Tuesday, July 23, 2024
spot_img
More

    Latest Posts

    ಚಂದ್ರನ ಬಳಿಕ `ಸೂರ್ಯ ಶಿಕಾರಿ’ಗೆ ಹೊರಟ ಇಸ್ರೋ : `ಆದಿತ್ಯ ಎಲ್-1′ ಉಡಾವಣೆಗೆ ಬಿಗ್ ಪ್ಲಾನ್

    ನವದೆಹಲಿ : ಚಂದ್ರಯಾನ-3 ಯಶಸ್ಸಿನ ಬೆನ್ನಲ್ಲೇ ಇಸ್ರೋ ಇದೀಗ ಸೂರ್ಯಯಾನಕ್ಕೆ ಮುಂದಾಗಿದ್ದು, ಸೆಪ್ಟೆಂಬರ್ 2 ರಂದು ಸೌರನೌಕೆ ಆದಿತ್ಯ-ಎಲ್1 ಉಡಾವಣೆಗೆ ಸಿದ್ಧತೆ ನಡೆಸಿದೆ.

    ಇಸ್ರೋ ಈಗಾಗಲೇ ಆದಿತ್ಯ-ಎಲ್ 1 ಸಿದ್ಧಪಡಿಸಿದ್ದು, ಸೌರ ಕರೊನ ಎಂದು ಕರೆಯುವ ಸೂರ್ಯನ ಹೊರ ವಾತಾವರಣ ಹಾಗೂ ಸೀಟು ಎಂದು ಗುರುತಿಸುವ ಸೌರ ಬಿರುಗಾಳಿ ರಹಸ್ಯೆ ಅಧ್ಯಯನಕ್ಕೆ ಮುಂದಾಗಿದ್ದು, ಸೆಪ್ಟೆಂಬರ್ 2 ರಂದೇ ನೌಕೆ ಉಡಾವಣೆ ಆಗುವ ಸಾಧ್ಯತೆ ಇದೆ.

    ಭೂಮಿಯಿಂದ 15 ಲಕ್ಷ ಕಿ.ಮೀ ದೂರದಲ್ಲಿರುವ ಲ್ಯಾಗ್ರೇಂಜಿಯನ್ ಪಾಯಿಂಟ್ ನಲ್ಲಿ ಆದಿತ್ಯ ನೆಲೆ ನಿಂತು ಸೂರ್ಯನ ಅಧ್ಯಯನ ಮಾಡಲಿದೆ ಇಸ್ರೋ ತಿಳಿಸಿದೆ.

    ಆದಿತ್ಯ ಎಲ್-1 ಉಡಾವಣೆಗೆ ಭರ್ಜರಿ ಸಿದ್ಧತೆ ನಡೆಸಿರುವ ಇಸ್ರೋ ವಿಜ್ಞಾನಿಗಳು, ಬಹುತೇಕ ಸೆಪ್ಟೆಂಬರ್ 2 ರಂದೇ ಆದಿತ್ಯ ಎಲ್-1 ಉಡಾವಣೆ ಮಾಡುವ ಸಾಧ್ಯತೆ ಇದ್ದು, ಇಂದು ಅಥವಾ ನಾಳೆ ಅಧಿಕೃತ ದಿನಾಂಕ ಘೋಷಣೆಯಾಗಲಿದೆ. ಸೂರ್ಯಯಾನ ಮೀಷನ್ ಮೂಲಕ ಸೂರ್ಯನ ಕುರಿತು ಇಸ್ರೋ ಅಧ್ಯಯನ ನಡೆಸಲಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss