ಮಂಡ್ಯ : ಲಂಚ ಪಡೆಯುತ್ತಿದ್ದ ಮಂಡ್ಯದ ಮಳವಳ್ಳಿ ಎಪಿಎಂಸಿ ಕಾರ್ಯದರ್ಶಿ ಸಾಕಮ್ಮ ಲೋಕಾಯುಕ್ತ ( Lokayukta) ಬಲೆಗೆ ಬಿದ್ದ ಘಟನೆ ಇಂದು ವರದಿಯಾಗಿದೆ.
ಮಂಡ್ಯದ ಮಳವಳ್ಳಿ ಎಪಿಎಂಸಿ ಕಾರ್ಯದರ್ಶಿ ಸಾಕಮ್ಮ ಗೋದಾಮಿಗೆ ಅನುಮತಿ ನೀಡಲು ಕಲ್ಕುಳಿ ಆನಂದ್ ಎಂಬುವವರಿಂದ 50 ಸಾವಿರ ಲಂಚಕ್ಕೆ ಬೇಡಿಕೆಯೊಡ್ಡಿದ್ದರು.
ಅಂತೆಯೇ ಇಂದು ಮುಂಗಡವಾಗಿ 20 ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಸದ್ಯ, ಅಧಿಕಾರಿಯನ್ನು ವಶಕ್ಕೆ ಪಡೆದಿರುವ ಲೋಕಾಯುಕ್ತ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
