ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಿಲೇವಾರಿ ನಿರ್ವಹಿಸುತ್ತಿದ್ದ ಮೆ. ಆ್ಯಂಟನಿ ವೇಸ್ಟ್ ಹ್ಯಾಂಡಲಿಂಗ್ ಸೆಲ್ ಪೈ. ಲಿಮಿಟೆಡ್‌ನಲ್ಲಿ ಹೊರಗುತ್ತಿಯಡಿ ಕಾರ್ಯನಿರ್ವಹಿಸುತ್ತಿದ್ದ 448 ಪೌರ ಕಾರ್ಮಿಕರನ್ನು ನೇರ ಪಾವತಿಯಡಿ ನ.1ರಿಂದ ಅನ್ವಯವಾಗುವಂತೆ ನೇಮಕಕ್ಕೆ ಪಾಲಿಕೆ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಯಿತು. ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಈ ಅನುಮೋದನೆ ದೊರೆಯಿತು. . ನಗರದಲ್ಲಿ ತ್ಯಾಜ್ಯ ನಿರ್ವಹಣೆಯ ಗುತ್ತಿಗೆ ವಹಿಸಿಕೊಂಡಿದ್ದ ಆ್ಯಂಟನಿ ಸಂಸ್ಥೆಯ ಅವಧಿ ಮುಗಿದಿದ್ದು, ಹೊಸ ವ್ಯವಸ್ಥೆ ಜಾರಿ ಆಗುವವರೆಗೆ ಅವಧಿ ವಿಸ್ತರಿಸಲಾಗಿತ್ತು. ಈ ನಡುವೆ ಹೊಸ ವ್ಯವಸ್ಥೆಗಾಗಿ ಪಾಲಿಕೆ ವತಿಯಿಂದ ಅಗತ್ಯ ವಾಹನ, ಯಂತ್ರೋಪಕರಣಗಳನ್ನು ಖರೀದಿಸಲಾಗಿದೆ. ಅದರಂತೆ ನೇರಪಾವತಿಯ 394 ಹಾಗೂ ಖಾಲಿ ಇರುವ 71 ಹುದ್ದೆ ಸೇರಿ ಒಟ್ಟು 465 ಹುದ್ದೆಗಳಿಗೆ ಈಗಾಗಲೇ ಆ್ಯಂಟನಿ ಸಂಸ್ಥೆಯಲ್ಲಿ ಹೊರಗುತ್ತಿಗೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರನ್ನು ನೇಮಕಗೊಳಿಸಲು ನಿರ್ಧರಿಸಲಾಗಿತ್ತು.
©2021 Tulunada Surya | Developed by CuriousLabs