Sunday, September 15, 2024
spot_img
More

    Latest Posts

    ಉಳ್ಳಾಲ: ನೇತ್ರಾವತಿ ಸೇತುವೆಯಲ್ಲಿ ವಾಹನ ಅಪಘಾತ – ಸವಾರ ಮೃತ್ಯು

    ಉಳ್ಳಾಲ: ಮೀನುಗಾರಿಕೆಗೆ ತೆರಳುತ್ತಿದ್ದ ಲಾರಿಯೊಂದು ಏಕಾಏಕಿ ಬ್ರೇಕ್ ಹೊಡೆದ ಪರಿಣಾಮ ಹಿಂದಿನಿಂದ ಧಾವಿಸುತ್ತಿದ್ದ ಸ್ಕೂಟರ್ ಲಾರಿಗೆ ಡಿಕ್ಕಿ ಹೊಡೆದಿದ್ದು ರಸ್ತೆಗೆಸೆಯಲ್ಪಟ್ಟ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನೇತ್ರಾವತಿ ಸೇತುವೆಯಲ್ಲಿ ಇಂದು ಬೆಳಗ್ಗೆ ನಡೆದಿದೆ. ಕೋಟೆಕಾರ್ ಕೊರಗಜ್ಜನ ಕಟ್ಟೆ ಬಳಿ ನಿವಾಸಿ ಅಝ್ವೀನ್(21) ಮೃತ ಯುವಕ. ಅಝ್ವೀನ್ ಝೊಮೆಟೊ ಕಂಪನಿಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಇಂದು ಬೆಳಗ್ಗೆ ಕೋಟೆಕಾರಿಂದ ಮಂಗಳೂರಿಗೆ ಕೆಲಸಕ್ಕೆ ತೆರಳುತ್ತಿದ್ದ ವೇಳೆ ನೇತ್ರಾವತಿ ಸೇತುವೆಯಲ್ಲಿ ಘಟನೆ ನಡೆದಿದೆ. ಮೀನುಗಾರಿಕೆಗೆ ಮಂಗಳೂರಿಗೆ ತೆರಳುತ್ತಿದ್ದ ಲಾರಿಯಲ್ಲಿದ್ದ ಪ್ಲಾಸ್ಟಿಕ್ ಬಾಕ್ಸ್ ರಸ್ತೆಗೆ ಬಿದ್ದಿದ್ದು ಬಾಕ್ಸ್ ಹೆಕ್ಕಲು ಲಾರಿ ಚಾಲಕ ಏಕಾಏಕಿ ಬ್ರೇಕ್ ಹೊಡೆದಿದ್ದಾನೆ. ಪರಿಣಾಮ ಹಿಂದಿನಿಂದ ಬಂದ ಸ್ಕೂಟರ್ ಲಾರಿಗೆ ಡಿಕ್ಕಿ ಹೊಡೆದು ಅಝ್ವೀನ್ ರಸ್ತೆಗೆಸೆಯಲ್ಪಟ್ಟು ಪ್ರಾಣ ಕಳಕೊಂಡಿದ್ದಾನೆ. ಮೃತ ಅಝ್ವೀನ್ ಕುಟುಂಬ ಬಡತನದಲ್ಲಿದ್ದು ಆತನ ತಂದೆ ಹನೀಫ್ ಅವರು ಮನೆಯಲ್ಲಿ ಬಿರಿಯಾನಿ ತಯಾರಿಸಿ ಜೀವನ ನಡೆಸುತ್ತಿದ್ದಾರೆ. ಈ ಸಂಬಂಧ ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss