ಮಂಗಳೂರು: ಹನಿಟ್ರಾಪ್ ಆರೋಪದಲ್ಲಿ ಯುವತಿಯೋರ್ವಳನ್ನು ಪುತ್ತೂರು ಗ್ರಾಮಾಂತರ ಪೊಲೀಸರು ಇಂದು ಬಂಧಿಸಿದ್ದಾರೆ.
ಯುವತಿಯು ಪುತ್ತೂರಿನಲ್ಲಿ ಸೇಲ್ಸ್ ಮ್ಯಾನ್ ಒಬ್ಬರಿಗೆ ಹನಿಟ್ರಾಪ್ ಮಾಡಿ ಬಳಿಕ 30 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಕಾರ್ಕಳದವಳೆಂದು ಪರಿಚಯ ಮಾಡಿಕೊಂಡಿದ್ದ ತನಿಶಾ ಎಂಬಾಕೆಯನ್ನು ಬಂಧಿಸಲಾಗಿದೆ. ಈ ತಂಡದಲ್ಲಿದ್ದ ಹನೀಫ್, ಮಹಮ್ಮದ್ ಕುಂಇ, ಶಾಫಿ, ಅಝರ್, ಸಯೀದ್ ಮೋನು, ನಾಸೀರ್ ಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.
ಯುವತಿಯು ಯುವಕನ ಜೊತೆ ವಿಡಿಯೋ ಕಾಲ್ ಮೂಲಕ ನಗ್ನವಾಗಿ ಮಾತುಕತೆ ನಡೆಸಿ, ಬಳಿಕ ಅದನ್ನ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಳು. ಈ ನಿಟ್ಟಿನಲ್ಲಿ ಪುತ್ತೂರಿನ ವ್ಯಕ್ತಿ ದೂರು ದಾಖಲಿಸಿದ್ದು, ಪ್ರಕರಣದ ಜಾಡು ಹಿಡಿದ ಪೊಲೀಸರಿಗೆ ಯುವತಿ ಸಿಕ್ಕಿ ಬಿದ್ದಾಳೆ.