ಕಾಸರಗೋಡು: ಕಾರು ಮತ್ತು ಟಿಪ್ಪರ್ ನಡುವೆ ಉಂಟಾದ ಅಪಘಾತದಲ್ಲಿ ಮೂವರು ಮೃತಪಟ್ಟ ದಾರುಣ ಘಟನೆ ಶುಕ್ರವಾರ ರಾತ್ರಿ ನೀಲೇಶ್ವರ ಕೊಲ್ಲಂಪಾರೆಯಲ್ಲಿ ನಡೆದಿದೆ.
ಕರಿಂದಲದ ಕೆ.ಶ್ರೀರಾಗ್, ಕಿಶೋರ್ ಮತ್ತು ಅನುಷ್ ಮೃತಪಟ್ಟವರು. ಮೂವರು ಕೆಎಸ್‌ಇಬಿ ಕಾರ್ಮಿಕರಾಗಿದ್ದರು ಎಂದು ತಿಳಿದುಬಂದಿದೆ.
ಕಾರಲ್ಲಿದ್ದ ಬಿನು ಗಂಭೀರ ಗಾಯಗೊಂಡಿದ್ದು, ಕಣ್ಣೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾತ್ರಿ 8 ಗಂಟೆಯ ಸುಮಾರಿಗೆ ಈ ಅಪಘಾತ ನಡೆದಿದೆ. ನೀಲೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮೃತ ದೇಹವನ್ನು ಜಿಲ್ಲಾಸ್ಪತ್ರೆಯಲ್ಲಿರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.