ಮಣಿಪಾಲದಿಂದ ಉಡುಪಿಯತ್ತ ತೆರಳುತ್ತಿದ್ದ ಆಂಬುಲೆನ್ಸ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಮೆಡಿಕಲ್ ಶಾಪ್ ಒಳಗೆ ನುಗ್ಗಿದ ಘಟನೆ ಲಕ್ಷ್ಮೀಂದ್ರ ನಗರದ ಬಳಿ ಇಂದು ಮುಂಜಾನೆ ನಡೆದಿದೆ. ಆಂಬುಲೆನ್ಸ್ ನಲ್ಲಿ ಚಾಲಕನ ಹೊರತು ಬೇರೆ ಯಾರು ಇರಲಿಲ್ಲ. ಲಕ್ಷ್ಮೀಂದ್ರ ನಗರದ ಬಳಿ ಬರುತ್ತಿದ್ದಂತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದೆ. ಇದರ ಪರಿಣಾಮ ಒಮ್ಮೆಗೆ ಬಲಕ್ಕೆ ತಿರುಗಿದ ಆಂಬುಲೆನ್ಸ್, ರಸ್ತೆಯ ಪಕ್ಕದಲ್ಲಿದ್ದ ಜನೌಷಧಿ ಕೇಂದ್ರದೊಳಗೆ ನುಗ್ಗಿದೆ. ಪಕ್ಕದ ಅಂಗಡಿಗಳಿಗೂ ಹಾನಿಯಾಗಿದೆ. ಅಪಘಾತದಲ್ಲಿ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
©2021 Tulunada Surya | Developed by CuriousLabs