ನವದೆಹಲಿ : ದೇಶಾದ್ಯಂತ ಗಣರಾಜ್ಯೋತ್ಸದ ಸಂಭ್ರಮ. ಬಾನೆತ್ತರಕ್ಕೆ ಹಾರಾಡಿದ ತ್ರಿವರ್ಣ ಧ್ವಜಗಳು, ರಾಜಧಾನಿ ಕರ್ತವ್ಯ ಪಥಧಲ್ಲಿ ಅನಾವರಣಗೊಂಡ ಸೇನಾ ಶಕ್ತಿಯ ಅನಾವರಣ.ಭವ್ಯ ಪರಂಪರೆ,ವಿವಿಧತೆಯಲ್ಲಿ ಏಕತೆ ಸಾರುವ ಸಂಸ್ಕೃತಿಯ ವೈಭವ ಗಮನ ಸೆಳೆಯಿತು.
ಗಣ್ಯಾತಿಗಣ್ಯರ ಸಮ್ಮುಖದಲ್ಲಿ ರಾಷ್ಟçಪತಿ ದ್ರೌಪದಿ ಮುರ್ಮು ಧ್ವಜಾರೋಹಣ ನೆರವೇರಿಸುವ ಮೂಲಕ 76 ನೇ ಗಣರಾಜ್ಯೋತ್ಸಕ್ಕೆ ವಿಧ್ಯುಕ್ತ ಚಾಲನೆ ನೀಡಿದರು. ಭಾರತೀಯ ಸೇನಾ ಪಡೆಗಳು ತಮ್ಮ ಶಕ್ತಿ ಸಾಮರ್ಥ್ಯವನ್ನು ಕತ್ಯವ್ಯ ಪಥದಲ್ಲಿ ಜಗತ್ತಿನ ಮುಂದೆ ಅನಾವರಣದ ಜೊತೆಗೆ ವಿವಿಧ ರಾಜ್ಯಗಳ ಸಂಸ್ಕೃತಿ, ಆಚಾರ ವಿಚಾರ, ಪರಂಪರೆ ಬಿಂಬಿಸುವ ಸ್ತಬ್ಧಚಿತ್ರಗಳ ಪ್ರದರ್ಶನ ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿತು.
ಬಾರಿ ವಿಶೇಷ ಅತಿಥಿಯಾಗಿ ಪಾಲ್ಗೊಂಡಿದ್ದ ಇಂಡೋನೇಶಿಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಸಮ್ಮುಖದಲ್ಲಿ ರಾಷ್ಟçಪತಿ ದ್ರೌಪದಿ ಮುರ್ಮು ಅವರು ಸಶಸ್ತç ಪಡೆಗಳಿಂದ ಗೌರವ ವಂದನೆ ಸ್ವೀಕಾರ ಮಾಡಿದರು. ಈ ವೇಳೆ ಭೂ ಸೇನೆ, ವಾಯು ಸೇನೆ ಮತ್ತು ನೌಕಾಪಡೆಯ ಯೋಧರು ಆಕರ್ಷಕ ಪಥಸಂಚಲನ ನಡೆಸಿದರು. ದೇಶದ ನಾನಾ ಭಾಗಗಳ ಕಲಾವಿದರ ಆಕರ್ಷಕ ನೃತ್ಯ ಜನರನ್ನು ಸೂಜಿಗಲ್ಲಿನಂತೆ ಆಕರ್ಷಿಸಿದವು.
ಉಪ ರಾಷ್ಟçಪತಿ ಜಗದೀಪ್ ಧನಕರ್, ಪ್ರಧಾನಿ ನರೇಂದ್ರ ಮೋದಿ, ಲೋಕಸಭಾ ಅಧ್ಯಕ್ಷ ಓಂ ಬಿರ್ಲಾ,ಕೇಂದ್ರದ ಸಚಿವರು, ಸೇರಿದಂತೆ ವಿಶೇಷ ಆಹ್ವಾನಿತರು ಅಪರೂಪದ ಕ್ಷಣ ಗಳನ್ನು ಕಣ್ತುಂಬಿಕೊAಡರು. ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಕರ್ತವ್ಯ ಪಥಕ್ಕೆ ತೆರಳುವ ಮೊದಲು ತ್ರಿ-ಸೇನಾಪಡೆಗಳ ಮುಖ್ಯಸ್ಥರೊಂದಿಗೆ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಗೌರವ ಸಲ್ಲಿಸಿದರು.
ಕರ್ತವ್ಯ ಪಥದಲ್ಲಿ ರಾಷ್ಟçಪತಿ ದ್ರೌಪದಿ ಮುರ್ಮು ಅವರು ಗಣ್ಯ ಅಂಗರಕ್ಷಕರ ಬೆಂಗಾವಲಿನೊAದಿಗೆ ಮೆರವಣಿಗೆಯಲ್ಲಿ ಮುಖ್ಯ ಅತಿಥಿಯಾಗಿ ಇಂಡೋನೇಷ್ಯಾದ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಅವರೊAದಿಗೆ ಕರ್ತವ್ಯ ಪಥದಲ್ಲಿ ‘ಸ್ವರ್ಣೀಮ್ ಭಾರತ್, ವಿರಾಸತ್ ಔರ್ ವಿಕಾಸ್’ ಎಂಬ ವಿಷಯದ ಮೇಲೆ ಕರ್ತವ್ಯ ಪಥದಲ್ಲಿ ಮೂವತ್ತೊಂದು ಸ್ಥಬ್ದ ಚಿತ್ರಗಳು ತಮ್ಮ ತಮ್ಮ ರಾಜ್ಯ ಮತ್ತು ಇಲಾಖೆಗಳನ್ನು ಪ್ರತಿನಿಧಿಸಿದ್ದವು.
ಸಶಸ್ತç ಪಡೆಗಳ ನಡುವಿನ ಜಂಟಿ ಮತ್ತು ಏಕೀಕರಣದ ಮನೋಭಾವ ಪ್ರದರ್ಶಿಸಿದವು. ಕನಿಷ್ಠ 5,೦೦೦ ಕಲಾವಿದರಿಂದ ಸಾಂಸ್ಕೃತಿಕ ಪ್ರದರ್ಶನಗಳು ಮೊದಲ ಬಾರಿಗೆ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ‘ಜನ್ ಭಾಗೀದಾರಿ’ ಹೆಚ್ಚಿಸುವ ಸರ್ಕಾರದ ಉದ್ದೇಶಕ್ಕೆ ಅನುಗುಣವಾಗಿ, ಇದನ್ನು ವೀಕ್ಷಿಸಲು ಸುಮಾರು 1೦,೦೦೦ ಅತಿಥಿಗಳನ್ನು ಆಹ್ವಾನಿಸಲಾಗಿತ್ತು. ಇದು ಈ ಭಾರಿಯ ವಿಶೇಷಗಳಲ್ಲಿ ಒಂದಾಗಿದೆ.
ಬೆಳಿಗ್ಗೆ 10.30 ಕ್ಕೆ ಪ್ರಾರಂಭವಾದ ಪಥ ಸಂಚಲನ ಸುಮಾರು 90 ನಿಮಿಷಗಳ ಕಾಲ ನಡೆಯಿತು. ದೇಶದ ವಿವಿಧ ಭಾಗಗಳಿಂದ ತಂದ ಸAಗೀತ ವಾದ್ಯಗಳೊಂದಿಗೆ ೩೦೦ ಸಾಂಸ್ಕೃತಿಕ ಕಲಾವಿದರು ‘ಸಾರೆ ಜಹಾಂ ಸೆ ಅಚ್ಛಾ’ ನುಡಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ವಾದ್ಯಗಳ ಸಮೂಹದಲ್ಲಿ ಶೆಹನಾಯಿ, ಸುಂದರಿ, ನಾದಸ್ವರಂ, ಬೀನ್, ಮಶಕ್ ಬೀನ್, ರಂಸಿAಗ ರಾಜಸ್ಥಾನ, ಕೊಳಲು, ಕರಡಿ ಮಜಲು, ಮೊಹುರಿ, ಸಂಖ, ತುತಾರಿ, ಧೋಲ್, ಗಾಂಗ್, ನಿಶಾನ್, ಚಾಂಗ್, ತಶಾ, ಸಂಬಲ್, ಚೆAಡಾ, ಇಡಕ್ಕ, ಲೆಜಿಮ್, ಥವಿಲ್, ಗುಡುಮ್ ಬಾಜಾ, ತಲಾಮ್ ಮತ್ತು ಮೊನ್ಬಾ ಗಮನ ಸೆಳೆದವು. ವೈಮಾನಿಕ ಗಣರಾಜ್ಯೋತ್ಸವದ ಪ್ರಯುಕ್ತ ವೈಮಾನಿಕ ಪ್ರದರ್ಶನ ಗಮನ ಸೆಳೆಯಿತು. ಇದೇ ವೇಳೆ ಶಾಲಾ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದಿದ್ದ ಜನರ ಮನ ಸೂರೆಗೊಂಡವು.
ಇAಡೋನೇಶಿಯಾ ಪಡೆ ಭಾಗಿ ಗಣರಾಜ್ಯೋತ್ಸವದ ಪಥ ಸಂಚಲನದಲ್ಲಿ 152 ಸದಸ್ಯರನ್ನುಒಳಗೊಂಡ ಇಂಡೋನೇಷ್ಯಾ ರಾಷ್ಟ್ರೀಯ ಸಶಸ್ತç ಪಡೆಗಳ ಮೆರವಣಿಗೆಯ ತುಕಡಿ ಮತ್ತು 190 ಸದಸ್ಯರನ್ನು ಹೊಂದಿರುವ ಇಂಡೋನೇಷ್ಯಾದ ಮಿಲಿಟರಿ ಅಕಾಡೆಮಿಯ ಬ್ಯಾಂಡ್ ಮೆರವಣಿಗೆಯಲ್ಲಿ ಭಾಗವಹಿಸಿ ಗಮನ ಸೆಳೆದವು.
ಈ ಅಶ್ವಾರೋಹಿ ಪಡೆಯನ್ನು ಮುನ್ನಡೆಸುವ ಮೊದಲ ಸೇನಾ ತುಕಡಿಯು ಲೆಫ್ಟಿನೆಂಟ್ ಅಹಾನ್ ಕುಮಾರ್ ನೇತೃತ್ವದ 61 ಅಶ್ವಾರೋಹಿ ದ¼ವಾಗಿ ಮುನ್ನೆಡು ಪಥ ಸಂಚಲನಕ್ಕೆ ಚಾಲನೆ ನೀಡಿದರು.953 ರಲ್ಲಿ ಸ್ಥಾಪನೆಯಾದ 61 ಅಶ್ವಾರೋಹಿ ದಳ ವಿಶ್ವದ ಏಕೈಕ ಸೇವೆ ಸಲ್ಲಿಸುತ್ತಿರುವ ಕುದುರೆ ಸವಾರಿ ಅಶ್ವಾರೋಹಿ ದಳ ರೆಜಿಮೆಂಟ್ ಆಗಿದೆ