ಬೆಳ್ತಂಗಡಿ: ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಏಳು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡು ತಿರುಗುತ್ತಿದ್ದ ಆರೋಪಿಯನ್ನು ವೇಣೂರು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಸುಳ್ಯದ ಐವತ್ತೊಕ್ಲು ಗ್ರಾಮದ ಪಂಜದ ನೆಲ್ಲಿಕಟ್ಟೆ ನಿವಾಸಿ ಮಹಮ್ಮದ್ ಶರೀಫ್(43) ಎಂದು ಗುರುತಿಸಲಾಗಿದೆ.ಈತನ ವಿರುದ್ದ ವೇಣೂರು ಪೊಲೀಸ್ ಠಾಣೆಯಲ್ಲಿ 2016 ರಲ್ಲಿ ದಾಖಲಾದ ಕಳ್ಳತನ ಪ್ರಕರಣ ದಾಖಲಾಗಿತ್ತು. ಬೆಳ್ತಂಗಡಿ ನ್ಯಾಯಲಯ ಈತನ ವಿರುದ್ದ ವಾರೆಂಟ್ ಹೊರಡಿಸಿದ್ದು, ಕೋರ್ಟ್ ಗೆ ಹಾಜರಾದದೇ ಸುಮಾರು 6 ರಿಂದ 7 ವರ್ಷಗಳಿಂದ ತನ್ನ ಸ್ವಂತ ವಿಳಾಸದಲ್ಲಿ ವಾಸ ಮಾಡದೆ ವಿವಿಧ ಕಡೆಗಳಲ್ಲಿ ತಲೆಮರೆಸಿಕೊಂಡಿದ್ದ.ಈತನನ್ನು ಪತ್ತೆ ಹಚ್ಚಿದ ವೇಣೂರು ಪೊಲೀಸರು ವಿಟ್ಲದ ಸಾರಡ್ಕ ಎಂಬಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.