ತುಳುನಾಡ ರಕ್ಷಣಾ ವೇದಿಕೆ ಅಟೋ ಮಾಲೀಕರ ಮತ್ತು ಚಾಲಕರ ಘಟಕ ಸಭೆಯು ದಿನಾಂಕ 11-11-2023 ರಂದು ಶನಿವಾರ ಉಡುಪಿ ಜಿಲ್ಲಾ ಕಚೇರಿಯಲ್ಲಿ ಉಡುಪಿ ತಾಲೂಕು ಘಟಕದ ಅಧ್ಯಕ್ಷರಾದ ಕೃಷ್ಣಕುಮಾರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷರಾದ ಯೋಗೀಶ್ ಶೆಟ್ಟಿ ಜಪ್ಪುರವರು ಉದ್ಘಾಟಿಸಿದರು.
ಉಡುಪಿ ಜಿಲ್ಲೆ ವೀಕ್ಷಕರಾದ ಫ್ರ್ಯಾಂಕಿ ಡಿಸೋಜ ಮತ್ತು ಉಡುಪಿ ತಾಲೂಕು ಘಟಕದ ಶಿಫಾರಸು ಮೇರೆಗೆ ಕೇಂದ್ರೀಯ ಮಂಡಳಿ ಅದ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪುರವರು ಅನಿಲ್ ಪೂಜಾರಿ ರವರನ್ನು ಉಡುಪಿ ತಾಲೂಕು ಅಟೋ ಮಾಲೀಕರ ಮತ್ತು ಚಾಲಕರ ಘಟಕದ ಅಧ್ಯಕ್ಷರಾಗಿ ಆಯ್ಕೆ ಮಾಡಿದರು.
ಉಪಾಧ್ಯಕ್ಷರಾದ ಜಯರಾಮ ಪೂಜಾರಿ, ಉಡುಪಿ ತಾಲೂಕು ಘಟಕ ಪ್ರಧಾನ ಕಾರ್ಯದರ್ಶಿ ರೋಷನ್ ಡಿಸೋಜಾ, ಉಡುಪಿ ತಾಲೂಕು ಮಹಿಳಾ ಘಟಕ ಪ್ರಧಾನ ಕಾರ್ಯದರ್ಶಿ ನಾಗಲಕ್ಷ್ಮಿ , ವಿದ್ಯಾರ್ಥಿ ಘಟಕ ಅದ್ಯಕ್ಷ ಅಭಿಷೇಕ್, ಮುಖಂಡರುಗಳಾದ ಸುನಂದ, ಗುಣವತಿ ,ಯಶು ಪಕ್ಕಳ
,ಸಮರ್ಥ್, ಸಂದೇಶ್ ,ಗೌರವ್, ಸಿಂಚನ್, ಅಧಿತ್ ,ಮೋಹಿತ್, ಧನೇಶ್,ಗುಲಾಬಿ, ಹೇಮಾ,ನಿರ್ಮಲ ಮೆಂಡನ್ ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.