ಬಂಟ್ವಾಳ: ಕಳ್ಳರು ಮನೆಗೆ ನುಗ್ಗಿ ಚಿನ್ನಾಭರಣ, ಬೆಳ್ಳಿ ವಸ್ತುಗಳು, ನಗದು ಕಳ್ಳತನ ಮಾಡಿದ ಘಟನೆ ಸಜಿಪ ಮುನ್ನೂರು ಸಮೀಪದ ಬಾಡಿಗೆ ಮನೆಯೊಂದರಲ್ಲಿ ಸೆ.1ರಂದು ನಡೆದಿದೆ. ಮನೆಯಲ್ಲಿ ವಾಸವಾಗಿದ್ದ ಮೈಕಲ್ ಡಿಸೋಜಾ ಬೆಳಗ್ಗೆ ಬೀಗ ಹಾಕಿ ಮಕ್ಕಳೊಂದಿಗೆ ತೆರಳಿದ್ದರು. ಬಳಿಕ ಮಧ್ಯಾಹ್ನ 2.45ರ ಸುಮಾರಿಗೆ ಮೈಕಲ್ ಮಗಳು ಮನೆ ಬಂದು ನೋಡಿದಾಗ ಬಾಗಿಲು ತೆರೆದಿದ್ದು, ಬೀರುವಿನಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡು ಬಂದಿದೆ.
ಘಟನೆಯ ಬಗ್ಗೆ ಮಗಳಿಂದ ತಿಳಿದ ಮೈಕೆಲ್ ಮನೆಗೆ ಹಿಂತಿರುಗಿ ನೋಡಿದಾಗ ಕಳ್ಳರು ಮನೆಗೆ ನುಗ್ಗಿ 5.36 ಲಕ್ಷ (115 ಗ್ರಾಂ ತೂಕ), ಬೆಳ್ಳಿ ವಸ್ತುಗಳು ಮತ್ತು 3000 ರೂ ಹಣವನ್ನು ಕಳ್ಳರು ದೋಚಿದ್ದಾರೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.