ಕುಂದಾಪುರ: ಗಣರಾಜ್ಯೋತ್ಸವ ಸಂದರ್ಭದಲ್ಲಿ ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕಕ್ಕೆ ಭಾಜನರಾದ ಜಿಲ್ಲಾ ಪೊಲೀಸ್ ಕಛೇರಿಯ ಹೆಡ್ ಕಾನ್ ಸ್ಟೇಬಲ್ ಶಿವಾನಂದ ನಾಯರಿ ಅವರ ಸೇವೆಯನ್ನು ಗುರುತಿಸಿ ತುಳುನಾಡ ರಕ್ಷಣಾ ವೇದಿಕೆ ಕುಂದಾಪುರ ಘಟಕ ಅವರ ಮನೆಗೆ ತೆರಳಿ ಕುಟುಂಬದವರ ಸಮ್ಮುಖದಲ್ಲಿ ಶಿವಾನಂದ ಬಾಯರಿ ರವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕುಂದಾಪುರ ತುಳುನಾಡ ರಕ್ಷಣಾ ವೇದಿಕೆ ಅಧ್ಯಕ್ಷರಾದ ಸತೀಶ್ ಖಾರ್ವಿ ಅಂತರಾಷ್ಟ್ರೀಯ ಪವರ್ ಲಿಫ್ಟ್ ರ್ ಕ್ರೀಡಾಪಟು, ತುಳುನಾಡ ರಕ್ಷಣಾ ವೇದಿಕೆ ವೈದ್ಯರ ಘಟಕ ರಾಜ್ಯ ಸಂಘಟನಾ ಕಾರ್ಯದರ್ಶಿ ಡಾಕ್ಟರ್ ರವೀಂದ್ರ ತಲ್ಲೂರು, ಅಂತರಾಷ್ಟ್ರೀಯ ಮಾನವ ಹಕ್ಕು ಆಯೋಗ ಸಂಯೋಜಕರು ಶಿವಾನಂದ ತಲ್ಲೂರು ಹಾಗೂ ಕುಂದಾಪುರ ಘಟಕ ತುಳುನಾಡ ರಕ್ಷಣಾ ವೇದಿಕೆ ಪದಾಧಿಕಾರಿಗಳಾದ ಆನಂದ್ ಖಾರ್ವಿ, ಕೇಶವ ಖಾರ್ವಿ, ನಿತ್ಯಾನಂದ ನಾಯ್ಕ್ , ಉಮೇಶ್ ನಾಯರಿ ಕಿರಿಮಂಜೇಶ್ವರ, ನವೀನ್ ನಾಯರಿ ಬೆಂಗಳೂರು ಮುಂತಾದವರು ಉಪಸ್ಥಿತರಿದ್ದರು. ಹರ್ಷವರ್ಧನ್ ಖಾರ್ವಿ ಯವರು ಕಾರ್ಯಕ್ರಮ ನಿರೂಪಿಸಿದರು
Trending
- ತುಳುನಾಡ ರಕ್ಷಣಾ ವೇದಿಕೆ ಉಡುಪಿ ಕಚೇರಿಯಲ್ಲಿ ಶಶಿ ಬಂಡಿಮಾರ್ ಶ್ರದ್ಧಾಂಜಲಿ ಕಾರ್ಯಕ್ರಮ, ಶಶಿ ಬಂಡಿಮಾರ್ ರವರ ಕನಸು ನನಾಸಾಗಿಸಲು ಪ್ರಯತ್ನಿಸಿ – ಡಾ ಆಕಾಶ್ ರಾಜ್ ಜೈನ್
- ಫೆಬ್ರವರಿ 12 ರಂದು ಸುಳ್ಯ ತಾಲೂಕು ಕಛೇರಿ, ಸುಳ್ಯ ದಲ್ಲಿ “ಲೋಕಾಯುಕ್ತ ಜನ ಸಂಪರ್ಕ ಸಭೆ”
- ಪತ್ರಕರ್ತ ಶಶಿ ಬಂಡಿಮಾರ್ ರಿಗೆ ತುಳು ಸಂಘಟನೆಗಳಿಂದ ಶ್ರದ್ಧಾಂಜಲಿ, ತುಳುವಿನ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಪ್ರಾಮಾಣಿಕ ವ್ಯಕ್ತಿ ಶಶಿ ಬಂಡಿಮಾರ್ : ತಾರಾನಾಥ ಗಟ್ಟಿ
- ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಶ್ರೀ ಗುರುದೇವ ಅಧ್ಯಾತ್ಮ ಕೇಂದ್ರ ಲೋಕಾರ್ಪಣೆ, ಶ್ರೀ ಒಡಿಯೂರು ರಥೋತ್ಸವ ತುಳುನಾಡ ಜಾತ್ರೆ
- ಮಂಗಳೂರು ಮಹಾನಗರ ಪಾಲಿಕೆಯಲ್ಲಿ ವಿನೂತನ ರೀತಿಯಲ್ಲಿ ವ್ಯಾಪಾರ ಪರವಾನಿಗೆ ಅದಾಲತ್
- ಉಡುಪಿ ಜಿಲ್ಲಾ ಸಹಕಾರ ಯೂನಿಯನ್ : ಅಧ್ಯಕ್ಷರಾಗಿ ಜಯಕರ ಶೆಟ್ಟಿ ಇಂದ್ರಾಳಿ
- ತುಳು ಭಾಷೆಯ ಸ್ಥಾನಮಾನಕ್ಕೆ ಶ್ರಮಿಸಿದ ಪತ್ರಕರ್ತ ಶಶಿ ಬಂಡಿಮಾರ್ ರವರಿಗೆ ಪತ್ರಿಕಾ ಭವನ ಟ್ರಸ್ಟ್ ವತಿಯಿಂದ ಸಂತಾಪ ಸೂಚಕ ಸಭೆ
- ಫೆ.7 : ತುಳು ಭವನದಲ್ಲಿ ಟೈಮ್ಸ್ ಆಫ್ ಕುಡ್ಲ ಪತ್ರಿಕೆ ಸಂಸ್ಥಾಪಕ ತುಳುವ ನೇಸರ ಶಶಿ ಆರ್ ಬಂಡಿಮಾರ್ ರವರ ಶ್ರದ್ದಾಂಜಲಿ ಸಭೆ