Friday, December 1, 2023

ಬೆಂಗಳೂರು ರಾಜ – ಮಹಾರಾಜ ಜೋಡುಕರೆ ಕಂಬಳ ಕೂಟದ ಫಲಿತಾಂಶ

ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ : ಕನೆಹಲಗೆ: 07 ಜೊತೆ ಅಡ್ಡಹಲಗೆ: 06 ಜೊತೆ ಹಗ್ಗ ಹಿರಿಯ: 21 ಜೊತೆ ನೇಗಿಲು ಹಿರಿಯ: 32 ಜೊತೆ ಹಗ್ಗ ಕಿರಿಯ: 31...
More

  Latest Posts

  ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ವತಿಯಿಂದ ಕನಕ ಜಯಂತಿ ಆಚರಣೆ

  ಉಡುಪಿ: ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ವತಿಯಿಂದ ಭಕ್ತ ಕನಕದಾಸರ ಕನಕ ಜಯಂತಿ ಆಚರಣೆ ಕಾರ್ಯಕ್ರಮ ದಿನಾಂಕ 30-11-2023ರಂದು ಸಂಜೆ 4.30ಕ್ಕೆ ಸರಿಯಾಗಿ ಎಂ.ಜಿ.ಎಂ ಕಾಲೇಜು ಬಳಿಯಿರುವ ತುಳುನಾಡ...

  ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಅರಣ್ಯ ಇಲಾಖೆ ನೌಕರ

  ಕುಂದಾಪುರ: ಅರಣ್ಯ ಇಲಾಖೆ ವಶದಲ್ಲಿದ್ದ ವಾಹನ ಬಿಡುಗಡೆಗೆ ಲಂಚ ಸ್ವೀಕರಿಸುತ್ತಿದ್ದ  ಕುಂದಾಪುರ ಅರಣ್ಯ ಇಲಾಖೆಯ ನೌಕರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯ ಕ್ಷೇಮಾಭಿವೃದ್ಧಿ ನೌಕರ...

  ಡಿ.1 ರಂದು “ರಾಪಟ” ತುಳು ಸಿನೆಮಾ ಬಿಡುಗಡೆ

  ಬೊಳ್ಳಿ ಮೂವೀಸ್ ಹಾಗೂ ಅವಿಕಾ ಪ್ರೊಡಕ್ಷನ್ಸ್ ನಿರ್ಮಾಣದ ತೆಲಿಕೆದ ಬೊಳ್ಳಿ ಡಾ. ದೇವದಾಸ್ ಕಾಪಿಕಾಡ್ ಕಥೆ, ಚಿತ್ರಕಥೆ,ಸಂಭಾಷಣೆ, ಸಾಹಿತ್ಯ ಬರೆದು, ಅರ್ಜುನ್ ಕಾಪಿಕಾಡ್ ನಿರ್ದೇಶನದ ಚೊಚ್ಚಲ ಸಿನಿಮಾ ರಾಪಟ ಡಿ.1...

  ಲಂಚ ಸ್ವೀಕರಿಸುತ್ತಿದ್ದ ಅರಣ್ಯ ಇಲಾಖೆಯ ಗುಮಾಸ್ತ ಲೋಕಾಯುಕ್ತ ಬಲೆಗೆ

  ಕುಂದಾಪುರ : ಲಂಚ ಸ್ವೀಕರಿಸುತ್ತಿದ್ದ ಅರಣ್ಯ ಇಲಾಖೆಯ ಗುಮಾಸ್ತರೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕುಂದಾಪುರದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಗುಮಾಸ್ತ ಬಿ.ಮಂಜುನಾಥ್ ಪೂಜಾರಿ ಲೋಕಾಯಕ್ತ...

  ತುಳುನಾಡ ರಕ್ಷಣಾ ವೇದಿಕೆ (ರಿ.) ಮಹಿಳಾ ಘಟಕದ ವತಿಯಿಂದ “ಆಟಿದ ನೆಂಪು” ಕಾರ್ಯಕ್ರಮ

  ಮಂಗಳೂರು: ಹಳ್ಳಿಯ ಜನರ ಬೇಸಾಯದ ಆನಂತರದ ಭವಣೆ, ಅಂದಿನ ತೊಡರುಗಳನ್ನು ತಿಳಿಸುವ ಕಾರ್ಯ “ಆಟಿದ ನೆಂಪು” ಅರ್ಥವಾಗಿಸಿದೆ. – ಕೇಮಾರ್ ಶ್ರೀ. ಮಂಗಳೂರು: ಹಳ್ಳಿಯ ಜನರ ಬೇಸಾಯದ ಆನಂತರದ ಭವಣೆ, ಅಂದಿನ ತೊಡರುಗಳನ್ನು, ಕಷ್ಟ ಕಾರ್ಪಣ್ಯಗಳನ್ನು ಇಂದಿನ ಪೀಳಿಗೆಗೆ ತಿಳಿಸುವ ಈ ಒಂದು ಆಟಿದ ನೆಂಪು ಕಾರ್ಯಕ್ರಮ ಅರ್ಥಪೂರ್ಣವಾಗಿದೆ. ಹಿಂದೆ ಊರಿನ ನಂಬಿಕೆಯ ದಿನಗಳಲ್ಲಿ ಆಷಾಢ ತಿಂಗಳಲ್ಲಿ ಯಾವುದೇ ಪವಿತ್ರ ಕಾರ್ಯಕ್ರಮಗಳು ಜರಗುತ್ತಿರಲಿಲ್ಲ. ಕಾರಣ ಆ ತಿಂಗಳು ಯಾವುದೇ ಕಾರ್ಯಕ್ರಮಕ್ಕೆ ಹೊಂದಾಣಿಕೆಯಾಗುತ್ತಿರಲಿಲ್ಲ. ದೈಹಿಕವಾಗಿ, ಮಾನಸಿಕವಾಗಿಯೂ ಆಷಾಢ ತಿಂಗಳು ಒಂದು ತಟಸ್ಥ ಮಾಸವಾಗಿತ್ತು ಎಂದು ಕೇಮಾರು ಸಂದೀಪನಿ ಮಠದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಈಶ ವಿಠಲದಾಸ ಸ್ವಾಮೀಜೀ ನುಡಿದರು. ಅವರು ಇಂದು ಅಪರಾಹ್ನ ಮಂಗಳೂರು ಉರ್ವ ಸ್ಟೋರ್ ನಲ್ಲಿರುವ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಭಾಭವನದಲ್ಲಿ ತುಳುನಾಡ ರಕ್ಷಣಾ ವೇದಿಕೆ ಮಹಿಳಾ ಘಟಕದ ವತಿಯಿಂದ “ಆಟಿದ ನೆಂಪು” ಕಾರ್ಯಕ್ರಮವನ್ನು ದೀಪ ಬೆಳಗಿಸಿ, ಉದ್ಘಾಟಿಸಿ, ಮಾತನಾಡಿದರು. ಬದಲಾದ ಬದುಕಿನಲ್ಲಿ ಅಂದಿನ ಬದುಕಿನ ಆಚಾರ-ವಿಚಾರಗಳು ಕಟ್ಟುನಿಟ್ಟಿನ ಸಂಸ್ಕೃತಿ, ಸಂಪ್ರದಾಯದ ಪಾಲನೆಯ ಬಗ್ಗೆ ನಾವು ಇಂದಿನ ಮಕ್ಕಳಿಗೆ ಆಟಿಯ ಇಂತಹ ಕಾರ್ಯಕ್ರಮದ ಮೂಲಕ ತಿಳಿಸುವುದು ಅವಶ್ಯ. ಇಂದಿನ ಕಾರ್ಯಕ್ರಮಕ್ಕೆ ತುಳುನಾಡ ರಕ್ಷಣಾ ವೇದಿಕೆಯ ಮಹಿಳೆಯರ ಸಂಘಟಿತ ಯೋಜನೆ ಯಶಸ್ಸನ್ನು ತಂದಿದೆ. ಮುಂದೆಯೂ ಎಲ್ಲರ ಸಹಕಾರ ದೊರೆಯಲಿ ಎಂದು ಹಾರೈಸಿದರು.


  ಮಾಜಿ ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ಸೋಜ ಮಾತನಾಡಿ ಆಟಿಯ ಕಾರ್ಯಕ್ರಮದಲ್ಲಿ ವಿವಿಧ ತಿನಸುಗಳ ಪ್ರದರ್ಶನಕ್ಕೆ ಮಣ್ಣಿನ ಪಾತ್ರೆಗಳಿಗೆ ಪ್ರಾಮುಖ್ಯತೆ ನೀಡಿ ಎಂದರು. ನಂತರ ಶಾಸಕ ವೇದವ್ಯಾಸ್ ಕಾಮತ್ ಮಾತನಾಡಿ ಪಾಲೆ ಮರ ನಶಿಸಿ ಹೋಗುವ ಈ ಕಾಲಗಟ್ಟದಲ್ಲಿ ಅದನ್ನು ಸಂರಕ್ಷಿಸುವ ಅಗತ್ಯತೆ ಇದೆ ಎಂದರು.

  ತುಳುನಾಡ ರಕ್ಷಣಾ ವೇದಿಕೆ ಮಹಿಳಾ ಘಟಕ ಮಂಗಳೂರು ಇದರ ಅಧ್ಯಕ್ಷರಾದ ಆಶಾ ಶೆಟ್ಟಿ ಅತ್ತಾವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ವೇದಿಕೆಯಲ್ಲಿ ಮಂಗಳೂರು ದಕ್ಷಿಣ ವಿಭಾಗ ಶಾಸಕ ಡಿ. ವೇದವ್ಯಾಸ ಕಾಮತ್, ಮಾಜಿ ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ಸೋಜ, ಮಂಗಳೂರು ಪ್ರದೇಶ ಕಥೋಲಿಕ್ ಸಭಾ ಅಧ್ಯಕ್ಷ ಆಲ್ವಿನ್ ಡಿ’ಸೋಜ, ಭಾರತೀಯ ಕಮ್ಯುನಿಸ್ಟ್ ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಕೆ ಯಾದವ ಶೆಟ್ಟಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಕರ್ನೂರ್‌ ಮೋಹನ್‌ ರೈ, ಅಖಿಲ ಭಾರತ ತುಳು ಒಕ್ಕೂಟ ಸಂಘಟನಾ ಕಾರ್ಯದರ್ಶಿ ಡಾ. ರಾಜೇಶ್‌ ಆಳ್ವ ಬದಿಯಡ್ಕ, ಸಮಾಜ ಸೇವಕಿ, ಕಲಾವಿದೆ ಶ್ರೀಮತಿ ವೀಣಾ ಜಯಂತಿ ಶೆಟ್ಟಿ, ಸಮಾಜ ಸೇವಕ ಎಂ.ಬಿ. ಖಾನ್‌ ಮುಲ್ಕಿ, ಮೊದಲಾದವರು ಉಪಸ್ಥಿತರಿದ್ದು, ಶುಭಾಸಂಶನೆಗೈದರು. ಈ ವೇಳೆ ವಿವಿಧ ವಿಷಯದಲ್ಲಿ ಸಾಧನೆ ಮಾಡಿದ ಸಾಧಕರದ ಸಮಾಜ ಸೇವಕ ಶ್ರೀ ಅರ್ಜುನ್ ಭಂಡಾರ್ಕರ್ ಖ್ಯಾತ ವೈದ್ಯ ಡಾ! ಸತೀಶ್ ಕಲ್ಲಿಮಾರ್ ತುಳು- ಕನ್ನಡ ಚಿತ್ರ ನಿರ್ದೇಶಕ ಶ್ರೀ ಇಸ್ಮಾಯಿಲ್ ಮೂಡುಶೆಡ್ಡೆ , ಪಶ್ಚಿಮ ರಿಯಾ ಸಂಸ್ಥೆಯ ಶ್ರೀ ರೋಹಿತ್ ಸಾಂಕ್ತುಸ್ ಬಹುಮುಖ ಪ್ರತಿಭೆ ಕುಮಾರ್ ಧನ್ವಿತ್ ವೀರೇಂದ್ರ ಸುವರ್ಣ ರವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

  ಕಾರ್ಯಕ್ರಮದಲ್ಲಿ ಸರ್ವ ಕಾಲೇಜು ವಿದ್ಯಾರ್ಥಿ ಸಂಘ ಅದ್ಯಕ್ಷರಾದ ನ್ಯಾಯವಾದಿಗಳಾದ ದಿನಕರ ಶೆಟ್ಟಿಯವರ ಹಿರಿಯ ಮಗ ಮೋಹಿತ್ ಕೆಎಂಸಿ ಆಸ್ಪತ್ರೆ ಅತ್ತಾವರದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ದೈವಾಧೀನರಾಗಿದ್ದರೆ ಅವರಿಗೆ ಒಂದು ನಿಮಿಷ ಕಾಲ ಎದ್ದು ನಿಂತು ಮೌನ ಪ್ರಾರ್ಥನೆ ಸಲ್ಲಿಸುವ ಮುಖೇನ ಸಂತಾಪ ಸೂಚಿಸಲಾಯಿತು.

  ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ಪ್ರಾಸ್ತಾವಿಕ ಮಾತುಗಳನ್ನಾಡಿ, ಸ್ವಾಗತಿಸಿ, ಡಾ. ಮಂಜುಳಾ ಶೆಟ್ಟಿ ನಿರೂಪಿಸಿ, ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ ವಂದಿಸಿದರು.ಕಾರ್ಯಕ್ರಮದ ಮುಂಚಿತ ನಾಡಿನ ಮಕ್ಕಳ ಮಹಿಳೆಯರ ಆಟಿ ಕಡೆಂಗೆ, ಕಂಗಿಲು, ಕಂಸಲೆ, ಸಿರಿ ಚಾವಡಿ ಹತ್ತು ಹಲವು ಜಾನಪದ ಹಾಗೂ ವಿವಿಧ ನೃತ್ಯ ವಿನೋದಾವಳಿಗಳು ಮನೋರಂಜನ ಕಾರ್ಯಕ್ರಮಗಳು, ನಡೆಯಿತು. ಬಳಿಕ ಆಟಿದ ತಿಂಗಳಿಗೆ ಸಂಬಂಧಿಸಿದ ತಿಂಡಿ ತಿನಸುಗಳ ಸ್ಪರ್ಧೆ ಹಾಗೂ ಭೋಜನ ಕೂಟ ನಡೆಯಿತು.

  ಈ ಸಂದರ್ಭದಲ್ಲಿ ತುಳುನಾಡ ರಕ್ಷಣಾ ವೇದಿಕೆಯ ಕೇಂದ್ರಿಯ ಮಂಡಳಿ ಪದಾಧಿಕಾರಿಗಳು, ಉಡುಪಿ ಜಿಲ್ಲೆಯ ಹಾಗೂ ಉಡುಪಿ ತಾಲೂಕಿನ ತುಳುನಾಡ ರಕ್ಷಣಾ ವೇದಿಕೆಯ ಮುಖಂಡರು ಮತ್ತು ಮಹಿಳಾ ಘಟಕದ ಪದಾಧಿಕಾರಿಗಳು ಹಾಗೂ ವಿವಿಧ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.

  Latest Posts

  ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ವತಿಯಿಂದ ಕನಕ ಜಯಂತಿ ಆಚರಣೆ

  ಉಡುಪಿ: ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ವತಿಯಿಂದ ಭಕ್ತ ಕನಕದಾಸರ ಕನಕ ಜಯಂತಿ ಆಚರಣೆ ಕಾರ್ಯಕ್ರಮ ದಿನಾಂಕ 30-11-2023ರಂದು ಸಂಜೆ 4.30ಕ್ಕೆ ಸರಿಯಾಗಿ ಎಂ.ಜಿ.ಎಂ ಕಾಲೇಜು ಬಳಿಯಿರುವ ತುಳುನಾಡ...

  ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಅರಣ್ಯ ಇಲಾಖೆ ನೌಕರ

  ಕುಂದಾಪುರ: ಅರಣ್ಯ ಇಲಾಖೆ ವಶದಲ್ಲಿದ್ದ ವಾಹನ ಬಿಡುಗಡೆಗೆ ಲಂಚ ಸ್ವೀಕರಿಸುತ್ತಿದ್ದ  ಕುಂದಾಪುರ ಅರಣ್ಯ ಇಲಾಖೆಯ ನೌಕರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯ ಕ್ಷೇಮಾಭಿವೃದ್ಧಿ ನೌಕರ...

  ಡಿ.1 ರಂದು “ರಾಪಟ” ತುಳು ಸಿನೆಮಾ ಬಿಡುಗಡೆ

  ಬೊಳ್ಳಿ ಮೂವೀಸ್ ಹಾಗೂ ಅವಿಕಾ ಪ್ರೊಡಕ್ಷನ್ಸ್ ನಿರ್ಮಾಣದ ತೆಲಿಕೆದ ಬೊಳ್ಳಿ ಡಾ. ದೇವದಾಸ್ ಕಾಪಿಕಾಡ್ ಕಥೆ, ಚಿತ್ರಕಥೆ,ಸಂಭಾಷಣೆ, ಸಾಹಿತ್ಯ ಬರೆದು, ಅರ್ಜುನ್ ಕಾಪಿಕಾಡ್ ನಿರ್ದೇಶನದ ಚೊಚ್ಚಲ ಸಿನಿಮಾ ರಾಪಟ ಡಿ.1...

  ಲಂಚ ಸ್ವೀಕರಿಸುತ್ತಿದ್ದ ಅರಣ್ಯ ಇಲಾಖೆಯ ಗುಮಾಸ್ತ ಲೋಕಾಯುಕ್ತ ಬಲೆಗೆ

  ಕುಂದಾಪುರ : ಲಂಚ ಸ್ವೀಕರಿಸುತ್ತಿದ್ದ ಅರಣ್ಯ ಇಲಾಖೆಯ ಗುಮಾಸ್ತರೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕುಂದಾಪುರದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಗುಮಾಸ್ತ ಬಿ.ಮಂಜುನಾಥ್ ಪೂಜಾರಿ ಲೋಕಾಯಕ್ತ...

  Don't Miss

  ಮಂಗಳೂರು: ಅರ್ಧದಲ್ಲಿಯೆ ಸ್ಥಗಿತಗೊಂಡ ಅಪಾರ್ಟ್ಮೆಂಟ್ ಲಿಫ್ಟ್ – ಅಗ್ನಿಶಾಮಕ ದಳದಿಂದ ಐವರ ರಕ್ಷಣೆ

  ಮಂಗಳೂರು: ನಗರದ ಅಪಾರ್ಟ್ಮೆಂಟ್ ಒಂದರಲ್ಲಿ ಲಿಫ್ಟ್ ಕೆಟ್ಟು ಅರ್ಧದಲ್ಲಿಯೆ ಸ್ಥಗಿತಗೊಂಡಿದ್ದು, ಲಿಫ್ಟ್‌ನಲ್ಲಿ ಸಿಲುಕಿಕೊಂಡಿದ್ದ ಐವರನ್ನು ಅಗ್ನಿಶಾಮಕದಳದ ಸಿಬ್ಬಂದಿ ರಕ್ಷಿಸಿದ ಘಟನೆ ನಡೆದಿದೆ. ನಗರದ ಬೆಂದೂರಿನಲ್ಲಿರುವ ಶಿಲ್ಪಾ ಪ್ಯಾಲೇಸ್ ಎಂಬ ಅಪಾರ್ಟ್ಮೆಂಟ್...

  ಮಂಗಳೂರು : ಮರಣ ಪ್ರಮಾಣ ದೃಢೀಕರಣಕ್ಕೆ 13 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದ ವಿಎ

  ಮಂಗಳೂರು : ಅಜ್ಜನ ಮರಣ ಪ್ರಮಾಣ ಪತ್ರದ ದೃಢೀಕರಣಕ್ಕೆ 13 ಸಾವಿರ ಲಂಚ ಕೇಳಿದ ಚೇಳ್ಯಾರು ಗ್ರಾಮದ ವಿಎ ಶ್ರೀ ವಿಜಿತ್ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರ ಕೈಗೆ...

  ಮಂಗಳೂರು: ಎಮ್ಮೆಕೆರೆ ಕ್ರೀಡಾಂಗಣದ ಅಭಿವೃದ್ಧಿಗೆ ಶಂಕು ಸ್ಥಾಪನೆ

  ಮಂಗಳೂರು: ಎಮ್ಮೆಕೆರೆ ಕ್ರೀಡಾಂಗಣದ ಅಭಿವೃದ್ಧಿಗೆ ಶಂಕು ಸ್ಥಾಪನೆ ಬೆಳಗ್ಗೆ 11 ಗಂಟೆಗೆ ಎಮ್ಮೆಕೆರೆ ಮೈದಾನದಲ್ಲಿ ಜನ ಪ್ರತಿನಿಧಿಗಳ ಉಪಸ್ಥಿತಿಯೊಂದಿಗೆ ನಡೆದಿದೆ.

  ಬೆಳ್ತಂಗಡಿ: ಬೈಕ್ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ – ಸವಾರ ಸಾವು

  ಬೆಳ್ತಂಗಡಿ: ಬೈಕ್ ನ ಸೈಡ್ ಸ್ಟ್ಯಾಂಡ್ ತೆಗೆಯದೆ ಬೈಕ್ ಚಲಾಯಿಸಿದ ಪರಿಣಾಮ ಬೈಕ್ ನಿಯಂತ್ರಣ ಡಿವೈಡರ್ ಗೆ ಡಿಕ್ಕಿ ಹೊಡೆದು ಬೈಕ್ ಸವಾರ ಸಾವನಪ್ಪಿದ ಘಟನೆ ಬೆಳ್ತಂಗಡಿಯ ಉಜಿರೆಯಲ್ಲಿ ನಡೆದಿದ್ದು,...

  ಯಕ್ಷಾಂಗಣ ಸಪ್ತಾಹದಲ್ಲಿ ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ ಸಂಸ್ಮರಣೆ

  ಮಂಗಳೂರು: 'ಸಾಧನ ಶೀಲ ಕಲಾವಿದರ ಹೆಸರಿನೊಂದಿಗೆ ಅವರ ಮನೆತನದ ಅಥವಾ ಊರಿನ ಹೆಸರು ಸೇರಿಕೊಂಡಿರುತ್ತದೆ. ಇದು ಅಂಥವರ ಸಮಗ್ರ ಕುಟುಂಬಕ್ಕೆ ಸಲ್ಲುವ ಗೌರವ. ಬೆಟ್ಟಂಪಾಡಿ ಬಾಳಪ್ಪ ಶೆಟ್ಟರು ಈ ನಿಟ್ಟಿನಲ್ಲಿ...