Saturday, June 15, 2024
spot_img
More

  Latest Posts

  ಕಾರ್ಕಳ: ತಲೆಮರೆಸಿಕೊಂಡಿದ್ದ ಕಳವು ಪ್ರಕರಣದ ಆರೋಪಿ ಬಂಧನ

  ಕಾರ್ಕಳ: ಕಳವು ಪ್ರಕರಣದ ಆರೋಪಿಯೋರ್ವನನ್ನು ಕಾರ್ಕಳ ನಗರ ಪೊಲೀಸರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಾರ್ಗಲ್‌ನಲ್ಲಿ ಆ. 9ರಂದು ವಶಕ್ಕೆ ಪಡೆದಿದ್ದಾರೆ.

  2022ರ ಜೂನ್‌ ತಿಂಗಳಲ್ಲಿ ಕಾರ್ಕಳ ಬೈಪಾಸ್‌ ರಸ್ತೆಯಲ್ಲಿರುವ ಡಾ| ಟಿ.ಎಂ.ಎ. ಪೈ ಆಸ್ಪತ್ರೆಯ ಮುಂಭಾಗದ ಮಂಜುಶ್ರೀ ಕಟ್ಟಡದಲ್ಲಿದ್ದ ಧ್ವನಿ ಹಾರ್ಡವೇರ್‌ ಅಂಗಡಿಯಿಂದ 1.45 ಲಕ್ಷ ರೂ.ನಗದು ಹಣವನ್ನು ಕಳವು ಮಾಡಿದ್ದ ಪ್ರಕರಣದಲ್ಲಿ ಸಾಗರ ತಾಲೂಕಿನ ನೂರ (47) ಆರೋಪಿಯಾಗಿದ್ದ.

  ಅನಂತರ ತಲೆಮರೆಸಿಕೊಂಡಿದ್ದ. ಖಚಿತ ಮಾಹಿತಿ ಮೇರೆಗೆ ಸಾಗರಕ್ಕೆ ತೆರಳಿದ ಕಾರ್ಕಳ ನಗರ ಪೊಲೀಸರು ಕೃತ್ಯಕ್ಕೆ ಬಳಸಿದ್ದ ಕಾರು ಸಹಿತ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

  ಪ್ರಕರಣದ ಉಳಿದ ಆರೋಪಿ ಗಳಾದ ಇಬ್ರಾಹಿಂ ಕಾರ್ಗಲ್, ಮಹಮ್ಮದ್‌ ಇಕ್ಬಾಲ್‌ ಹಾಸನ ತಲೆಮರೆಸಿಕೊಂಡಿದ್ದಾರೆ.

  ಕಾರ್ಕಳ ಉಪವಿಭಾಗದ ಡಿವೈಎಸ್‌ಪಿ ವಿಜಯ ಪ್ರಸಾದ್‌, ಕಾರ್ಕಳ ಸರ್ಕಲ್‌ ಇನ್‌ಸ್ಪೆಕ್ಟರ್‌ ಸಂಪತ್‌ ಕುಮಾರ್‌ ಅವರ ಮಾರ್ಗದರ್ಶನದಲ್ಲಿ ಕಾರ್ಕಳ ನಗರ ಪೊಲೀಸ್‌ ಠಾಣೆ ಪಿಎಸ್‌ಐ ಪ್ರಸನ್ನ ಕುಮಾರ್‌, ಕ್ರೈಂ ಎಸ್‌ಐ ದಾಮೋ ದರ್‌, ಎಎಸ್‌ಐ ರಾಜೇಶ್‌ ಪಿ., ಪಿ ಸಿ ಘನಶ್ಯಾಮ್, ಸಿದ್ಧರಾಯ ಮತ್ತು ಆನಂದ ಕಾರ್ಯಾಚರಣೆಯಲ್ಲಿ ಭಾಗ ವಹಿಸಿದ್ದರು.

  spot_img
  spot_img

  Latest Posts

  spot_imgspot_img
  spot_imgspot_img
  spot_img

  Don't Miss