ಕಾಪು:ಬಸ್ ನಿಲ್ದಾಣದಲ್ಲೇ ಕುಸಿದು ಬಿದ್ದು ಹೃದಯಾಘಾತದಿಂದ ಮಹಿಳೆಯೋರ್ವರು ಮೃತಪಟ್ಟ ಘಟನೆ ಉದ್ಯಾವರ ಬಸ್ ನಿಲ್ಧಾಣದಲ್ಲಿ ನಡೆದಿದೆ.
ಉದ್ಯಾವರ ಗುಡ್ಡೆಯಂಗಡಿ ನಿವಾಸಿ ವಸಂತಿ (55) ಮೃತ ಮಹಿಳೆ. ಇವರು ಕಟ್ಟಿಂಗೇರಿ ಯೂನಿಯನ್ ಬ್ಯಾಂಕ್ನ ಮಹಿಳಾ ಸಿಬಂದಿಯಾಗಿದ್ದಾರೆ.
ವಸಂತಿ ಬೆಳಗ್ಗೆ 8.30ಕ್ಕೆ ಬ್ಯಾಂಕ್ಗೆ ಹೋಗಲು ಉದ್ಯಾವರದ ಗುಡ್ಡೆಯಂಗಡಿ ಬಸ್ ನಿಲ್ದಾಣದಲ್ಲಿ ಬಸ್ಗೆ ಕಾಯುತ್ತಿದ್ದಾಗ ಕುಸಿದು ಬಿದ್ದಿದ್ದರು. ಸ್ಥಳೀಯರು ಅವರನ್ನು ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.