Tuesday, July 16, 2024
spot_img
More

  Latest Posts

  ಗಾಂಜಾ ನಶೆಯಲ್ಲಿ ಯುವಕನ ದಾಂಧಲೆ- ಸಿನಿಮೀಯ ಶೈಲಿಯಲ್ಲಿ ಬಂಧನ

  ಮಂಗಳೂರು : ಗಾಂಜಾ ನಶೆ ಏರಿಸಿಕೊಂಡಿದ್ದ ಯುವಕನೊಬ್ಬ ನಾಟೆಕಲ್ ಎಂಬಲ್ಲಿ ರಸ್ತೆ ಡಿವೈಡರ್ ನಲ್ಲಿ ದಾಂಧಲೆ ನಡೆಸಿದ್ದು ದಾಂಧಲೆ ನಡೆಸಿದ್ದು, ಸ್ಥಳಕ್ಕೆ ಬಂದ ಕೊಣಾಜೆ ಪೊಲೀಸರು ಯುವಕನ್ನು ಸಿನಿಮೀಯ ರೀತಿಯಲ್ಲಿ ಹಿಡಿದು ಜೈಲಿಗಟ್ಟಿದ್ದಾರೆ.

  ಬಂಧಿತನನ್ನು ಉಳ್ಳಾಲ ಮುಕ್ಕಚ್ಚೇರಿ, ಕೈಕೋ ರೋಡ್ ನಿವಾಸಿ ಅಬ್ಬೂಬಕ್ಕರ್ ಸಿದ್ಧೀಕ್ ಎಂದು ಗುರುತಿಸಲಾಗಿದೆ. ಈತ ನಾಟೆಕಲ್ ಜಂಕ್ಷನ್ ನಲ್ಲಿ ನಶೆಯಲ್ಲಿ ರಸ್ತೆ ಮಧ್ಯದ ಡಿವೈಡರ್ ನಲ್ಲಿ ಕಲ್ಲು ಮತ್ತು ಚೂರಿ ಹಿಡಿದು ಧಾಂದಲೆ ನಡೆಸುತ್ತಿದ್ದ. ಈ ವೇಳೆ ಯಾರೋ ಪೊಲೀಸರಿಗೆ ದೂರು ನೀಡಿದ್ದು ಸ್ಥಳಕ್ಕೆ ಬಂದ ಕೊಣಾಜೆ ಮತ್ತು ಟ್ರಾಫಿಕ್ ಪೊಲೀಸರು ಕಾರ್ಯಾಚರಣೆ ನಡೆಸಿ ಸಿನಿಮೀಯ ರೀತಿಯಲ್ಲಿ ಸಿದ್ಧೀಕನ್ನ ಲಾಕ್ ಮಾಡಿ ಪೊಲೀಸ್ ವಾಹನಕ್ಕೆ ತಳ್ಳಿದ್ದಾರೆ.

  ಕೊಣಾಜೆ ಠಾಣೆಯ ಪೊಲೀಸ್ ಸಿಬ್ಬಂದಿ ಮಾಜಿ ಯೋಧ ಸಂತೋಷ್ ಎಂಬವರು ಚಾಣಾಕ್ಷತನದಿಂದ ಸಿದ್ಧೀಕನ್ನ ಲಾಕ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಪೊಲೀಸ್ ಕಾರ್ಯಾಚರಣೆಯನ್ನ ಯಾರೋ ಮೊಬೈಲಲ್ಲಿ ರೆಕಾರ್ಡ್ ಮಾಡಿದ್ದು ವೀಡಿಯೋ ತುಣುಕು ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆರೋಪಿ ಅಬ್ಬೂಬಕ್ಕರ್ ಸಿದ್ಧೀಕ್ ನನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದ್ದು ಅಮಲು ಪದಾರ್ಥ ಸೇವಿಸಿದ್ದು ಧೃಢಪಟ್ಟ ಮೇಲೆ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

  spot_img
  spot_img

  Latest Posts

  spot_imgspot_img
  spot_imgspot_img
  spot_img

  Don't Miss