ಬಂಟ್ವಾಳ : ಬಂಟ್ವಾಳ ತಾ.ಕಾವಳಮೂಡೂರು ಗ್ರಾಮದ ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಧಾನದಲ್ಲಿ ಲಕ್ಷದೀಪೋತ್ಸವ ರಂಗಪೂಜೆ ಮತ್ತು ವಿಶೇಷ ಪೂಜೆ ನ.23ರಂದು ನಡೆಯಲಿದೆ.

ಸಂಜೆ ಈಶ್ವರ ಸನ್ನಿಧಿಯಲ್ಲಿ ತುಲಾಭಾರ ಸೇವೆ, ರಂಗಪೂಜೆ, ಬಲ್ಲೋಡಿ ಮಾಗಣೆ ಗುತ್ತಿನಿಂದ ಕೊಡಮಣಿತ್ತಾಯ ದೈವದ ಭಂಡಾರ ಆಗಮನ,ಲಕ್ಷದೀಪೋತ್ಸವದ ನಿಮಿತ್ತ ಕಾರಿಂಜೇಶ್ವರ ದೇವರು ಪಾರ್ವತಿ ಸನ್ನಿಧಿಗೆ ಆಗಮನ. ಕೊಡಮಣಿತ್ತಾಯ ದೈವದ ನೇಮ, ಪಾರ್ವತಿ ಪರಮೇಶ್ವರ ದೇವರ ಉತ್ಸವ ನಡೆಯಲಿದೆ. ಸಂಜೆ 7 ರಿಂದ ಭಕ್ತಿ ಗಾನ ಸಂಭ್ರಮ ನಡೆಯಲಿದೆ. ರಾತ್ರಿ 7 ರಿಂದ ಅನ್ನಸಂತರ್ಪಣೆ, ರಾತ್ರಿ ಗಂಟೆ 10ರಿಂದ ಭಕ್ತಾಧಿಗಳಿಂದ 50 ಸಾವಿರಕ್ಕೂ ಅಧಿಕ ಹಣತೆಗಳ ಪ್ರಜ್ವಲನ ನಡೆಯಲಿದೆ ಎಂದು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಚಂದ್ರಶೇಖರ್ ಶೆಟ್ಟಿ ಪುಲಿಮಜಲು ತಿಳಿಸಿದ್ದಾರೆ.
