ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ಪ್ರಮುಖ ಸಂಸ್ಥೆಗಳ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದ ಮೂರು ಯೂಟ್ಯೂಬ್ ಚಾನೆಲ್‌ಗಳನ್ನು ಕೇಂದ್ರ ಸರ್ಕಾರ ಭೇದಿಸಿದೆ.
ನ್ಯೂಸ್ ಹೆಡ್‌ಲೈನ್ಸ್, ಸರ್ಕಾರಿ ಅಪ್‌ಡೇಟ್ ಮತ್ತು ಆಜ್ ತಕ್ ಲೈವ್ ಈ ಮೂರು ಯೂಟ್ಯೂಬ್ ಚಾನೆಲ್ ಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡಲಾಗುತ್ತಿದ್ದು, ಈ ಮೂರು ಚಾನೆಲ್‌ಗಳು ಬರೋಬ್ಬರಿ 33 ಲಕ್ಷ ಚಂದಾದಾರರನ್ನುಹೊಂದಿದ್ದವು ಎಂದು ತಿಳಿದು ಬಂದಿದೆ.ಇನ್ನು ಈ ಮೂರು ಚಾನೆಲ್‌ಗಳ ವಿರುದ್ಧ ಮಾಹಿತಿ ಪ್ರಸಾರ ಮಾಡುವ ಸರ್ಕಾರದ ನೋಡಲ್ ಏಜೆನ್ಸಿಯಾದ ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋದ ಸತ್ಯ ಪರಿಶೀಲನಾ ಘಟಕ ತನಿಖೆ ನಡೆಸಿದೆ ಎಂದು ಸರ್ಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
