Friday, July 19, 2024
spot_img
More

  Latest Posts

  ಉಡುಪಿ : ಜಲಪಾತ ವೀಕ್ಷಣೆಗೆ ತೆರಳಿದ್ದ ಯುವಕ ನೀರುಪಾಲು

  ಕೊಲ್ಲೂರು: ಯುವಕನೊಬ್ಬ ಜಲಪಾತದ ನೀರಿಗೆ ಕಾಲುಜಾರಿ ಬಿದ್ದು ನೀರುಪಾಲಾದ ಘಟನೆ ,ಕೊಲ್ಲೂರು ಬಳಿಯಿರುವ ಅರಶಿನಗುಂಡಿ ಜಲಪಾತದಲ್ಲಿ ಸಂಭವಿಸಿದೆ. ಭದ್ರಾವತಿ ಮೂಲದ ಶರತ್ ಕುಮಾರ್ (23) ಮೃತಪಟ್ಟ ಯುವಕ. ಈ ಯುವಕ ಬೀಳುತ್ತಿರುವ ದೃಶ್ಯ ಮತ್ತೋರ್ವ ಯುವಕನ ಮೊಬೈಲ್ ನಲ್ಲಿ ಸೆರೆಯಾಗಿದೆ. ಕೊಲ್ಲೂರಿಗೆ ಕಾರಿನಲ್ಲಿ ಬಂದಿದ್ದ ಯುವಕ, ಜಲಪಾತ ವೀಕ್ಷಣೆಗೆಂದು ತೆರಳಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಬಂಡೆಕಲ್ಲೊಂದರ ಮೇಲೆ ಯುವಕ ನಿಂತಿದ್ದಾಗ ,ಅಕಸ್ಮಾತ್ತಾಗಿ ಕಾಲುಜಾರಿ ಬಿದ್ದಿದ್ದಾನೆ. ಯುವಕನ ಮೃತದೇಹದ ಪತ್ತೆಗೆ ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸುತ್ತಿದ್ದು , ಘಟನಾ ಸ್ಥಳಕ್ಕೆ ಕೊಲ್ಲೂರು ಪಿ.ಎಸ್.ಐ ಜಯಲಕ್ಷ್ಮಿ ಹಾಗೂ ಸಿಬ್ಬಂದಿ ಭೇಟಿ ನೀಡಿದ್ದಾರೆ. ಕೊಲ್ಲೂರು ಠಾಣೆಯಲ್ಲಿ ದಾಖಲಾಗಿದೆ.

  spot_img
  spot_img

  Latest Posts

  spot_imgspot_img
  spot_imgspot_img
  spot_img

  Don't Miss