Sunday, September 15, 2024
spot_img
More

    Latest Posts

    ಕಾಸರಗೋಡು: ಎಟಿಎಂನಲ್ಲಿ ಬಾಗಿಲು ಲಾಕ್ – ತಾಯಿ, ಮಗಳ ರಕ್ಷಿಸಿದ ಅಗ್ನಿ ಶಾಮಕ ಸಿಬ್ಬಂದಿ

    ಕಾಸರಗೋಡು: ನಗರದ ಎಟಿಎಂ ಕೌಂಟರ್ ನಲ್ಲಿ ತಾಯಿ ಮತ್ತು ಪುತ್ರಿ ಸಿಲುಕಿದ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದ್ದು, ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಇಬ್ಬರನ್ನು ರಕ್ಷಿಸಿದ್ದಾರೆ.

    ಚೇರಂಗೈ ನಿವಾಸಿಯಾದ ಮಹಿಳೆ ಮತ್ತು ಆಕೆಯ ಎಂಟು ವರ್ಷದ ಪುತ್ರಿ ನಗರದ ಕಾಸರಗೋಡು ಸೇವಾ ಸಹಕಾರಿ ಬ್ಯಾಂಕ್ ಎಟಿಎಂಗೆ ತೆರಳಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ.ಹಣ ತೆಗೆಯಲು ಕೌಂಟರ್ ನೊಳಗೆ ತೆರಳಿದ್ದ ಮರಳುತ್ತಿದ್ದಾಗ ಬಾಗಿಲು ಲಾಕ್ ಆಗಿದ್ದು, ಇಬ್ಬರು ಬೊಬ್ಬೆ ಹಾಕಿದ್ದಾರೆ. ಇದನ್ನು ಗಮನಿಸಿದ ಅಲ್ಲಿದ್ದವರು ಕೂಡಲೇ ಸಮೀಪದಲ್ಲಿದ್ದ ಪೊಲೀಸರಿಗೆ ತಿಳಿಸಿದ್ದು, ಪೊಲೀಸರು ಸ್ಥಳಕ್ಕೆ ತಲಪಿ ಬಳಿಕ ಅಗ್ನಿ ಶಾಮಕ ದಳದವ ರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ತಲಪಿದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಎಟಿಎಂನ ಬಾಗಿಲು ಯಂತ್ರದ ಮೂಲಕ ತುಂಡರಿಸಿ ಸಿಲುಕಿದ್ದ ಇಬ್ಬರನ್ನು ರಕ್ಷಿಸಿದ್ದಾರೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss