Thursday, September 19, 2024
spot_img
More

    Latest Posts

    ಪುತ್ತೂರಿನ ರಾಧ ಡ್ರೆಸಸ್ಸ್ ನಲ್ಲಿ ವ್ಯಾಪಾರ – ಕೋವಿಡ್ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಅಧಿಕಾರಿಗಳಿಂದ ದಂಡ ವಸೂಲಿ

    ಪುತ್ತೂರು :ಎ 27 : ರಾಜ್ಯದಲ್ಲಿ ಕೊರೊನಾ ಎಂಬ ಸಾಂಕ್ರಮಿಕ ಖಾಯಿಲೆ ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನಲೆಯಲ್ಲಿ ಅಗತ್ಯ ವಸ್ತುಗಳ ಹೊರತು ಪಡಿಸಿ ಉಳಿದ್ದೆಲ್ಲಾ ವ್ಯವಹಾರಗಳನ್ನು ಬಂದ್ ಮಾಡುವಂತೆ ಕಳೆದ ಗುರುವಾರ ರಾಜ್ಯ ಸರಕಾರ ಅದೇಶ ಹೊರಡಿಸಿತ್ತು.
    ಇದರಂತೆ ಜವಳಿ ,ಚಪ್ಪಲಿ , ಪ್ಯಾನ್ಸಿ , ಜ್ಯುವೆಲ್ಲರಿ ಇತ್ಯಾದಿ ಮಾರಟ ಮಳಿಗೆಗಳಿಗೆ ರಾಜ್ಯ ಸರಕಾರ ವ್ಯವಹಾರ ನಡೆಸಲು ಅವಕಾಶ ನೀಡಿಲ್ಲ. ಅಲ್ಲದೇ ಹೊಟೇಲ್ ಗಳಲ್ಲಿಯೂ ಕೇವಲ ಪಾರ್ಸಲ್ ಗಳಿಗೆ ಮಾತ್ರ ಅವಕಾಶ ಕಲ್ಪಿಸಿದೆ.
    ಸರಕಾರದ ಈ ನಿಯಮವನ್ನು ಕೊವೀಡ್ ಅನಿಯಂತ್ರಿತವಾಗಿ ಹಬ್ಬುತ್ತಿರುವ ಹಿನ್ಬಲೆಯಲ್ಲಿ ಬಹುತೇಕ ಎಲ್ಲ ವ್ಯವಹಾರಸ್ಥರೂ ಚಾಚೂ ತಪ್ಪದೇ ಪಾಲಿಸುತಿದ್ದಾರೆ.
    ಅದರೇ ಪುತ್ತೂರಿನ ಕೋರ್ಟು ಮೈದಾನದಲ್ಲಿರುವ ಜವಳಿ ಮಳಿಗೆ ರಾಧ ಡ್ರೆಸಸ್ ನಲ್ಲಿ ಹಿಂದಿನ ಬಾಗಿಲಿನ ಮೂಲಕ ವ್ಯವಹಾರ ನಡೆಸುತ್ತಿರುವ ಮಾಹಿತಿ ಬಂದ ಹಿನ್ನಲೆಯಲ್ಲಿ ಪುತ್ತೂರು ಸಹಾಯಕ ಆಯುಕ್ತ ಯತೀಶ್ ಉಳ್ಳಾಲ, ಪುತ್ತೂರು ನಗರ ಸಭೆ ಆಯುಕ್ತೆ ರೂಪಾ ಟಿ ಶೆಟ್ಟಿ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ. ಈ ಸಂಬಂಧ ರಾಧ ಡ್ರೆಸಸ್ ನಲ್ಲಿ ಕೊವೀಡ್ ನಿಯಮಗಳನ್ನು ಉಲ್ಲಂಘಿಸಿ ವ್ಯಾಪಾರ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಎಚ್ಚರಿಕೆ ನೀಡಿದ ಅಧಿಕಾರಿಗಳು ಕೂಡಲೇ ವ್ಯವಹಾರ ನಿಲ್ಲಿಸುವಂತೆ ಸೂಚಿಸಿ ರೂ.10, 000 ದಂಡ ವಿಧಿಸಿದ್ದಾರೆ.
    ರಾಧ’ಸ್ ಗೆ ದಂಡ ಹಾಕುತ್ತಿರುವ ಎಸಿ, ನಗರಸಭಾ ಆಯುಕ್ತೆ
    ಅಲ್ಲದೇ ಹೊಟೇಲ್ ಹರಿಪ್ರಸಾದ್ , ಹೆಗ್ಡೆ ಪ್ಲಾಸ್ಟಿಕ್ ನಗರದ ಕೆ.ಎಸ್ ಅರ್ ಟಿ ಸಿ ಬಸ್ಸು ನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಜವಳಿ ಮಳಿಗೆ ಹ್ಯಾಬಿಟ್ಯೂಡ್ ಗೂ ನಗರಸಭೆ ಅಧಿಕಾರಿಗಳಿಗೆ ದಂಡ ವಿಧಿಸಿದ್ದಾರೆ
    ಪುತ್ತೂರು ನಗರಸಭೆಯ ಹಿರಿಯ ಆರೋಗ್ಯ ನಿರೀಕ್ಷಕಿ ಶ್ವೇತಾ ಕಿರಣ್, ನಗರ ಸಭೆಯ ಸಿಬ್ಬಂದಿಗಳು ಹಾಗೂ ಕೋವಿಡ್ ಮಾರ್ಷಲ್‍ಗಳು ಕಾರ್ಯಾಚರಣೆಯಲ್ಲಿ ಸಹಕರಿಸಿದರು.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss