ಬೆಳ್ತಂಗಡಿ: ಅಡಿಕೆ ಫಸಲು ಸಂಗ್ರಹಣೆಗಾಗಿ ತೋಟಕ್ಕೆ ಹೋಗಿ ಫಸಲುಗಳನ್ನು ಗೋಣಿ ಚೀಲದಲ್ಲಿ ತುಂಬಿಸುತಿದ್ದ ವೇಳೆ ವಾಹನಗಳಲ್ಲಿ ಬಂದು ಹಲ್ಲೆ ಮಾಡಿ , ಜಮೀನಿಗೆ ಹಾಕಿದ ಬೇಲಿಯನ್ನು ಪುಡಿ ಮಾಡಿ ಅಡಿಕೆಯ ಫಸಲನ್ನು ಕಾರಿನಲ್ಲಿ ದರೋಡೆ ,ಮಾಡಿದ ಘಟನೆ ಬೆಳ್ತಂಗಡಿ ಶಿಬಾಜೆ ಗ್ರಾಮದಲ್ಲಿ ನಡೆದಿದೆ. ಶಿಬಾಜೆ ಗ್ರಾಮ, ಬೆಳ್ತಂಗಡಿ ನಿವಾಸಿ ಶ್ರೀಮತಿ. ಎ ಸಿ ಎಲಿಯಮ್ಮ ಕೋಂ ಟಿ ಕೆ ಮಾಧ್ಯು ಸ್ವಾನ (65) ಇವರ ಸೊಸೆ ಅಡಿಕೆ ಫಸಲು ಸಂಗ್ರಹಣೆಗಾಗಿ ತೋಟಕ್ಕೆ ಹೋಗಿ ಫಸಲುಗಳನ್ನು ಗೋಣಿ ಚೀಲದಲ್ಲಿ ತುಂಬಿಸುತ್ತಿದ್ದಾಗ, ಆರೋಪಿಗಳಾದ ಟಿ.ಆರ್ ಮೋಹನ, ತಂಗಮಣಿ, ವಾಸು, ಲತಾ, ವಾಸು ರವರ ಮಗಳು ವಿಶ್ವನಾಥ, ರವಿ, ರತೀಶ್ ಗೌಡ ರಾಧಾಕೃಷ್ಣ, ಪುರಂದರ್ ರಾವ್, ಸುರೇಶ್ ಎನ್.ಕೆ. ಲತಿಕ, ರೇಖ, ಸುಧಾಕರ, ಆನಂದ ಗೌಡ ಬಿನ್ ಲಿಂಗಪ್ಪ ಗೌಡು, ಗಂಗಾಧರ, ಮಹೇಶ್ ಪೂಜಾರಿ, ರಾಜೇಶ್, ನವೀನ್ ನೆರಿಯ ಪ್ರಭನ್ ಯಾನೆ ಪ್ರಭಾಕರ ವಾಹನಗಳಲ್ಲಿ ಬಂದು, ಅವರ ಸೊಸೆಯನ್ನು ಸುತ್ತುವರಿದು, ಹಲ್ಲೆ ಮಾಡಿ ಜಮೀನಿಗೆ ಹಾಕಿದ ಬೇಲಿಯನ್ನು ಪುಡಿ ಮಾಡಿ ಸೊಸೆಯನ್ನು ಬೆದರಿಸಿ, ಸುಮಾರು ಹತ್ತರಷ್ಟು ಕಾಂಕ್ರೀಟ್ ಬೇಲಿಯ ಕಂಬಗಳನ್ನು ಅವರು ತಂದಿದ್ದ ಟೆಂಪೋದಲ್ಲಿ ಹಾಗೂ ಸುಮಾರು 20 ಕೆಜಿಯಷ್ಟು ಬೇಲಿಯನ್ನು ಕಾರಿನಲ್ಲಿ ಹಾಗೂ ಒಂದು ಗೋಣಿ ಅಡಿಕೆಯ ಫಸಲನ್ನು ರತೀಶ್ ಗೌಡನ ಕಾರಿನಲ್ಲಿ ದರೋಡೆ ಮಾಡಿಕೊಂಡು ಹೋಗಿರುತ್ತಾರೆ ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ
©2021 Tulunada Surya | Developed by CuriousLabs