- ಸುಳ್ಯ ತಾಲೂಕಿನ ಪಕ್ಷದ ಕಚೇರಿಯಲ್ಲಿ ವಿದ್ಯಾರ್ಥಿ ಜನತಾದಳಕ್ಕೆ ಸೇರ್ಪಡೆ
- ಜನತಾ ದಳ (ಜಾತ್ಯತೀತ) ಪಕ್ಷದ ವತಿಯಿಂದ “ಜನತಾ ಸಮಾವೇಶ ಹಾಗೂ ಬೆಳ್ಳಿ ಹಬ್ಬ” ಕಾರ್ಯಕ್ರಮ ಅದ್ದೂರಿಯಾಗಿ, ಅಭೂತಪೂರ್ವ ಜನಸಾಗರದ ನಡುವೆ ಯಶಸ್ವಿ
- ಬೆಂಗಳೂರು ಜಿಬಿಎ ಚುನಾವಣೆ: ಜೆಡಿಎಸ್ಗೆ ಬೆಂಬಲ ನೀಡಿ – ಕುಮಾರಸ್ವಾಮಿ ಮನವಿ
- ಕರಂಬಾರಿನಲ್ಲಿ ನಾಗರಿಕ ಸೇವಾ ಸಮಿತಿ ಭವ್ಯವಾಗಿ ನೆರವೆರಿದ 12ನೇ ವಾರ್ಷಿಕೋತ್ಸವ
- ಅಪ್ರಾಪ್ತ ವಿದ್ಯಾರ್ಥಿನಿ ಗರ್ಭಪಾತ ಪ್ರಕರಣ: ಶಿಕ್ಷಕ ಬಂಧನ
- ಹೆಬ್ರಿ: ರಸ್ತೆ ದಾಟುವ ವೇಳೆ ಮಿನಿ ಗೂಡ್ಸ್ ಡಿಕ್ಕಿ – ವಿದ್ಯಾರ್ಥಿನಿ ಸಾವು, ಮತ್ತೊಬ್ಬರಿಗೆ ಗಂಭೀರ ಗಾಯ ಸ್ಥಳೀಯರಿಂದ ಪ್ರತಿಭಟನೆ
- ಮಂಗಳೂರು: ಪ್ರೀತಿಯಲ್ಲಿ ಮನಸ್ತಾಪ – 22ರ ಯುವಕ ಆತ್ಮಹತ್ಯೆ, ಯುವತಿಯ ವಿರುದ್ಧ ಆರೋಪ
- ಉಡುಪಿ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಅಗ್ರ ಸಾಧನೆಗೆ ತುರವೇ ಉಡುಪಿ ಜಿಲ್ಲಾ ಅಧ್ಯಕ್ಷ ಫ್ರಾಂಕಿ ಡಿಸೋಜ ಕೊಳಲಗಿರಿ ಅಭಿನಂದನೆ
Author: Tulunada Surya
ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಉದ್ದಿಮೆದಾರರಿಗೆ ಅನುಕೂಲವಾಗುವಂತೆ ಉದ್ದಿಮೆ ಪರವಾನಿಗೆಗೆ ಸಂಬಂಧಪಟ್ಟ ಅಹವಾಲುಗಳನ್ನು ಸ್ವೀಕರಿಸಲು ಸಲುವಾಗಿ ಉದ್ದಿಮೆ ಪರವಾನಿಗೆ ಅದಾಲತ್ ವಿನೂತನ ರೀತಿಯಲ್ಲಿ ನಡೆಯಿತು. ಇಂದು ನಗರದ ಲಾಲ್‌ಬಾಗ್‌ನ ಮಹಾನಗರ ಪಾಲಿಕೆ ಕಚೇರಿಯ ಮುಂಭಾಗದಲ್ಲಿ ಉದ್ದಿಮೆ ಪರವಾನಿಗೆ ಅದಾಲತ್ ನಡೆಸಲಾಯ್ತು. ಅದಾಲತ್‌ನಲ್ಲಿ ಹಲವಾರು ಮಂದಿಯ ಅಹವಾಲುಗಳನ್ನು ಅಧಿಕಾರಿಗಳು ಸ್ವೀಕರಿಸಿ, ತಕ್ಷಣವೇ ಬಗೆಹರಿಸಿದರು. ಈ ವೇಳೆ ಮೇಯರ್ ಮನೋಜ್ ಕುಮಾರ್ ಮಾತನಾಡಿ, ಪಾಲಿಕೆಗೆ ಮೊಟ್ಟ ಮೊದಲ ಬಾರಿಗೆ ವ್ಯಾಪಾರ ಪರವಾನಿಗೆ ಅದಾಲತ್ ನಡೆಸಲಾಗುತ್ತಿದೆ. ಪಾಲಿಕೆಯ ಅದಾಯ ಮೂಲವೇ ಟ್ರೇಡ್ ಲೈನ್ಸ್ ಆಗಿದೆ. ಇದರಿಂದಾಗಿ ಪಾಲಿಕೆಗೆ ಹೆಚ್ಚುವರಿ ಅದಾಯ ಬರುತ್ತದೆ. ಕೆಲವರು ಕೆಲವೊಂದು ಸಮಸ್ಯೆಗಳಿಂದ 10-15 ವರ್ಷಗಳಿಂದ ನವೀಕರಣ ಮಾಡದೇ ಇರುವುದರಿಂದ ಪಾಲಿಕೆಗೆ ದೊಡ್ಡ ಮಟ್ಟಿನ ಸಮಸ್ಯೆ ಆಗುತ್ತಿರುವ ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ತತ್ವರಿತ ಗತಿಯಲ್ಲಿ ವಿಲೇವಾರಿ ಮಾಡುವ ಸದುದ್ದೇಶದಿಂದ ಅದಾಲತ್ ನಡೆಸಲಾಗಿದೆ ಎಂದು ಹೇಳಿದರು. ಇಂದು ಮಹಾನಗರಪಾಲಿಕೆಯ ಕೇಂದ್ರ ಕಛೇರಿಯಲ್ಲಿ ಜರಗಿದ ವ್ಯಾಪಾರ ಪರವಾನಿಗೆ ಅಧಾಲತ್ ನಲ್ಲಿ ನವೀಕರಣದ…
ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಇದರ 2025-26 ನೇ ಸಾಲಿನಿಂದ ಮುಂದಿನ 5 ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ , ಅಖಿಲ ಭಾರತ ತುಳು ಒಕ್ಕೂಟದ ಉಪಾಧ್ಯಕ್ಷ ಶ್ರೀ ಬಿ.ಜಯಕರ ಶೆಟ್ಟಿ ಇಂದ್ರಾಳಿ ಹಾಗೂ ಉಪಾಧ್ಯಕ್ಷರಾಗಿ ಅಶೋಕ್ ಕುಮಾರ್ ಬಲ್ಲಾಳ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಯೂನಿಯನ್ ನಿರ್ದೇಶಕ ಹಾಗೂ ಶಾಸಕ ಯಶ್ಪಾಲ್ ಎ ಸುವರ್ಣ, ನಿರ್ದೇಶಕರುಗಳಾದ ಎಚ್. ಗಂಗಾಧರ ಶೆಟ್ಟಿ, ಎನ್.ಮಂಜಯ್ಯ ಶೆಟ್ಟಿ, ಬಿ.ಕರುಣಾಕರ ಶೆಟ್ಡಿ, ಪ್ರಸಾದ್ ಎಸ್.ಶೆಟ್ಟಿ, ಸುಧೀರ್ ವೈ., ಬಿ.ಪ್ರದೀಪ್ ಯಡಿಯಾಳ್, ಅನಿಲ್ ಎಸ್.ಪೂಜಾರಿ, ಅಲೆವೂರು ಹರೀಶ್ ಕಿಣಿ, ಬಿ.ಅರುಣ್ ಕುಮಾರ್ ಹೆಗ್ಡೆ, ಶ್ರೀಧರ್ ಪಿ.ಎಸ್., ಸಹಕಾರ ಸಂಘಗಳ ಉಪ ನಿಬಂಧಕ ಕೆ.ಆರ್.ಲಾವಣ್ಯ, ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನುಷಾ ಕೋಟ್ಯಾನ್ ಉಪಸ್ಥಿತರಿದ್ದರು. ಸಹಕಾರ ಸಂಘಗಳ ಸಹಾಯಕ ನಿಬಂಧಕ ಸುಕನ್ಯ ಚುನಾವಣಾ ರಿಟರ್ನಿಂಗ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ಜಯಕರ ಶೆಟ್ಟಿ ಇಂದ್ರಾಳಿ ಅವರನ್ನು ಉಡುಪಿ ಜಿಲ್ಲಾ ಸಹಕಾರ ಯೂನಿಯನ್…
ಮಂಗಳೂರು : ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ಸದಸ್ಯ ಟೈಮ್ಸ್ ಆಫ್ ಕುಡ್ಲದ ಪ್ರಧಾನ ಸಂಪಾದಕ ಶಶಿ ಬಂಡಿಮಾರ್ ಕಳೆದ ಬುಧವಾರ ನಿಧನ ರಾದ ಹಿನ್ನೆಲೆಯಲ್ಲಿ ಸೋಮವಾರ ಪತ್ರಿಕಾ ಭವನದಲ್ಲಿ ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘ,ಮಂಗಳೂರು ಪ್ರೆಸ್ ಕ್ಲಬ್ ಹಾಗೂ ಪತ್ರಿಕಾಭವನ ಟ್ರಸ್ಟ್ ವತಿಯಿಂದ ಸಂತಾಪ ಸೂಚಕ ಸಭೆ ನಡೆಯಿತು.ಟೈಮ್ಸ್ ಆಫ್ ಕುಡ್ಲತುಳು ಪತ್ರಿಕೆಯ ಸಂಪಾದಕ, ನಮ್ಮ ಸಂಘದ ಸಕ್ರಿಯ ಸದಸ್ಯರಾ ಗಿದ್ದು,ತುಳು ಭಾಷೆ ಸಂಸ್ಕೃತಿಯ ಕುರಿತಾಗಿ ತನ್ನ ಪತ್ರಿಕೆಯ ಮೂಲಕ ಶಶಿ ಬಂಡಿಮಾರ್ ಜಾಗೃತಿ ಮೂಡಿಸಿದವರು ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಶ್ರೀನಿವಾಸ ನಾಯಕ್ ನುಡಿನಮನ ಸಲ್ಲಿಸಿದರು. ಯುವ ಉತ್ಸಾಹಿ ಉದ್ಯಮಿ ಪರಿಶ್ರಮದಿಂದ ತುಳು ಪತ್ರಿಕೆಯನ್ನು ನಡೆಸಿಕೊಂಡು ಬಂದವರು ಎಲ್ಲರೊಂದಿಗೆ ಉತ್ತಮ ಒಡನಾಟವನ್ನು ಹೊಂದಿದ್ದ ಪತ್ರ ಕರ್ತ ಶಶಿ ಬಂಡಿಮಾರ್ ನಮ್ಮನ್ನಗಲಿದ್ದಾರೆ ಎಂದು ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಸಂತಾಪ ಸೂಚಿಸಿದ್ದಾರೆ. ತುಳು ಪತ್ರಿಕೆ ನಡೆಸುತ್ತಾ,…
ಮಂಗಳೂರು : ಜನವರಿ 30ರಂದು ನಾಗಾಲ್ಯಾಂಡ್ ನಲ್ಲಿ ಹೃದಯಘಾತದಿಂದ ನಿಧನ ಹೊಂದಿದ ಟೈಮ್ಸ್ ಆಫ್ ಕುಡ್ಲ ತುಳು ಪತ್ರಿಕೆಯ ಸಂಪಾದಕರು ಆಗಿದ್ದು ತುಳು ಭಾಷೆ ಸಾಹಿತ್ಯ ಸಂಸ್ಕೃತಿ ತನ್ನದೇ ಆದ ವಿಶಿಷ್ಟ ಕೊಡುಗೆ ನೀಡಿ ಹಲವು ಜನರಿಗೆ ಉದ್ಯೋಗದಾತರಾಗಿ ಸೇವೆ ಸಲ್ಲಿಸುತ್ತಿದ್ದ ದಿವಂಗತ ಶಶಿ.ಆರ್. ಬಂಡಿಮಾರ್ ರವರಿಗೆ ಫೆಬ್ರವರಿ 07 ಶುಕ್ರವಾರ ಸಂಜೆ 3:30ಕ್ಕೆ ಮಂಗಳೂರಿನ ಊರ್ವಸ್ಟೋರ್ ನಲ್ಲಿರುವ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಭಾಂಗಣ ತುಳು ಭವನದಲ್ಲಿ ಶ್ರದ್ದಾಂಜಲಿ ಸಭೆ ಹಮ್ಮಿಕೊಳ್ಳಲಾಗಿದೆ.
ಕುಂದಾಪುರ: ಗಣರಾಜ್ಯೋತ್ಸವ ಸಂದರ್ಭದಲ್ಲಿ ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕಕ್ಕೆ ಭಾಜನರಾದ ಜಿಲ್ಲಾ ಪೊಲೀಸ್ ಕಛೇರಿಯ ಹೆಡ್ ಕಾನ್ ಸ್ಟೇಬಲ್ ಶಿವಾನಂದ ನಾಯರಿ ಅವರ ಸೇವೆಯನ್ನು ಗುರುತಿಸಿ ತುಳುನಾಡ ರಕ್ಷಣಾ ವೇದಿಕೆ ಕುಂದಾಪುರ ಘಟಕ ಅವರ ಮನೆಗೆ ತೆರಳಿ ಕುಟುಂಬದವರ ಸಮ್ಮುಖದಲ್ಲಿ ಶಿವಾನಂದ ಬಾಯರಿ ರವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕುಂದಾಪುರ ತುಳುನಾಡ ರಕ್ಷಣಾ ವೇದಿಕೆ ಅಧ್ಯಕ್ಷರಾದ ಸತೀಶ್ ಖಾರ್ವಿ ಅಂತರಾಷ್ಟ್ರೀಯ ಪವರ್ ಲಿಫ್ಟ್ ರ್ ಕ್ರೀಡಾಪಟು, ತುಳುನಾಡ ರಕ್ಷಣಾ ವೇದಿಕೆ ವೈದ್ಯರ ಘಟಕ ರಾಜ್ಯ ಸಂಘಟನಾ ಕಾರ್ಯದರ್ಶಿ ಡಾಕ್ಟರ್ ರವೀಂದ್ರ ತಲ್ಲೂರು, ಅಂತರಾಷ್ಟ್ರೀಯ ಮಾನವ ಹಕ್ಕು ಆಯೋಗ ಸಂಯೋಜಕರು ಶಿವಾನಂದ ತಲ್ಲೂರು ಹಾಗೂ ಕುಂದಾಪುರ ಘಟಕ ತುಳುನಾಡ ರಕ್ಷಣಾ ವೇದಿಕೆ ಪದಾಧಿಕಾರಿಗಳಾದ ಆನಂದ್ ಖಾರ್ವಿ, ಕೇಶವ ಖಾರ್ವಿ, ನಿತ್ಯಾನಂದ ನಾಯ್ಕ್ , ಉಮೇಶ್ ನಾಯರಿ ಕಿರಿಮಂಜೇಶ್ವರ, ನವೀನ್ ನಾಯರಿ ಬೆಂಗಳೂರು ಮುಂತಾದವರು ಉಪಸ್ಥಿತರಿದ್ದರು. ಹರ್ಷವರ್ಧನ್ ಖಾರ್ವಿ ಯವರು ಕಾರ್ಯಕ್ರಮ ನಿರೂಪಿಸಿದರು
ಮಂಗಳೂರು : ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ತಲಪಾಡಿ ಕೆ.ಸಿ.ರೋಡ್ ಶಾಖೆಯಲ್ಲಿ ಜ.17 ರಂದು ನಡೆದ ದರೋಡೆ ಪ್ರಕರಣದ ನಾಲ್ವರು ಆರೋಪಿಗಳನ್ನು ತಮಿಳುನಾಡು ಸಮೀಪದ ಪದ್ಮನೇರಿ ಗ್ರಾಮದಲ್ಲಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು ಆದರೆ ಸಿಸಿಬಿ ಪೊಲೀಸರು ಹಾಗೂ ಉಳ್ಳಾಲ ಪೊಲೀಸರು ಜಂಟಿಯಾಗಿ ಆರೋಪಿಗಳನ್ನು ಸ್ಥಳ ಮಹಜರಿಗೆ ತಲಪಾಡಿಯ ಅಲಂಕಾರು ಗುಡ್ಡದ ಬಳಿ ಕರೆದುಕೊಂಡು ಹೋಗಿದ್ದರು. ಸ್ಥಳ ಮಹಜರು ವೇಳೆ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ ತಪ್ಪಿಸಿಕೊಳ್ಳಲು ಯತ್ನ ಹಿನ್ನೆಲೆ ಆರೋಪಿ ಕಣ್ಣನ್ಮಣಿ ಕಾಲಿಗೆ ಫೈರಿಂಗ್ ಮಾಡಲಾಗಿತ್ತು ಆದರೆ ಇದೀಗ ಮತ್ತೋರ್ವ ಆರೋಪಿ ಮಹಜರ್ ಸಂದರ್ಭದಲ್ಲಿ ಪೊಲೀಸರ ಮೇಲೆ ದಾಳಿ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಮುರುಗನ್ ಮೇಲೆ ಪೊಲೀಸರು ಗುಂಡು ಹಾರಿಸಲಾಗಿದೆ. ಮಂಗಳೂರು ಹೊರವಲಯದ ಉಳ್ಳಾಲದ ಅಜ್ಜಿನಡ್ಕ ಎಂಬಲ್ಲಿ ಘಟನೆ ನಡೆದಿದ್ದು, ಸದ್ಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು ಆರೋಪಿ ದರೋಡೆಗೆ ಬಳಸಿದ್ದ ಪಿಸ್ತೂಲ್ ಅನ್ನು ಬಚ್ಚಿಟ್ಟಿದ್ದ. ಅದನ್ನು ರಿಕವರಿ ಮಾಡಲು ಆತನನ್ನು ಸ್ಥಳಕ್ಕೆ ಕರೆದುಕೊಂಡು ಹೋಗಲಾಗಿತ್ತು. ಈ…
ಮಂಗಳೂರು : ಕಳೆದ 12 ವರ್ಷಗಳಿಂದ ತುಳು ಪತ್ರಿಕಾ ಮಾಧ್ಯಮದಲ್ಲಿ ಟೈಮ್ಸ್. ಆಫ್ ಕುಡ್ಲ. ಎನ್ನುವ ತುಳು ಪತ್ರಿಕೆಯ ಮೂಲಕ ತುಳು ಭಾಷೆ ಆಚಾರ ವಿಚಾರ ಸಂಸ್ಕೃತಿ ಬೆಳವಣಿಗೆಗೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದ ಶಶಿ ಬಂಡಿಮಾರ್ ಅಸ್ತಂಗತ ರಾಗಿರುತ್ತಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ರಾಜ್ಯ ಮಾಧ್ಯಮ ಪ್ರಶಸ್ತಿ ಪುರಸ್ಕೃತರಾಗಿದ್ದು , ಅವರ ತುಳು ಭಾಷೆ ನೀಡಿದ ಕೊಡುಗೆ ಗುರುತಿಸಿ ತುಳುನಾಡ ರಕ್ಷಣಾ ವೇದಿಕೆ, ಜೈ ತುಳುನಾಡು ಸಂಘಟನೆ ಸೇರಿದಂತೆ ಹಲವು ಸಂಘಟನೆ ಗಳು ಗೌರವ ಸನ್ಮಾನ ಮಾಡಿತ್ತು. ಮಂಗಳೂರು ಲೋಕಸಭಾ ಸದಸ್ಯ ಬ್ರಿಜೇಶ್ ಚೌಟ, ವಿಧಾನಸಭಾಧ್ಯಕ್ಷ ಯುಟಿ ಖಾದರ್, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಶಾಸಕ ವೇದವ್ಯಾಸ ಕಾಮತ್, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾ ಡ್ , ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ದಯಾನಂದ್ ಕತ್ತಲ್ ಸರ್ , ಹಿರಿಯ ಸಾಹಿತಿ ಡಾ.ವೈ. ಎನ್.ಶೆಟ್ಟಿ , ತುಳು ಅಕಾಡೆಮಿ ಮಾಜಿ ಸದಸ್ಯ ಡಾ ಆಕಾಶ್…
ನವದೆಹಲಿ : ದೇಶಾದ್ಯಂತ ಗಣರಾಜ್ಯೋತ್ಸದ ಸಂಭ್ರಮ. ಬಾನೆತ್ತರಕ್ಕೆ ಹಾರಾಡಿದ ತ್ರಿವರ್ಣ ಧ್ವಜಗಳು, ರಾಜಧಾನಿ ಕರ್ತವ್ಯ ಪಥಧಲ್ಲಿ ಅನಾವರಣಗೊಂಡ ಸೇನಾ ಶಕ್ತಿಯ ಅನಾವರಣ.ಭವ್ಯ ಪರಂಪರೆ,ವಿವಿಧತೆಯಲ್ಲಿ ಏಕತೆ ಸಾರುವ ಸಂಸ್ಕೃತಿಯ ವೈಭವ ಗಮನ ಸೆಳೆಯಿತು. ಗಣ್ಯಾತಿಗಣ್ಯರ ಸಮ್ಮುಖದಲ್ಲಿ ರಾಷ್ಟçಪತಿ ದ್ರೌಪದಿ ಮುರ್ಮು ಧ್ವಜಾರೋಹಣ ನೆರವೇರಿಸುವ ಮೂಲಕ 76 ನೇ ಗಣರಾಜ್ಯೋತ್ಸಕ್ಕೆ ವಿಧ್ಯುಕ್ತ ಚಾಲನೆ ನೀಡಿದರು. ಭಾರತೀಯ ಸೇನಾ ಪಡೆಗಳು ತಮ್ಮ ಶಕ್ತಿ ಸಾಮರ್ಥ್ಯವನ್ನು ಕತ್ಯವ್ಯ ಪಥದಲ್ಲಿ ಜಗತ್ತಿನ ಮುಂದೆ ಅನಾವರಣದ ಜೊತೆಗೆ ವಿವಿಧ ರಾಜ್ಯಗಳ ಸಂಸ್ಕೃತಿ, ಆಚಾರ ವಿಚಾರ, ಪರಂಪರೆ ಬಿಂಬಿಸುವ ಸ್ತಬ್ಧಚಿತ್ರಗಳ ಪ್ರದರ್ಶನ ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿತು. ಬಾರಿ ವಿಶೇಷ ಅತಿಥಿಯಾಗಿ ಪಾಲ್ಗೊಂಡಿದ್ದ ಇಂಡೋನೇಶಿಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಸಮ್ಮುಖದಲ್ಲಿ ರಾಷ್ಟçಪತಿ ದ್ರೌಪದಿ ಮುರ್ಮು ಅವರು ಸಶಸ್ತç ಪಡೆಗಳಿಂದ ಗೌರವ ವಂದನೆ ಸ್ವೀಕಾರ ಮಾಡಿದರು. ಈ ವೇಳೆ ಭೂ ಸೇನೆ, ವಾಯು ಸೇನೆ ಮತ್ತು ನೌಕಾಪಡೆಯ ಯೋಧರು ಆಕರ್ಷಕ ಪಥಸಂಚಲನ ನಡೆಸಿದರು. ದೇಶದ ನಾನಾ ಭಾಗಗಳ ಕಲಾವಿದರ ಆಕರ್ಷಕ ನೃತ್ಯ ಜನರನ್ನು ಸೂಜಿಗಲ್ಲಿನಂತೆ…
ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಜೈ ಭಾರತಿ ತರುಣವೃಂದ ರಿಜಿಸ್ಟ್ರೇಡ್ ಊರ್ವ ಹೊಯ್ಗೆಬೈಲ್ ಇದರ 60ನೇ ವರ್ಷದ ವಜ್ರ ಮಹೋತ್ಸವದ ಉದ್ಘಾಟನೆ ಕಾರ್ಯಕ್ರಮ ಹಾಗೂ ಲಾಂಛನ ಅನಾವರಣ ವನ್ನು ರಿಯ ಫೌಂಡೇಶನ್ ವಿಶೇಷ ಚೇತನ ಮಕ್ಕಳ ವಸತಿ ಕೇಂದ್ರ ಕುಲಶೇಖರ ಕೋಟಿಪುರ ಇಲ್ಲಿ ನಡೆಯಿತು ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮಂಗಳೂರಿನ ಪ್ರಸಿದ್ಧ ಖ್ಯಾತ ವಕೀಲರಾದ ರಾಘವೇಂದ್ರ ರಾವ್ ಉದ್ಘಾಟಿಸಿ ಮಾತನಾಡಿ ಜೈ ಭಾರತಿ ತರುಣವೃಂದ ರಿ. ಇವರು ದಿನಚರಿ ಸಾಮಗ್ರಿಗಳನ್ನು ಕೊಟ್ಟು ಆ ಮಕ್ಕಳ ಜೊತೆ ಸೇರಿ ಸಹ ಭೋಜನವನ್ನು ಮಾಡಿರುವುದನ್ನು ಶ್ಲಾಘಿಸಿದರು. ಹಾಗೂ ಅವರ ವೈಯಕ್ತಿಕ ಜೀವನ ವನ್ನು ನೆನಪಿಸಿಕೊಂಡು ಅವರ ಮಕ್ಕಳ ಹುಟ್ಟುಹಬ್ಬವನ್ನು ಪ್ರತಿವರ್ಷ ಹಲವಾರು ಆಶ್ರಮದೊಂದಿಗೆ ಸೇರಿ ಆಚರಿಸುವುದನ್ನು ನೆನಪಿಸಿಕೊಂಡರು ಇಂತಹ ಸಮಾಜಮುಖಿ ಕೆಲಸಗಳನ್ನು ಇನ್ನು ಕೂಡ ಮಾಡಲಿ ಎಂದು ನಮ್ಮನ್ನು ಹಾರೈಸಿದರು. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಹರೀಶ್ ರೈ ಮಾತನಾಡಿ ನೀವು ಮಾಡಿದ ಈ ಕಾರ್ಯಕ್ರಮ ಆ ದೇವರು ನಿಮ್ಮನ್ನು ಒಳ್ಳೆಯದನ್ನು ಮಾಡಲಿ…
ಭಾರತ ಜಾತ್ಯಾತೀತ ರಾಷ್ಟ್ರ. ಭಾರತದಲ್ಲಿ ಎಲ್ಲ ಪ್ರಜೆಗಳಿಗೂ ಸಮಾನ ಹಕ್ಕಿದೆ. ಶಿಕ್ಷಣ, ಸಮಾನತೆ, ವಾಕ್ ಸ್ವಾತಂತ್ರ್ಯ ಹಕ್ಕುಗಳು, ಇಚ್ಛೆಯ ಧರ್ಮವನ್ನು ಸ್ವೀಕರಿಸುವ ಹಕ್ಕುಗಳು, ಎಲ್ಲಿ ಬೇಕಾದರೂ ಜೀವಿಸುವ ಹಕ್ಕುಗಳು, ಭಾರತದ ಪ್ರಜೆ ದೇಶದ ಯಾವುದೇ ಭಾಗದಲ್ಲಿ ಬೇಕಾದರೂ ಜೀವನ ರೂಪಿಸಿಕೊಳ್ಳಲು ಹಕ್ಕು ಹೀಗೆ ಇಷ್ಟೆಲ್ಲ ಸ್ವತಂತ್ರ ಹಕ್ಕುಗಳು ಎಲ್ಲರಿಗೂ ಇರುವುದು ಭಾರತದಲ್ಲಿ 1950 ರ ಜನವರಿ 26 ರಂದು ಜಾರಿಗೆ ಬಂದ ಬೃಹತ್ ಸಂವಿಧಾನದಿಂದ. ಆದ್ದರಿಂದ ಪ್ರತಿ ವರ್ಷವು ಸಹ ಈ ದಿನವನ್ನು ಭಾರತೀಯ ಪ್ರಜೆಗಳು ಎಲ್ಲೇ ಇದ್ದರೂ ಸಹ ನೆನೆಯಬೇಕಾಗಿದೆ. ಹಾಗೆಯೇ ಆಚರಣೆ ಮಾಡಬೇಕಿದೆ. ಕಾನೂನಾತ್ಮಕವಾಗಿ ಈ ದಿನವನ್ನು ರಾಷ್ಟ್ರದೆಲ್ಲೆಡೆ ರಕ್ಷಣಾ ಪಡೆಗಳು ಪರೇಡ್ ಮಾಡುವ ಮೂಲಕ, ಶಾಲೆಗಳು, ಸರ್ಕಾರಿ ಕಚೇರಿಗಳಲ್ಲಿ ಧ್ವಜಾರೋಹಣ ಮಾಡುವ ಮೂಲಕ ಸಂವಿಧಾನ ಜಾರಿಗೆ ಬಂದ ದಿನವನ್ನು ಗಣರಾಜ್ಯೋತ್ಸವದ ಆಚರಣೆ ನಡೆಯುತ್ತದೆ. ದೇಶದಾದ್ಯಂತ ಪ್ರತಿಯೊಬ್ಬ ರಿಗೂ ಮಹತ್ವದ ದಿನವಾಗಿದೆ ಎಂದು ತುಳುನಾಡ ರಕ್ಷಣಾ ವೇದಿಕೆ ಕೇಂದ್ರೀಯ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ ಅವರು ತುಳುನಾಡ…
ತುಳುನಾಡ ಸೂರ್ಯ ಪ್ರತಿಕೆ ಚಂದಾದಾರರಾಗಿ ಪ್ರೋತ್ಸಾಹಿಸಬೇಕಾಗಿ ವಿನಂತಿ.
ತುಳುನಾಡಿನ ಅಚಾರ ವಿಚಾರ ಪರಂಪರೆ ಮತ್ತು ಪ್ರಸ್ತುತ ಹಲವಾರು ವಿಚಾರಗಳನ್ನು ಪ್ರಕಟಿಸುವ ಪತ್ರಿಕೆ ಯಾಗಿದೆ. ತಾವು ಚಂದಾದಾರ ರಾಗಿದಲ್ಲಿ tulunadasurya.com web News ನಲ್ಲಿ ಪ್ರತಿ ದಿನದ ನ್ಯೂಸ್ ಗಳು ನೀವು ವೀಕ್ಷಿಸಬಹುದು . ಮತ್ತು ಪ್ರತಿ ತಿಂಗಳು ನಿಮ್ಮ ವಿಳಾಸಕ್ಕೆ ಗೌರವಯುತ ವಾಗಿ ಅಂಚೆ ಮೂಲಕ ತುಳುನಾಡ ಸೂರ್ಯ ಪ್ರತಿಕೆ ಮನೆ ತಲುಪುತ್ತದೆ.
