ಯುವಕರು ವಾರಕ್ಕೆ 70 ತಾಸು ಕೆಲಸ ಮಾಡಬೇಕೆಂಬ ಇನ್ಫೊಸಿಸ್ ನಾರಾಯಣ ಮೂರ್ತಿ ಹೇಳಿಕೆಗೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ. ಮೂರ್ತಿಯರ ಈ ಮಾತಿಗೆ ಪ್ರತಿಕ್ರಿಯಿಸಿದ ಹೃದ್ರೋಗ ತಜ್ಞ ದೀಪಕ್ ಕೃಷ್ಣಮೂರ್ತಿ ವಾರಕ್ಕೆ 70 ಗಂಟೆ ದುಡುಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದಿದ್ದಾರೆ. ಹಾಗೂ ವಾರದ 70 ಗಂಟೆ ಒಂದೆಡೆ ಕೆಲಸ ಮಾಡುವುದರಿಂದ ಯುವ ಉದ್ಯೋಗಿಗಳಿಗೆ ವ್ಯಾಯಾಮಾ,ಮನರಂಜನೆಯಂತಹ ಚಟುವಟಿಗಳನ್ನು ಮಾಡಲು ಸಮಯಾವಕಾಶವೇ ಸಿಗುವುದಿಲ್ಲ ಇದರಿಂದ ಅತೀ ಹೆಚ್ಚು ಒತ್ತಡಕ್ಕೆ ಒಳಗಾಗಿ ಅವರಿಗೆ ಹಾರ್ಟ್ ಅಟ್ಯಾಕ್ ಆಗುವವ ಸಾಧ್ಯತೆ ಇದೆ ಎಂದಿದ್ದಾರೆ. ಇತ್ತೀಚ್ಚಿನ ದಿನಗಳಲ್ಲಿ ಯುವ ಸಮೂಹವೇ ಹೆಚ್ಚಾಗಿ ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ ಇದಕ್ಕೆ ಸಾಕಷ್ಟು ವರದಿಗಳು ಇವೆ. ಹೀಗಾಗಲು ಕಾರಣ ಅತೀಯಾದ ಒತ್ತಡ ಇನ್ನು ಇತರರಿಗೆ ಹೊಲಿಸಿದ್ರೆ ಯುವಕರಲ್ಲಿಯೇ ಹೃದಯಾಘಾತ ಹೆಚ್ಚುತ್ತಿದೆ ಎಂದು ತಮ್ಮ ಅನುಭವವನ್ನು ಹಂಚಿಕೊಳ್ಳುವ ಮೂಲಕ ನಾರಾಯಣ ಮೂರ್ತಿ ಅವರ ಅಮಾತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.
©2021 Tulunada Surya | Developed by CuriousLabs