ಮಂಗಳೂರು: ತುಳುನಾಡ ರಕ್ಷಣಾ ವೇದಿಕೆ ಮಹಿಳಾ ಘಟಕದ ವತಿಯಿಂದ “ಆಟಿದ ನೆಂಪು” ಕಾರ್ಯಕ್ರಮ ಆಗಸ್ಟ್ 6 ಭಾನುವಾರ ದಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಭವನ ಉರ್ವಸ್ಟೋರ್ ಮಂಗಳೂರು ನಲ್ಲಿ ನಡೆಯಲಿದೆ.
ಸ್ಥಾಪಕ ಅಧ್ಯಕ್ಷರಾಗಿರುವಂತಹ ಯೋಗಿಶ್ ಶೆಟ್ಟಿ ಜಪ್ಪು ರವರ ಮಾರ್ಗದರ್ಶನದಂತೆ ಬೆಳಿಗ್ಗೆ 10:30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಪ್ರಾರಂಭಗೊಂಡು ನಾಡಿನ ಮಕ್ಕಳ ಮಹಿಳೆಯರ ಆಟಿ ಕಡೆಂಗೆ ಕಂಗಿಲು ಕಂಸಲೆ ಸಿರಿ ಚಾವಡಿ ಹತ್ತು ಹಲವು ಜಾನಪದ ಹಾಗೂ ವಿವಿಧ ನೃತ್ಯ ವಿನೋದಾವಳಿಗಳು ಮನೋರಂಜನ ಕಾರ್ಯಕ್ರಮಗಳು, ಆಟಿದ ತಿಂಗಳಿಗೆ ಸಂಬಂಧಿಸಿದ ತಿಂಡಿ ತಿನಸುಗಳ ಸ್ಪರ್ಧೆ ನಡೆದು ಬಳಿಕ ಮಧ್ಯಾಹ್ನ 12:00ಗೆ ಸರಿಯಾಗಿ ಸಭಾ ಕಾರ್ಯಕ್ರಮ ಪ್ರಾರಂಭಗೊಂಡು ಸಭಾ ಕಾರ್ಯಕ್ರಮದಲ್ಲಿ ನಾಡಿನ ಗಣನೀಯ ಸೇವೆ ಸಲ್ಲಿಸಿರುವಂತ ಮಹನೀಯರನ್ನು ಸನ್ಮಾನಿಸುವ ಕಾರ್ಯಕ್ರಮ ಕೂಡ ನಡೆಯಲಿದೆ.

ಶ್ರೀ ಶ್ರೀ ಶ್ರೀ ಈಶ ವಿಠ್ಠಲದಾಸ ಸ್ವಾಮೀಜಿ ಕೇಮಾರು ಸಂದೀಪನಿ ಮಠ ಇವರು ಆಶೀರ್ವಚನ ನೀಡಲಿದ್ದಾರೆ.
ತುಳುನಾಡ ರಕ್ಷಣಾ ವೇದಿಕೆ ಮಹಿಳಾ ಘಟಕ ಮಂಗಳೂರು ಇದರ ಅಧ್ಯಕ್ಷರಾದ ಆಶಾ ಶೆಟ್ಟಿ ಅತ್ತಾವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶಾಸಕ ವೇದವ್ಯಾಸ್ ಕಾಮತ್,ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಮಾಜಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಕೆ ಯಾದವ ಶೆಟ್ಟಿ, ಆಲ್ವಿನ್ ಡಿ ಸೋಜ, ಕರ್ನೂರ್ ಮೋಹನ್ ರೈ, ಡಾ. ರಾಜೇಶ್ ಆಳ್ವ, ಶ್ರೀಮತಿ ವೀಣಾ ಜಯಂತಿ ಶೆಟ್ಟಿ, ಎಂ.ಬಿ. ಖಾನ್ ಮೂಲ್ಕಿ, ಆರ್ ಮನೋಹರ್ ಕಾಮತ್ ರಿಜಿಸ್ಟರ್ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಜಿ. ರಾಜೇಶ್ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದ.ಕ ಜಿಲ್ಲೆ ಇವರು ಭಾಗವಹಿಸಲಿದ್ದಾರೆ.ಎಂದು ತುಳುನಾಡ ರಕ್ಷಣಾ ವೇದಿಕೆ ಮಂಗಳೂರು ಮಹಿಳಾ ಘಟಕದ ಅಧ್ಯಕ್ಷರಾಗಿರುವಂತ ಆಶಾ ಶೆಟ್ಟಿ ಅತ್ತಾವರರವರು ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.
