ಕಾರ್ಯಾಚರಣೆ ನಡೆಸಿ ಮಹಿಳೆಯರನ್ನು ರಕ್ಷಿಸಿದ್ದಾರೆ ಎಂದು ತಿಳಿದು ಬಂದಿದೆ.
ದಂಧೆ ನಡೆಸುತ್ತಿದ್ದ ಸಲೂನ್ ಮಾಲಕಿ, ಓರ್ವ ಪಿಂಪ್, ಓರ್ವ ಗ್ರಾಹಕನನ್ನು ದಾಳಿ ವೇಳೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದಂಧೆ ನಡೆಸಲು ಹೊರಗಿನಿಂದ ಮಹಿಳೆಯರನ್ನು ಕರೆತರುತ್ತಿದ್ದ (They were bringing women from outside) ಈ ಗ್ಯಾಂಗ್, ಪಕ್ಕದ ಕಾಲೇಜು ವಿದ್ಯಾರ್ಥಿ -ವಿದ್ಯಾರ್ಥಿನಿಯರನ್ನು ಗುರಿಯಾಗಿಸಿಕೊಂಡು ದಂಧೆಯಲ್ಲಿ ತೊಡಗಿಸುವ ಪ್ರಯತ್ನಿಸಿದ್ದ ಆರೋಪವೂ ಕೇಳಿಬಂದಿದೆ