ಕಾರವಾರ: ಚಾರ್ಜರ್ ಬಾಯಲ್ಲಿ ಇಟ್ಟುಕೊಂಡು ಎಂಟು ತಿಂಗಳ ಹಸುಗೂಸು ದುರ್ಮರಣ ಹೊಂದಿರುವ ಘಟನೆ ಕಾರವಾರ ತಾಲೂಕಿನ ಸಿದ್ದರ ಗ್ರಾಮದಲ್ಲಿ ನಡೆದಿದೆ. ಎಂಟು ತಿಂಗಳ ಹಸುಗೂಸು ಸಾನಿಧ್ಯ ಮೃತ ಮಗುವಾಗಿದೆ. ಇಂದು ಬೆಳಗ್ಗೆ ಈ ಘಟನೆ ನಡೆದಿದ್ದು, ಮಗು ಹಾಸಿಗೆ ಮೇಲೆ ಮಲಗಿದ್ದ ವೇಳೆಯಲ್ಲಿ ಮಗು ಬಾಯಲ್ಲಿ ಮೊಬೈಲ್ ಚಾರ್ಜ್ರನ್ನು ಬಾಯಲ್ಲಿ ಇಟ್ಟುಕೊಂಡಿದೆ ಎನ್ನಲಾಗಿದೆ.
ಈ ನಡುವೆ ಇದನ್ನು ನೋಡಿದ ಮಗುವಿನ ತಾಯಿ ಕೂಡಲೇ ಗಂಡನಿಗೆ ಫೋನ್ ಮಾಡಿದ್ದಾರೆ. ಕೂಡಲೇ ತಂದೆ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸಮಯದಲ್ಲಿ ಮಗು ಸಾವನ್ನಪ್ಪಿದ್ದೇ ಎನ್ನಲಾಗಿದೆ. ಸ್ವಿಚ್ ಆಫ್ ಮಾಡದನ್ನು ಮರೆತಿದ್ದ ಪೋಶಕರಿಂದಲೇ ಈ ಘಟನೆಗೆ ಕಾರಣವ ಎನ್ನಲಾಗಿದೆ. ಸದ್ಯ ಮಗುವಿನ ಮೃತ ದೇಹವನ್ನು ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಸ್ಥಳಿಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ ಅಂತ ತಿಳಿದು ಬಂದಿದೆ.