Tuesday, October 22, 2024
spot_img
More

    Latest Posts

    ಬೆಳ್ತಂಗಡಿ; ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ; ಬಂಧಿತ ಸಂತೋಷ್ ರಾವ್ ರಿಂದ ಹಣ ಪಡೆಯದೇ ಮಾನವೀಯ ನೆಲೆಯಲ್ಲಿ ನ್ಯಾಯ ದೊರಕಿಸಿಕೊಟ್ಟ ಕರಾವಳಿಯ ಯುವ ವಕೀಲರು

    ಬೆಳ್ತಂಗಡಿ; ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ 11 ವರ್ಷಗಳ ಬಳಿಕ ಸಿಬಿಐ ನ್ಯಾಯಾಲಯ ಬಂಧಿತ ಸಂತೋಷ್‌ ರಾವ್‌ ನಿರ್ದೋಷಿ ತೀರ್ಪು ನೀಡಿದೆ. ಸೌಜನ್ಯ ಪ್ರಕರಣದಲ್ಲಿ ಸಂತೋಷ್ ರಾವ್ ಬಂಧನವಾಗುತ್ತಿದ್ದಂತೆ ಅವರು ನಿಜವಾದ ಆರೋಪಿ ಅಲ್ಲ ಅನ್ನೋ ಮಾತುಗಳು ಜೋರಾಗಿ ಕೇಳಿ ಬಂದಿತ್ತು. ಕೊನೆಗೆ 11 ವರ್ಷಗಳ ಬಳಿಕ ಸಂತೋಷ್ ರಾವ್ ನಿರಪರಾಧಿ ಎಂದು ತೀರ್ಪು ನೀಡಿದೆ. ಸಂತೋಷ್ ನಿರಪರಾಧಿ ಎಂದು ತೀರ್ಪು ಬರುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಯುವ ವಕೀಲ ಮೋಹಿತ್ ಕುಮಾರ್ ಹಾಗೂ ವಿಟ್ಲಯ ಪದ್ಯಾಣದ ವಕೀಲ ನವೀನ್ ಕುಮಾರ್. ಈ ಇಬ್ಬರು ಯುವ ವಕೀಲರು ಒಂದು ರೂಪಾಯಿ ಹಣ ಪಡಯದೇ ಸಂತೋಷ್ ರಾವ್ ಪರ ವಾದ ಮಾಡಿ ನಿರಪರಾಧಿಗೆ ನ್ಯಾಯ ಕೊಡಿಸಿದ್ದಾರೆ. ಆತ್ಯಾಚಾರ ಹಾಗೂ ಕೊಲೆಯಾದ ವೇಳೆ ಆರೋಪಿ ಸ್ಥಳದಲ್ಲಿ ಇರಲಿಲ್ಲ.ರೇಪ್ ಮಾಡಿರುವ ಬಗ್ಗೆ ವೈದ್ಯಕೀಯ ವರದಿ ಇರಲಿಲ್ಲ.ಎರಡು ದಿನದ ಬಳಿಕ ಆರೋಪಿಯನ್ನು ಬಂಧಿಸಲಾಗಿತ್ತು  ಹೀಗೆ ಹಲವು ಅಂಶಗಳನ್ನು ವಕೀಲರು  ಕೋರ್ಟ್ ಗಮನಕ್ಕೆ ತಂದಿದ್ದರು.ಅಲ್ಲದೇ ಸಂತೋಷ್‌ ರಾವ್‌ ಕೊಲೆ ಮಾಡಿದ್ದಾನೆ ಎಂಬುದಕ್ಕೆ ಯಾವುದೇ ಸಾಕ್ಷ್ಯಗಳು ಇಲ್ಲ ಎಂದು ವಾದ ಮಂಡಿಸಿದ್ದರು. ಅದರಂತೆ ಸಾಕ್ಷ್ಯಾಧಾರಗಳು ಇಲ್ಲದೇ ಇರೋದರಿಂದ ಸಂತೋಷ್ ರಾವ್ ರನ್ನು ಬಿಡುಗಡೆಗೊಳಿಸಲಾಗಿದೆ. ಇದೀಗ ಯುವ ಯುವಕರ ಮಾನವೀಯತೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss