ಭಾರತೀಯ ಸೇನೆಯಲ್ಲಿನ ಅಗ್ನಿವೀರ್ ನೇಮಕಾತಿ ರ್ಯಾಲಿಯು ಉಡುಪಿಯಲ್ಲಿನ ಮಹತ್ಮಾಗಾಂಧಿ ಸ್ಟೇಡಿಯಂನಲ್ಲಿ ಜುಲೈ 17 ರಿಂದ 25 ರ ವರೆಗೆ ನಡೆಯಲಿದೆ. ಅಗ್ನಿವೀರ್ ನೇಮಕಾತಿಗೆ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಿ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ದೈಹಿಕ ಮತ್ತು ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗುತ್ತದೆ.
ದಾವಣಗೆರೆ ಜಿಲ್ಲೆಯಿಂದ 91 ಜನರು ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವರು. ಇವರು ಜುಲೈ 17 ರಂದು ಉಡುಪಿಯ ಮಹಾತ್ಮ ಗಾಂಧೀ ಸ್ಟೇಡಿಯಂನಲ್ಲಿ ದೈಹಿಕ ಹಾಗೂ ವೈದ್ಯಕೀಯ ಪರೀಕ್ಷೆಗಾಗಿ ಅಗತ್ಯ ದಾಖಲೆಗಳೊಂದಿಗೆ ಹಾಜರಾಗಬೇಕು ಮತ್ತು ಮಾಹಿತಿಗೆ 0824-2951276 ದೂರವಾಣಿಗೆ ಸಂಪರ್ಕಿಸಲು ಮಂಗಳೂರಿನ ಕೋಳೂರು ಸೇನಾ ಭರ್ತಿ ಕಾರ್ಯಾಲಯದ ಕರ್ನಲ್ ಅನುಜ ಗುಪ್ತ ತಿಳಿಸಿದ್ದಾರೆ