ಸುರತ್ಕಲ್: ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಬೈಕಂಪಾಡಿಯ ಎಪಿಎಂಸಿಯಲ್ಲಿ ಹಲವು ವರ್ಷಗಳಿಂದ ಕೂಲಿ ಕೆಲಸ ಮಾಡಿಕೊಂಡಿದ್ದ ಕಾರ್ಮಿಕನ ಮೃತದೇಹ ಎಪಿಎಂಸಿ ಬಳಿ ಅನುಮಾನಸ್ಪಾದವಾಗಿ ಪತ್ತೆಯಾಗಿದೆ.ಮೃತ ವ್ಯಕ್ತಿಯನ್ನು ಓಡಿಸಾ ರಾಜ್ಯದ ಜಾವಪುರ್ ಜಿಲ್ಲೆಯ ರಶ್ಮಿ ರಂಜನ್ (44) ಎಂದು ಗುರುತಿಸಲಾಗಿದೆ. ಮೃತದೇಹದ ಬಲಕಾಲಿನ ಮಂಡಿಯ ಕೆಳಭಾಗದಲ್ಲಿ ಲಘುವಾಹನ ಗುದ್ದಿದ ಗುರುತುಗಳಿದ್ದು, ಹಿಟ್ ಅಂಡ್ ರನ್ ಕೇಸ್ ಇದಾಗಿರುವ ಸಾಧ್ಯತೆಗಳಿದ್ದು ಯಾವುದೋ ಅಪರಿಚಿತ ವಾಹನ ಡಿಕ್ಕಿಯಾಗಿ ಪರಾರಿಯಾಗಿರುವ ಸಾಧ್ಯತೆಗಳಿವೆ ಎನ್ನಲಾಗಿದೆ.
ತೀವ್ರ ಗಾಯಗೊಂಡ ರಂಜನ್ ಅಪಘಾತಕ್ಕೀಡಾಗಿ ಮೃತ ಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಸದ್ಯ ಸ್ಥಳಕ್ಕೆ ಪಣಂಬೂರು ಮತ್ತು ಮಂಗಳೂರು ಉತ್ತರ ಸಂಚಾರ ಪೊಲೀಸರು ಭೇಟಿ ನೀಡಿದ್ದು, ತನಿಖೆ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.