Thursday, September 19, 2024
spot_img
More

    Latest Posts

    ಪುತ್ತೂರು : 2016ರಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳಕ್ಕೆ ಯತ್ನಿಸಿದ ಅಪರಾಧಿಗೆ ಶಿಕ್ಷೆ ಪ್ರಕಟ

    ಪುತ್ತೂರು : 2016ರಲ್ಲಿ ಐದು ವರ್ಷದ ಹಿಂದೆ ಲೈಂಗಿಕ ಕಿರುಕುಳಕ್ಕೆ ಯತ್ನಿಸಿದ ಒಳಮೊಗ್ರು ಗ್ರಾಮದ ಶಾಫಿ ಅಡ್ಕ ಯಾನೆ ಇಬ್ರಾಹಿಂ ನನ್ನು ಪುತ್ತೂರು ಪೋಕ್ಸೋ ವಿಶೇಷ ನ್ಯಾಯಾಲಯ ಹಾಗೂ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಅಪರಾಧಿ ಎಂದು ಘೋಷಿಸಿದ್ದು ನಾಲ್ಕುವರೆ ವರ್ಷ ಸಾದಾ ಸ್ವರೂಪದ ಶಿಕ್ಷೆ ಹಾಗೂ ರೂ. 16,000 ದಂಡ ವಿಧಿಸಿ ಶಿಕ್ಷೆ ಪ್ರಕಟಿಸಿದೆ.

    ಆರೋಪಿಗೆ ಐಪಿಸಿ ಸೆಕ್ಷನ್ 354 ರಡಿ ಅಪರಾಧಕ್ಕೆ 1 ವರ್ಷ ಸಾದಾ ಸ್ವರೂಪದ ಶಿಕ್ಷೆ ಮತ್ತು ರೂ. 5,000/- ದಂಡ, ದಂಡ ತೆರಲು ತಪ್ಪಿದ್ದಲ್ಲಿ 3 ತಿಂಗಳು ಸಾದಾ ಸ್ವರೂಪದ ಶಿಕ್ಷೆ, ಭಾ.ದಂ.ಸಂ. ಕಲಂ 448 ರಡಿ ಅಪರಾಧಕ್ಕೆ 6 ತಿಂಗಳು ಸಾದಾ ಸ್ವರೂಪದ ಶಿಕ್ಷೆ ಮತ್ತು ರೂ. 1,000/- ದಂಡ, ದಂಡ ತೆರಲು ತಪ್ಪಿದ್ದಲ್ಲಿ 1 ತಿಂಗಳ ಸಾದಾ ಸ್ವರೂಪದ ಶಿಕ್ಷೆ ಮತ್ತು ಕಲಂ 7, 8, 11, 12 ಷೋ ಕಾಯ್ದೆಯಡಿ ಅಪರಾಧಕ್ಕೆ 3 ವರ್ಷ ಸಾದಾ ಸ್ವರೂಪದ ಶಿಕ್ಷೆ ಮತ್ತು ರೂ. 10,000/- ದಂಡ, ದಂಡ ತೆರಲು ತಪ್ಪಿದಲ್ಲಿ 6 ತಿಂಗಳ ಸಾದಾ ಸ್ವರೂಪದ ಶಿಕ್ಷೆ ವಿಧಿಸಿ ನ್ಯಾಯಾಧೀಶರಾದ ಶ್ರೀ ರುಡಾಲ್ಫ್ ಪಿರೇರಾ ತೀರ್ಪು ನೀಡಿದರು.

    ಪ್ರಕರಣ ಹಿನ್ನೆಲೆ:ಪ್ರಕರಣದ ಅಪರಾಧಿಯಾಗಿರುವ ಶಾಫಿ ಆಡ್ಕ ಯಾನೆ ಇಬ್ರಾಹಿಂ ಇ.ಎ. ಸಂತ್ರಸ್ತೆ ಮನೆಯಲ್ಲಿ ಒಬ್ಬಳೇ ಇರುವುದನ್ನು ಖಾತ್ರಿ ಪಡಿಸಿಕೊಂಡು ಫೆ. 10, 2016 ರಂದು ಆಕೆಯ ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ ಮನೆಯ ಬಾಗಿಲು ತಟ್ಟಿದ್ದಾನೆ. ಬಾಲಕಿ ಏನೆಂದು ವಿಚಾರಿಸಲು ಬಾಗಿಲು ತೆರೆದಾಗ ಆಪಾದಿತನು ಅಪ್ರಾಪ್ತೆಯ ಕೈ ಹಿಡಿದು ಎಳೆದು ತನ್ನೊಂದಿಗೆ ಬರುವಂತೆ ಕರೆದಿದ್ದಾನೆ. ಈ ಸಮಯದಲ್ಲಿ ಬಾಲಕಿಯು ಆಪಾದಿತನಿಂದ ಬಿಡಿಸಿಕೊಂಡು ಮನೆಯ ಒಳಗಡೆ ಹೋಗಿ ಚಿಲಕ ಹಾಕಿಕೊಂಡು ಬೊಬ್ಬೆ ಹೊಡೆದಿದ್ದಾಳೆ.

    ಈ ಸಂದರ್ಭ ಶಾಫಿ ಅಲ್ಲಿಂದ ರಿಕ್ಷಾದಲ್ಲಿ ಪರಾರಿಯಾಗಿದ್ದನು.ಈ ಕುರಿತು ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರಿನ ಅನ್ವಯ ಪೊಲೀಸರು ಆರೋಪಿಯ ವಿರುದ್ಧ ಭಾ.ದಂ.ಸಂ. ಕಲಂ 448, 354 ಮತ್ತು ಪೋಕ್ಲೋ ಕಾಯ್ದೆ ಕಲಂ 12 ರಡಿ ಪ್ರಥಮ ವರ್ತಮಾನ ದಾಖಲಿಸಿದರು. ಬಳಿಕ ಅಂದಿನ ಪುತ್ತೂರು ಗ್ರಾಮಾಂತರ ಠಾಣಾ ಪಿ.ಎಸ್.ಐ. ರವಿ ಬಿ.ಎಸ್. ರವರು ಪ್ರಕರಣದ ಸಮಗ್ರ ತನಿಖೆ ನಡೆಸಿ ಆರೋಪಿಯ ವಿರುದ್ಧ ಪೊಕ್ಲೊ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದರು ಹಾಗೂ ನ್ಯಾಯಾಲಯದಲ್ಲಿ ವಿವರವಾದ ಸಾಕ್ಷ್ಯ ನುಡಿದಿದ್ದರು. ಸರ್ಕಾರದ ಪರವಾಗಿ ಒಟ್ಟು 11 ಸಾಕ್ಷಿಗಳನ್ನು ವಿಚಾರಣೆ ನಡೆಸಲಾಗಿದೆ. ಸರ್ಕಾರದ ಪರವಾಗಿ ಪೋಕ್ಸೋ ವಿಶೇಷ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕರಾದ ಕುದ್ರಿಯ ಪುಷ್ಪರಾಜ ಅಡ್ಯಂತಾಯರವರು ವಾದಿಸಿದ್ದರು.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss