ಹೊಸದಿಲ್ಲಿ: ಯೋಧರು ಸಂಚರಿಸುತ್ತಿದ್ದ ಟ್ರಕ್ ರಸ್ತೆಯಿಂದ ಸ್ಕಿಡ್ ಆಗಿ ನದಿಗೆ ಬಿದ್ದ ಪರಿಣಾಮ ಅಧಿಕಾರಿ ಮತ್ತು ಎಂಟು ಮಂದಿ ಜವಾನರು ಸಾವನ್ನಪ್ಪಿದ ಘಟನೆ ಲಡಾಖ್ನಲ್ಲಿ ನಡೆದಿದೆ.
ಲೇಹ್ನಿಂದ 150 ಕಿಮೀ ದೂರದಲ್ಲಿರುವ ಕಿಯಾರಿಯಲ್ಲಿ ಸಂಜೆ 4.45ಕ್ಕೆ ಅಪಘಾತ ಸಂಭವಿಸಿದೆ ಎಂದು ಲೇಹ್ನಲ್ಲಿರುವ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಪಿಡಿ ನಿತ್ಯಾ ತಿಳಿಸಿದ್ದಾರೆ.
ಓರ್ವ ಜವಾನ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಟ್ರಕ್ನಲ್ಲಿ 10 ಸೈನಿಕರು ಪ್ರಯಾಣಿಸುತ್ತಿದ್ದರು ಮತ್ತು ಬೆಂಗಾವಲಾಗಿ ಐದು ವಾಹನಗಳಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.